ಚಾಮುಂಡೇಶ್ವರಿ ‘ಸಿನಿಘಮ’

ಕನ್ನಡ ಚಿತ್ರರಂಗದಲ್ಲಿರುವ ಮಂದಿಗೆ ಚಾಮುಂಡೇಶ್ವರಿ ಸ್ಟುಡಿಯೋ ಮಹಿಮೆ ತಿಳಿದೇ ಇರುತ್ತದೆ. ಡಾ.ರಾಜ್ ಕುಮಾರ್ ಅವರಿಂದ ಹಿಡಿದು ಇತ್ತೀಚಿನ ನಾಯಕರ ತನಕ ಹಲವರ ಸಿನಿಮಾಗಳ ಡಬ್ಬಿಂಗ್ ಮತ್ತಿತರ ಕೆಲಸ ಕಾರ್ಯಗಳು ಅಲ್ಲೇ ನಡೆಯುತ್ತವೆ. ಅಂಥ ಸ್ಟುಡಿಯೋಗೆ ಐವತ್ತು ವರ್ಷ ಪೂರ್ತಿಯಾಗಿ 51ಆರಂಭವಾಗಿದೆ. ಈ ಸಂದರ್ಭದಲ್ಲಿ ಚಾಮುಂಡೇಶ್ವರಿಯ ಮಾಲೀಕ ಸಡಗೋಪನ್ ಅವರೊಂದಿಗೆ ಕೈ ಜೋಡಿಸಿರುವ ನಿರ್ದೇಶಕ ಪ್ರಸನ್ನ ‘ಸಿನಿಘಮ’ ಎನ್ನುವ ವೆಬ್ಸೈಟ್ ಒಂದನ್ನು ಸಕ್ರಿಯಗೊಳಿಸಿದ್ದಾರೆ.

ಸಿನಿಘಮ ಎನ್ನುವ ಈ ವೆಬ್ಸೈಟ್ ಇತರ ಸಿನಿಮಾ ಸಾಮಾಜಿಕ ಜಾಲತಾಣಗಳಂತೆ ಸಿನಿಮಾ ಸುದ್ದಿಗಳನ್ನು, ಗಾಸಿಪ್ ಗಳನ್ನು ನೀಡುತ್ತದೆ. ಆದರೆ ಅದರ ಜೊತೆಯಲ್ಲಿ ಸಿನಿಮಾರಂಗದ ಪ್ರಮುಖ‌ ತಾರೆಯರನ್ನು, ತಂತ್ರಜ್ಞರನ್ನು ಸಂಪರ್ಕಿಸಿ ಅವರಿಂದ ಕೆಲಸ ಪಡೆಯಬೇಕಾದ ಅಗತ್ಯವಿದ್ದರೆ ಅದಕ್ಕೂ ಇಲ್ಲಿ ಅವಕಾಶ ಇದೆ. ಆದರೆ ಅದಕ್ಕಾಗಿ ನೀವು ವಾರ್ಷಿಕ ಶುಲ್ಕ 500ರೂ ಪಾವತಿಸಬೇಕಾಗುತ್ತದೆ.‌ ಅಲ್ಲಿ ನಿಮ್ಮ ಫೋನ್ ನಂಬರ್, ಇಮೇಲ್ ಐಡಿ, ಫೊಟೊ ಪಡೆದ ಬಳಿಕ ನಿಮ್ಮ ಸದಸ್ಯತ್ವ ದಾಖಲಾಗುತ್ತದೆ. ಬಳಿಕ ನಿಮಗೆ ಯಾರ ಸಂಪರ್ಕ ಅಗತ್ಯ ಇದೆಯೋ ಅವರಿಗೆ ನಿಮ್ಮ ಮಾಹಿತಿಯನ್ನು ತಲುಪಿಸಲಾಗುತ್ತದೆ. ಅವರಿಗೆ ನಿಮ್ಮ ಕುರಿತಾದ ಮಾಹಿತಿ ತೃಪ್ತಿಯಾದಲ್ಲಿ ನಿಮ್ಮನ್ನು ಸಂಪರ್ಕಿಸಬಹುದು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ವಿತರಕ ವೆಂಕಟ್ ಗೌಡ ಮಾತನಾಡಿ, “ಮ್ಯಾಗಜಿನ್ ಮಾಡೋಣ ಎನ್ನುವುದು ನನ್ನ ಮೊದಲ ಕನಸಾಗಿತ್ತು. ಆದರೆ ಅದಕ್ಕೆ ಇಂಥದ್ದೊಂದು‌ ಡಿಜಿಟಲ್ ರೂಪ ತಂದುಕೊಟ್ಟವರು ಪ್ರಸನ್ನ ಅವರು” ಎಂದರು. ಶೂಟಿಂಗ್ ವೇಳೆ ಸ್ಥಳೀಯವಾಗಿ ಸಿಗಬಲ್ಲ ಪ್ರತಿಭೆಗಳ ಬಗ್ಗೆ ವೆಬ್ಸೈಟ್ ಮೂಲಕ‌ ಸಿಗುವ ಮಾಹಿತಿ ದೂರದ ಲೊಕೇಶನ್ ಗಳಲ್ಲಿ ಚಿತ್ರೀಕರಣ ನಡೆಸುವ ಸಮಯದಲ್ಲಿ ಉಪಯುಕ್ತವಾಗುತ್ತದೆ” ಎಂದರು. ನಿರ್ದೇಶಕ ಶಶಾಂಕ್ ಮಾತನಾಡಿ, “ನನ್ನ ಸಿನಿಮಾಗಳಲ್ಲಿ ಹೊಸಬರನ್ನು ಹೆಚ್ಚು ಬಳಸುತ್ತೇನೆ. ಆದರೆ ಹೊಸ ಕಲಾವಿದರನ್ನು ಹುಡುಕಲು ತುಂಬ ಕಷ್ಟವಾಗುತ್ತಿತ್ತು. ಬಾಲಿವುಡ್ ನಲ್ಲೆಲ್ಲ ಅದಕ್ಕಾಗಿ ಕಾಸ್ಟಿಂಗ್ ಡೈರೆಕ್ಟರ್ ಎನ್ನುವ ಪೋಸ್ಟ್ ಇದೆ. ಆದರೆ ಅಂಥ ಪೋಸ್ಟ್ ಕನ್ನಡದಲ್ಲಿ ‌ಇಲ್ಲ. ಹಾಗಾಗಿ ಸಿನಿಮಾ ಮೇಕರ್ಸ್ ಮತ್ತು ಪ್ರತಿಭೆಗಳಿಗೆ ಬ್ರಿಜ್ ಆಗುವ ಕೆಲಸವನ್ನು ಸಿಮಿಘಮ ಮಾಡಲಿರುವುದು ಖುಷಿಯ ವಿಚಾರ ಎಂದರು.

Exit mobile version