ಗೋಮಾಂಸ ರಫ್ತಿನ ಶ್ರೇಯಸ್ಸು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಲ್ಲಬೇಕು : ನಟ ಚೇತನ್

ಗೋಮಾಂಸ ರಫ್ತು ಮಾಡುವುದರಲ್ಲಿ ಭಾರತ 2ನೇ ಸ್ಥಾನ ಪಡೆದಿರುವುದು ಇದರ ಶ್ರೇಯಸ್ಸು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Chethan Against Manmohansingh) ಅವರಿಗೆ ಸಲ್ಲಬೇಕು

ಹೊರತು ನರೇಂದ್ರ ಮೋದಿಯವರಿಗೆ (Narendra Modi) ಅಲ್ಲ ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ (Chethan) ಅಹಿಂಸಾ ಹೇಳಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ್ (Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಗೋಮಾಂಸ ರಫ್ತಿನಲ್ಲಿ ಭಾರತವು ವಿಶ್ವದ 2 ನೇ ಅತಿದೊಡ್ಡ ಸ್ಥಾನ ಪಡೆದಿದೆ ಇದರ ಶ್ರೇಯಸ್ಸು/ ಕ್ರೆಡಿಟ್

(Credit) ಮೋದಿ ಅವರಿಗೆ ಸಲ್ಲಬೇಕು’ ಎಂದು ಕಾಂಗ್ರೆಸ್ನ ಸಂತೋಷ್ ಲಾಡ್ ಹೇಳಿದ್ದಾರೆ. ಇದೊಂದು ಸುಳ್ಳು ಆರೋಪ. APEDA ಗ್ರಾಫ್ ಯುಪಿಎ II ಆಡಳಿತದಲ್ಲಿ 2009 ರಿಂದ 2014 ರ ವರೆಗೆ

ವಾರ್ಷಿಕವಾಗಿ 30% ರಷ್ಟು ಗೋಮಾಂಸದ ರಫ್ತು ಹೇಗೆ ಹೆಚ್ಚಾಗಿದೆ ಎಂಬುದನ್ನು (Chethan Against Manmohansingh) ತೋರಿಸುತ್ತದೆ.

2014 ರಿಂದ 2019 ರ ವರೆಗೆ ಬಿಜೆಪಿ (BJP) ಆಡಳಿತದ ಮೊದಲ ಐದು ವರ್ಷಗಳಲ್ಲಿ, ಗೋಮಾಂಸ ರಫ್ತು ಸ್ಥಿರವಾಗಿದೆ ಮತ್ತು ಕಡಿಮೆಯಾಗಿದೆ. ಗೋಮಾಂಸ ರಫ್ತು ಮಾಡುವುದರಲ್ಲಿ ಭಾರತ 2ನೇ ಸ್ಥಾನ

ಪಡೆದಿರುವುದು ಇದರ ಶ್ರೇಯಸ್ಸು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಲ್ಲಬೇಕು ಹೊರತು ನರೇಂದ್ರ ಮೋದಿಯವರಿಗೆ ಅಲ್ಲ. ಸಂತೋಷ್ ಲಾಡ್ ಅವರಂತಹ ಕಾಂಗ್ರೆಸ್ (Congress)

ನಾಯಕರು ಅಜ್ಞಾನಿಗಳಾಗಿದ್ದು, ಮೋದಿಯವರ ತಪ್ಪು ಹುಡುಕಲು ಅವರುಗಳು ಹೆಚ್ಚಾಗಿ ಸುಳ್ಳು ಹೇಳಿಕೆಗಳನ್ನು ನೀಡುತ್ತಾರೆ ಎಂದು ಹೇಳಿದ್ದಾರೆ.

ಇನ್ನೊಂದು ಪೋಸ್ಟ್ನಲ್ಲಿ ಬಿಜೆಪಿ (BJP) ಶಾಸಕ ವಿಜಯೇಂದ್ರ ಅವರನ್ನು ಟೀಕಿಸಿರುವ ಅವರು, ಬಿಎಸ್ ಯಡಿಯೂರಪ್ಪ (B S Yadiyurappa) ಅವರ ಪುತ್ರ ವಿಜಯೇಂದ್ರ ಅವರು ಪವರ್ ಟಿವಿ

(Power TV) ಮಾದ್ಯಮದಲ್ಲಿ ಮಾತನಾಡಿ, ‘ರಾಜ್ಯ ಸರ್ಕಾರ ಜನರ ಒಳತಿಗಾಗಿ ಕೆಲಸ ಮಾಡಬೇಕು’ ಎಂದು ಹೇಳಿದ್ದಾರೆ. 2020 ರಲ್ಲಿ, ಪವರ್ ಟಿವಿಯು ಸ್ಟಿಂಗ್ ಆಪರೇಷನ್ (Sting Operation)

ನಡೆಸಿತು, ಅದು ವಿಜಯೇಂದ್ರ ಅವರ ಘೋರ ಭ್ರಷ್ಟಾಚಾರವನ್ನು ಬಹಿರಂಗಪಡಿಸಿತು.

ಇದರ ಪರಿಣಾಮವಾಗಿ, ಬಿಎಸ್ ಯಡಿಯೂರಪ್ಪ ಸರ್ಕಾರವು ಪವರ್ ಟಿವಿ ಮೇಲೆ ದಾಳಿ ಮಾಡಿತು ಮತ್ತು ಅದನ್ನು ಪರಿಣಾಮಕಾರಿಯಾಗಿ ಮುಚ್ಚಿತು. ಅಧಿಕಾರದಲ್ಲಿದ್ದಾಗ ಸ್ವಹಿತಾಸಕ್ತಿಗಾಗಿ ಕಾನೂನುಬಾಹಿರ

ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿ ಕೆಲಸ ಮಾಡಿದ ವಿಜಯೇಂದ್ರ (Vijayendra) ಈಗ ಸರ್ಕಾರಕ್ಕೆ ಉಪದೇಶ ಮಾಡುತ್ತಿರುವುದು ವಿಪರ್ಯಾಸವಾಗಿದೆ/ತಮಾಷೆಯಾಗಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಕರ್ನಾಟಕ ಸರ್ಕಾರದ ವಿರುದ್ಧ ಪ್ರಧಾನಿ ಮೋದಿಯ ಟೀಕಾಪ್ರಹಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು

Exit mobile version