ಬ್ರಿಸ್ಬೇನ್ ಟೆಸ್ಟ್: ಭಾರತ ಮೊದಲ ಇನ್ನಿಂಗ್ಸ್ 336ಕ್ಕೆ ಆಲೌಟ್: ಕುತೂಹಲ ಘಟ್ಟದತ್ತ ಪಂದ್ಯ

ಬ್ರಿಸ್ಬೇನ್, ಜ. 18: ಅತಿಥೇಯ ಆಸ್ಟ್ರೇಲಿಯಾ ಹಾಗೂ ಪ್ರವಾಸಿ ಭಾರತದ ನಡುವಿನ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಕುತೂಹಲ ಘಟ್ಟದತ್ತ ಮುಖಮಾಡಿದೆ.‌

ಇಲ್ಲಿನ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದಾಟದಲ್ಲಿ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನದ ನಡುವೆಯೂ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 336 ರನ್‌ಗಳಿಗೆ ಆಲೌಟ್ ಆಗುವ ಮೂಲಕ 33 ರನ್‌ಗಳ ಹಿನ್ನಡೆ ಅನುಭವಿಸಿತು. ಭಾರತದ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ವಾಷಿಂಗ್ಟನ್ ಸುಂದರ್(62) ಹಾಗೂ ಶಾರ್ದೂಲ್ ಠಾಕೂರ್(67) ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. 

ಆಸ್ಟ್ರೇಲಿಯಾ ಪರ ಜೋಶ್ ಹೆಜಲ್ವುಡ್ 5 ವಿಕೆಟ್ ಪಡೆದು ಮಿಂಚಿದರೆ. ಮಿಚೆಲ್ ಸ್ಟಾರ್ಕ್ ಹಾಗೂ ಪ್ಯಾಟ್ ಕಮಿನ್ಸ್ ತಲಾ 2 ವಿಕೆಟ್ ಪಡೆದರು. ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಮೂರನೇ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 21 ರನ್‌ಗಳಿಸುವ ಮೂಲಕ 54 ರನ್‌ಗಳ ಮುನ್ನಡೆ ಸಾಧಿಸಿದೆ. ಆಸೀಸ್ ಪರ ವಾರ್ನರ್ 20* ಹಾಗೂ ಹ್ಯಾರಿಸ್ 1* ರನ್‌ಗಳಿಸಿ ಕಣದಲ್ಲಿದ್ದಾರೆ.

Exit mobile version