2024 ಕೇಂದ್ರ ಬಜೆಟ್: ಆರ್ಥಿಕ ಶಿಸ್ತಿಗೆ ಆದ್ಯತೆ, ಜನಪ್ರಿಯ ಯೋಜನೆಗಳಿಲ್ಲ, ತೆರಿಗೆ ಯತಾಸ್ಥಿತಿ

New Delhi: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ #NirmalaSitaraman ಅವರು ತಮ್ಮ ಸತತ ಆರನೇ ಬಜೆಟ್ ಅನ್ನು ಇಂದು ಸಂಸತ್ತಿನಲ್ಲಿ ಮಂಡಿಸಿದ್ದು, ಆದಾಯ ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ದೇಶದ ಆರ್ಥಿಕ ಶಿಸ್ತಿಗೆ ಪ್ರಮುಖ ಆದ್ಯತೆ ನೀಡಿದ್ದು, ಯಾವುದೇ ಜನಪ್ರಿಯ ಯೋಜನೆಯನ್ನು ಘೋಷಣೆ ಮಾಡಿಲ್ಲ.

ಕಳೆದ ಬಜೆಟ್ (Budget) 2023ರಲ್ಲಿ, ಮಧ್ಯಮ ವರ್ಗವನ್ನು ಗುರಿಯಾಗಿಟ್ಟುಕೊಂಡು ವೈಯಕ್ತಿಕ ಆದಾಯ ತೆರಿಗೆಗೆ ಹಲವಾರು ಬದಲಾವಣೆಗಳನ್ನು ಹಣಕಾಸು ಸಚಿವೆ ಸೀತಾರಾಮನ್ ಘೋಷಿಸಿದ್ದರು. ಹೊಸ ತೆರಿಗೆ ಪದ್ಧತಿಯಲ್ಲಿ ರಿಯಾಯಿತಿ ಮಿತಿಯನ್ನು 5 ಲಕ್ಷದಿಂದ 7 ಲಕ್ಷಕ್ಕೆ ಏರಿಸಲಾಗಿದೆ. ಹೀಗಾಗಿ, ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವವರು ವಾರ್ಷಿಕ ಆದಾಯ ರೂ 7 ಲಕ್ಷದವರೆಗೆ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.

ಇನ್ನು ಈ ಬಜೆಟ್ ಅಧಿವೇಶನವು ಜನವರಿ (January) 31 ರಂದು ಪ್ರಾರಂಭವಾಗಿದ್ದು ಫೆಬ್ರವರಿ 9 ರವರೆಗೆ ಮುಂದುವರಿಯುತ್ತದೆ. ಮೇ ವೇಳೆಗೆ ಲೋಕಸಭೆ ಚುನಾವಣೆಗಳು ನಡೆಯಲಿದ್ದು, ಹೊಸ ಚುನಾಯಿತ ಸರ್ಕಾರವು ಜುಲೈನಲ್ಲಿ ಪೂರ್ಣ ಬಜೆಟ್ ಅನ್ನು ಮಂಡಿಸುತ್ತದೆ.

2024ರ ಬಜೆಟ್ನ ಹೊಸ ಆದಾಯ ತೆರಿಗೆ ಸ್ಲ್ಯಾಬ್ಗಳು:

3 ಲಕ್ಷದವರೆಗೆ ಆದಾಯ – ತೆರಿಗೆ ಇಲ್ಲ
ರೂ 3–6 ಲಕ್ಷದ ನಡುವಿನ ಆದಾಯ – 5% ತೆರಿಗೆ (ವಿಭಾಗ 87A ಅಡಿಯಲ್ಲಿ ತೆರಿಗೆ ರಿಯಾಯಿತಿ ಲಭ್ಯವಿದೆ)
6–9 ಲಕ್ಷದ ನಡುವಿನ ಆದಾಯ – 10% ತೆರಿಗೆ (ಸೆಕ್ಷನ್ 87A ಅಡಿಯಲ್ಲಿ ತೆರಿಗೆ ರಿಯಾಯಿತಿ ರೂ 7 ಲಕ್ಷದವರೆಗೆ ಲಭ್ಯವಿದೆ)
9–12 ಲಕ್ಷದ ನಡುವಿನ ಆದಾಯ – 15% ತೆರಿಗೆ
12–15 ಲಕ್ಷದ ನಡುವಿನ ಆದಾಯ – 20% ತೆರಿಗೆ
15 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಆದಾಯಕ್ಕೆ ಶೇ.30 ತೆರಿಗೆ ವಿಧಿಸಲಾಗುತ್ತದೆ.

ಹಳೆಯ ಆದಾಯ ತೆರಿಗೆ ಸ್ಲ್ಯಾಬ್ಗಳು:
2.5 ಲಕ್ಷದವರೆಗಿನ ಆದಾಯ – ತೆರಿಗೆ ಇಲ್ಲ
2.5 ರಿಂದ 5 ಲಕ್ಷದ ನಡುವಿನ ಆದಾಯ – 5% ತೆರಿಗೆ
5 ಲಕ್ಷದಿಂದ 10 ಲಕ್ಷದವರೆಗಿನ ಆದಾಯ – 20% ತೆರಿಗೆ
10 ಲಕ್ಷಕ್ಕಿಂತ ಹೆಚ್ಚಿನ ಆದಾಯ – 30% ತೆರಿಗೆ

Exit mobile version