ಚಿತ್ರದುರ್ಗ, ಜು. 19: ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮಗು ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೋಮವಾರ ನಸುಕಿನ ವೇಳೆ ಸಂಭವಿಸಿದೆ.
ಚಿತ್ರದುರ್ಗದ ಐಮಂಗಲ ಗ್ರಾಮ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ಘಟನೆ ನಡೆದಿದ್ದು, ಬೆಂಗಳೂರಿಗೆ ತೆರಳುತ್ತಿದ್ದ ಕಾರಿನಲ್ಲಿದ್ದ ಐವರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ. ಗಾಯಗೊಂಡ ಇಬ್ಬರನ್ನ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೃತಪಟ್ಟ ಮೂರು ಜನರೂ ರಾಜಸ್ಥಾನ ಮೂಲದವರು ಎನ್ನಲಾಗಿದ್ದು, ಈವರೆಗೆ ಮೃತರ ಬಗ್ಗೆ ನಿಖರ ಗುರುತು ಪತ್ತೆ ಆಗಿಲ್ಲ. ಇವರು ಬ್ರಿಜಾ ಕಾರಿಲ್ಲಿ ಪ್ರಯಾಣ ಮಾಡುತ್ತಿದ್ದರು. ರಾಜಸ್ಥಾನದ ಜೈರಾಮ್ ( 28) ಹಾಗೂ ಅವರ ಪತ್ನಿ ಸುಶೀಲ (26), ಪುತ್ರ ಆಕಾಶ್ (4 ) ಮೃತರು. ರಾಜಾರಾಮ್ (28) ಹಾಗೂ ಕರಣ್ (8) ಎಂಬುವರಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.