ಆನೇಕಲ್ ಕಾಲೇಜ್‌ ಒಂದರಲ್ಲೇ 60ಕ್ಕೂ ಹೆಚ್ಚು ವಿದ್ಯಾರ್ಥಿಗಳಿಕೆ ಕೊರೊನಾ

ಬೆಂಗಳೂರು ಸೆ 29 : ಆನೇಕಲ್ ತಾಲೂಕಿನ ಒಂದೇ ಕಾಲೇಜಿನಲ್ಲಿ ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಇನ್ನೂ 105 ವಿದ್ಯಾರ್ಥಿಗಳ ವರದಿ ಬರಬೇಕಿದ್ದು ಆತಂಕದ ವಾತಾವರಣ ನಿರ್ಮಾಣವಾಗಿದೆ.

ಆನೆಕಲ್ ತಾಲೂಕಿನ ಹುಸ್ಕೂರು ಸಮೀಪದ ಚೈತನ್ಯ ರೆಸಿಡೆನ್ಸಿಯಲ್ ಕಾಲೇಜಿನ 60 ವಿದ್ಯಾರ್ಥಿಗಳಿಗೆ ಕೋವಿಚ್ ದೃಢಪಟ್ಟಿದ್ದು, ಇನ್ನೂ 105 ವಿದ್ಯಾರ್ಥಿಗಳ ಪರೀಕ್ಷೆ ವರದಿ ಬರಬೇಕಿದೆ. ಕಾಲೇಜಿನ ಹಾಸ್ಟೆಲ್‌ನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳಿಗೆ ಭಾನುವಾರ ಜ್ವರ ಕಾಣಿಸಿಕೊಂಡಿತ್ತು. ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಬಳ್ಳಾರಿಯ ವಿದ್ಯಾರ್ಥಿನಿಯೊಬ್ಬಳಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಹೀಗಾಗಿ, ಕಾಲೇಜಿನ ಎಲ್ಲ 400 ವಿದ್ಯಾರ್ಥಿಗಳಿಗೆ ಕೋವಿಡ್ ಆರ್‌ಟಿ ಪಿಸಿಆರ್‌ ಹಾಗೂ ಬ್ಯಾಟ್ ಮಾದರಿಯಲ್ಲಿ ಪರೀಕ್ಷೆ ನಡೆಸಲಾಗಿದೆ. ಅವರಲ್ಲಿ 59 ಮಂದಿಗೆ ಸೋಂಕು ತಗುಲಿರುವುದು ಮಂಗಳವಾರ ದೃಢಪಟ್ಟಿದೆ. 105 ವಿದ್ಯಾರ್ಥಿಗಳ ಪರೀಕ್ಷಾ ವರದಿ ಇನ್ನಷ್ಟೇ ಬರಬೇಕಿದೆ

ಕೊರನಾ ಪಾಸಿಟಿವ್ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ  ಅಕ್ಟೋಬರ್ 20ರವರೆಗೆ ಕಾಲೇಜ್ ಅನ್ನು ಬಂದ್ ಮಾಡಲಾಗಿದೆ. ಪ್ರಾಧ್ಯಾಪಕರು ಹಾಗೂ ಸಿಬ್ಬಂದಿಗೂ ಪರೀಕ್ಷೆ ನಡೆಸಲಾಗಿದ್ದು, ಅವರು ಸೋಂಕಿತರಾಗಿಲ್ಲ ಎನ್ನುವುದು ದೃಢಪಟ್ಟಿದೆ. ಬಹುತೇಕ ಕೋವಿಡ್ ಪೀಡಿತರಿಗೆ ಲಕ್ಷಣಗಳು ಬಹಿರಂಗವಾಗಿ ಗೋಚರಿಸದಿರುವುದರಿಂದ ವಸತಿ ನಿಲಯದಲ್ಲಿಯೇ ಆರೈಕೆಗೆ ವ್ಯವಸ್ಥೆ ಮಾಡಲಾಗಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ದೃಢಪಟ್ಟಿರುವುದರಿಂದ ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಿ. ಶ್ರೀನಿವಾಸ್, ತಾಲ್ಲೂಕು ವೈದ್ಯಾಧಿಕಾರಿ ಡಾ.ವಿನಯ್ ನೇತೃತ್ವದ ಸಿಬ್ಬಂದಿ ತಂಡ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿತು. ಎಲ್ಲಾ ವಿದ್ಯಾರ್ಥಿಗಳಿಗೂ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಕೆಲವರ ವರದಿ ಬರಬೇಕಿದೆ. ಸೋಂಕು ನಿವಾರಕ ದ್ರಾವಣದಿಂದ ಕಾಲೇಜನ್ನು ಸ್ವಚ್ಛಪಡಿಸಲಾಗಿದೆ. ಸೋಂಕಿತರಾದವರೆಲ್ಲರೂ ವಿದ್ಯಾರ್ಥಿನಿಗಳಾಗಿ, ಬಹುತೇಕರಿಗೆ ಲಕ್ಷಣಗಳು ಗೋಚರಿಸಿಲ್ಲ. ಹಾಗಾಗಿ, ಕಾಲೇಜಿನ ವಸತಿ ನಿಲಯದಲ್ಲಿಯೇ ಆರೈಕೆಗೆ ಒಳಪಡಿಸಲಾಗಿದೆ. ಕೆಲ ಪಾಲಕರು ಮಕ್ಕಳನ್ನು ಮನೆ ಆರೈಕೆಗೆ ಕರೆದೊಯ್ದಿದ್ದಾರೆ. ಸಂಬಂಧಪಟ್ಟ ಜಿಲ್ಲೆಗಳಿಗೂ ಮಾಹಿತಿ ನೀಡಲಾಗಿದೆ ಎಂದು ಡಾ.ಜಿ. ಶ್ರೀನಿವಾಸ್ ಅವರು ಮಾಹಿತಿ ತಿಳಿಸಿದ್ದಾರೆ.

Exit mobile version