‘ಚಂದ್ರಲೇಖ ರಿಟರ್ನ್ಸ್’ ಚಿತ್ರಕ್ಕೆ ‌ಚಾಲನೆ.

ನಿರ್ದೇಶಕ ಓಂಪ್ರಕಾಶ್ ರಾವ್ ಅವರ ನಿರ್ದೇಶನದ ‘ಚಂದ್ರಲೇಖ’ ನಿಮಗೆ ನೆನಪಿರಬಹುದು. ಆ ಚಿತ್ರದ ಮೂಲಕ ಶಾನ್ವಿ ಶ್ರೀವತ್ಸ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ಇದೀಗ ‘ಚಂದ್ರಲೇಖ ರಿಟರ್ನ್ಸ್’ ಎನ್ನುವ ಚಿತ್ರದ ಮೂಲಕ ಮರಳಿದ್ದಾರೆ ಓಂಪ್ರಕಾಶ್ ರಾವ್.

ಇದು ಓಂ ಪ್ರಕಾಶ್ ರಾವ್ ನಿರ್ದೇಶನದ 49 ನೇ ಚಿತ್ರ. ‘ಡಾರ್ಲಿಂಗ್ ಕೃಷ್ಣ’ ನಾಯಕರಾಗಿ ನಟಿಸುತ್ತಿರುವ “ಚಂದ್ರಲೇಖ ರಿಟರ್ನ್ಸ್”ನ ಮುಹೂರ್ತ ಸಮಾರಂಭ ಇತ್ತೀಚೆಗೆ ಆನಂದರಾವ್ ಸರ್ಕಲ್ ನ‌ ಶ್ರೀವಿನಾಯಕ ದೇವಸ್ಥಾನದಲ್ಲಿ‌ ನೆರವೇರಿತು. ಹಾರರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಆಗಸ್ಟ್‌ನಲ್ಲಿ ಆರಂಭವಾಗಲಿದೆ.
ಶ್ರೀ ಭವಾನಿ ಆರ್ಟ್ಸ್ ಲಾಂಛನದಲ್ಲಿ ರವೀಶ್ ಆರ್ ಸಿ ಈ ಚಿತ್ರ ನಿರ್ಮಿಸುತ್ತಿದ್ದಾರೆ.

ಈ ಹಿಂದೆ ರವೀಶ್ ಅವರ ನಿರ್ಮಿಸಿರುವ “ಕಸ್ತೂರಿ ಮಹಲ್” ಚಿತ್ರ ಸಹ ತೆರೆಗೆ ಬರಲು ಸಿದ್ದವಾಗಿದೆ. ಡಾರ್ಲಿಂಗ್ ಕೃಷ್ಣ ಅವರೊಂದಿಗೆ ಸಾಧುಕೋಕಿಲ, ನಾಗಶೇಖರ್, ವಿವಿನ್ ಸೂರ್ಯ, ಅಚ್ಯುತರಾವ್, ಸುಧಾ ಬೆಳವಾಡಿ, ಪ್ರಶಾಂತ್ ಸಿದ್ದಿ ಮುಂತಾದವರು ಈ‌ ಚಿತ್ರದ ತಾರಾಬಳಗದಲ್ಲಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟಿಯೊಬ್ಬರು ಈ ಚಿತ್ರದಲ್ಲಿ ನಟಿಸಲಿದ್ದು, ಸದ್ಯದಲ್ಲೇ ಈ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ರವೀಶ್ ಆರ್ ಸಿ ತಿಳಿಸಿದ್ದಾರೆ.

Exit mobile version