ಟ್ಯಾಂಕರ್‌ ಮಾಫಿಯಾಗೆ ಕಡಿವಾಣ ಹಾಕಲು ಮುಂದಾದ ಬಿಬಿಎಂಪಿ: ಮಾರ್ಚ್‌ 7 ರೊಳಗೆ ನೋಂದಾಯಿಸಿಕೊಳ್ಳಲು ಆದೇಶ.

Bengaluru: ಬೇಸಿಗೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಕುಡಿಯುವ (Break for Tanker Mafia-BBMP) ನೀರಿಗೆ ಉಂಟಾಗಿರುವ ಹಾಹಾಕಾರವನ್ನೇ

ಬಂಡವಾಳವಾಗಿಸಿಕೊಂಡಿರುವ ಖಾಸಗಿ ಟ್ಯಾಂಕರ್‌ (Private Tanker) ಮಾಲೀಕರು, ನೀರಿನ ದರವನ್ನು ಮನಸೋಇಚ್ಛೆ ಹೆಚ್ಚಿಸಿ ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿರುವ

ಬಗ್ಗೆ ಆರೋಪಗಳು ಕೇಳಿ ಬಂದಿವೆ. ನೀರಿನ ಅಭಾವವಿರುವ ಪ್ರದೇಶಗಳಲ್ಲಿ ಟ್ಯಾಂಕರ್‌ ನೀರನ್ನು 1000ರೂ.ಗಿಂತಲೂ ಅಧಿಕ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಟ್ಯಾಂಕರ್‌ ಮಾಫಿಯಾಗೆ (Tanker Mafia) ಕಡಿವಾಣ ಹಾಕಲು ಬಿಬಿಎಂಪಿಯು, ಟ್ಯಾಂಕರ್‌ ನೀರಿಗೆ ದರ ನಿಗದಿ ಮಾಡಲು ಮುಂದಾಗಿದೆ. ಮಾ.1 ರಿಂದ 7ರೊಳಗೆ

ಟ್ಯಾಂಕರ್‌ ಮಾಲೀಕರು ಸ್ವಯಂ ನೋಂದಣಿ ಮಾಡಿಕೊಳ್ಳಲು ಗಡುವು ನೀಡಿದೆ. ನೋಂದಣಿ ಮಾಡಿಕೊಳ್ಳದ ಟ್ಯಾಂಕರ್‌ಗಳನ್ನು ವಶಕ್ಕೆ ಪಡೆಯುವುದಾಗಿ ಎಚ್ಚರಿಕೆ ನೀಡಲಾಗಿದೆ.

ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಸಂಬಂಧ ಬುಧವಾರ ಜಲಮಂಡಳಿ ಅಧ್ಯಕ್ಷರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಬಿಬಿಎಂಪಿ (BBMP) ಮುಖ್ಯ ಆಯುಕ್ತ ತುಷಾರ್‌

ಗಿರಿನಾಥ್‌ (Tushar Girinath), ಖಾಸಗಿ ಟ್ಯಾಂಕರ್‌ ಮಾಲೀಕರು, ದುಬಾರಿ ದರದಲ್ಲಿ ನೀರು ಮಾರಾಟ ಮಾಡುತ್ತಿರುವ ಕುರಿತು ಸಾಕಷ್ಟು ದೂರುಗಳು ಬಂದಿವೆ. ಹೀಗಾಗಿ,

ಟ್ಯಾಂಕರ್‌ಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಮಾ.1ರೊಳಗೆ ಟ್ಯಾಂಕರ್‌ ಮಾಲೀಕರ ಸಭೆ (Break for Tanker Mafia-BBMP) ಕರೆದು ಚರ್ಚಿಸಲಾಗುವುದು.

ನಗರದಲ್ಲಿ 3500 ಖಾಸಗಿ ಟ್ಯಾಂಕರ್‌ಗಳಿದ್ದು, ಬಹುತೇಕರು ಉದ್ದಿಮೆ ಪರವಾನಗಿ ಪಡೆದಿಲ್ಲ. ಹಾಗಾಗಿ, ನೀರಿನ ಮೂಲ ಮತ್ತು ದರದ ಬಗ್ಗೆ ಮಾಹಿತಿ ಪಡೆದು, ಯಾರಿಗೂ

ಹೊರೆಯಾಗದಂತೆ ದರ ನಿಗದಿಪಡಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನು ಓದಿ: ಟ್ಯಾಂಕರ್‌ ಮಾಫಿಯಾಗೆ ಕಡಿವಾಣ ಹಾಕಲು ಮುಂದಾದ ಬಿಬಿಎಂಪಿ: ಮಾರ್ಚ್‌ 7 ರೊಳಗೆ ನೋಂದಾಯಿಸಿಕೊಳ್ಳಲು ಆದೇಶ.

Exit mobile version