ರಕ್ಷಿತ್ ಶೆಟ್ಟಿ(Rakshith Shetty) ನಟನೆಯ ಬಹುನಿರೀಕ್ಷಿತ “777 ಚಾರ್ಲಿ’(Charlie 777) ಚಿತ್ರ ಜೂನ್(June) 10ಕ್ಕೆ ಬಿಡುಗಡೆಯಾಗಲಿದೆ.
ಇದು ಕೂಡಾ ಕೆಜಿಎಫ್ ನಂತೆ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಎಲ್ಲಾ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಈ ಚಿತ್ರಕ್ಕಾಗಿ ರಕ್ಷಿತ್ ಶೆಟ್ಟಿ ಅಭಿಮಾನಿಗಳ ಕಾತುರ ಹೆಚ್ಚಾಗಿದ್ದು, ಈಗ ಈ ಮೂವಿ ಬಿಝಿನೆಸ್ ಮೂಲಕ ಸುದ್ದಿಯಲ್ಲಿದೆ. ಚಿತ್ರದ ಕನ್ನಡ ವರ್ಶನ್ ಸ್ಯಾಟ್‌ಲೈಟ್ ಹಾಗೂ ಡಿಜಿಟಲ್ ರೈಟ್ಸ್ ಕಲರ್ಸ್ ಕನ್ನಡ ಮತ್ತು ವೂಟ್ ಡಿಜಿಟಲ್ ವಾಹಿನಿಗೆ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ. ಈ ಮೂಲಕ ರಕ್ಷಿತ್ ಶೆಟ್ಟಿ ಖುಷಿಗೆ ಪ್ರಮುಖ ಕಾರಣವಾಗಿದೆ. ಉಳಿದಂತೆ ಈಗಾಗಲೇ ತಮಿಳು, ಹಿಂದಿ ಹಾಗೂ ಮಲಯಾಳಂನ ಪ್ರತಿಷ್ಠಿತ ಸಿನಿಮಾ ಸಂಸ್ಥೆಗಳು “777 ಚಾರ್ಲಿ’ ಚಿತ್ರದ ಬಿಡುಗಡೆಗೆ ಮುಂದಾಗಿವೆ.
ಯುವ ನಿರ್ದೇಶಕ ಕಿರಣ್ ರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ “777 ಚಾರ್ಲಿ’ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಯ ಜೊತೆಗೆ ಲ್ಯಾಬ್ರಡಾರ್ ನಾಯಿ ಒಂದು ಪೂರ್ಣ ಪ್ರಮಾಣದ ಪಾತ್ರದಲ್ಲಿ ತೆರೆಮೇಲೆ ಕಾಣಿಸಿಕೊಂಡಿದೆ. ಈ ನಾಯಿಯೇ ಚಿತ್ರದ ಪ್ರಮುಖ ಆಕರ್ಷಣೆ ಅಂದ್ರೂ ತಪ್ಪಲ್ಲ. ಕಳೆದ ವರ್ಷವೇ ಬಿಡುಗಡೆಯಾಗಬೇಕಿದ್ದ 777 ಚಾರ್ಲಿ ಸಿನಿಮಾ ಕೋವಿಡ್ ಸೇರಿದಂತೆ ಹಲವು ಕಾರಣಗಳಿಂದ ರಿಲೀಸ್ ಡೇಟ್ ಮುಂದೂಡಿಕೆಯಾಗ್ತಿತ್ತು. ರಕ್ಷಿತ್ ನಟನೆ ಚಾರ್ಲಿ ಎಂಬ ನಾಯಿಯ ಜೊತೆಗೆ, ಜೀವನದೊಂದಿಗೆ ಹೃದಯ ಸ್ಪರ್ಶಿಸುವ ಸಂಭಾಷಣೆಯು ಚಿತ್ರದ ಪ್ಲಸ್ ಪಾಯಿಂಟ್‌ಗಳು ಎಂದು ಕಲರ್ಸ್ ಕನ್ನಡ ವಾಹಿನಿ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಚಾರ್ಲಿ ಸಿನಿಮಾ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ನಟ-ಚಲನಚಿತ್ರ ನಿರ್ಮಾಪಕ, ಪೃಥ್ವಿರಾಜ್ ಅವರು ಮಲಯಾಳಂ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದರೆ, ತಮಿಳು ಹಕ್ಕುಗಳನ್ನು ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಖರೀದಿಸಿದ್ದಾರೆ. ಹಿಂದಿ ಮತ್ತು ತೆಲುಗು ಆವೃತ್ತಿಗಳ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ತಂಡ ಹೇಳಿದೆ. ಈ ಸಿನಿಮಾ ರಕ್ಷಿತ್ ಶೆಟ್ಟಿಯವರಿಗೆ ಮತ್ತೊಂದು ಯಶಸ್ಸು ತಂದುಕೊಡಲಿ ಎಂದು ಆಶಿಸೋಣ.
- ಪವಿತ್ರ ಸಚಿನ್