ಚಿಕ್ಕಣ್ಣ ಈಗ `ಉಪಾಧ್ಯಕ್ಷ’

ಚಿಕ್ಕಣ್ಣ ಉಪಾಧ್ಯಕ್ಷ ಎನ್ನುವುದು ಅಧ್ಯಕ್ಷ ಚಿತ್ರ ಬಂದಾಗಲೇ ಎಲ್ಲರಿಗೂ ಗೊತ್ತಿತ್ತು. ಆದರೆ ಅಧ್ಯಕ್ಷನ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷನೇ ನಾಯಕನಾಗಿರುವ ಚಿತ್ರ ಇದು. ಹಾಗಾಗಿ ಚಿಕ್ಕಣ್ಣ ಏಕಮೇವಾದ್ವಿತೀಯ ನಾಯಕರಾಗಿರುವ ಪ್ರಥಮ ಚಿತ್ರ ಎಂದು ಕೂಡ ಹೇಳಬಹುದು. ಚಿತ್ರದ ಶೀರ್ಷಿಕೆ ಅನಾವರಣ ಮತ್ತು ಸಂಗೀತ ಸಂಯೋಜನೆಗೆ ಆರಂಭವನ್ನು ಇಂದು ಅಂದರೆ ಅಕ್ಟೋಬರ್ 19ರ ಸೋಮವಾರ ಬೆಳಿಗ್ಗೆ ನೆರವೇರಿಸಲಾಯಿತು.

`ಭರತ ಬಾಹುಬಲಿ’ ಚಿತ್ರದಲ್ಲಿ ಇಬ್ಬರು ನಾಯಕರಲ್ಲಿ ಒಬ್ಬನಾಗಿ ನಟಿಸಿದ್ದ ಚಿಕ್ಕಣ್ಣನಿಗೆ ಈಗಾಗಲೇ ಒಬ್ಬ ನಾಯಕನಿಗೆ ಸಿಗಬಹುದಾದ ಅಭಿಮಾನವನ್ನು ಪ್ರೇಕ್ಷಕರು ನೀಡುತ್ತಲೇ ಬಂದಿದ್ದಾರೆ. ಆದರೆ ಆರಂಭದಲ್ಲಿ ಎಷ್ಟೋ ಅವಕಾಶಗಳು ಸಿಕ್ಕರೂ ನಾಯಕನಾಗಲು ನಿರಾಕರಿಸಿದ್ದ ಚಿಕ್ಕಣ್ಣ ಈಗ ಕಾಲ ಕೂಡಿ ಬಂದಿದೆ ಎಂದು ಒಪ್ಪಿಗೆ ಸೂಚಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ `ರಾಬರ್ಟ್’ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಅವರ `ಉಮಾಪತಿ ಫಿಲ್ಮ್ಸ್’ ಬ್ಯಾನರ್‌ನಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ಸ್ಮಿತಾ ಉಮಾಪತಿ ಮತ್ತು ನಿರ್ಮಲಾ ಶ್ರೀನಿವಾಸ್ ನಿರ್ಮಿಸುತ್ತಿದ್ದು ಚಂದ್ರಮೋಹನ್ ನಿರ್ದೇಶಿಸಲಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಓಂ ಶಕ್ತಿ ಸ್ಟುಡಿಯೋದಲ್ಲಿ ನಡೆದ ಸಣ್ಣ ಸಮಾರಂಭದಲ್ಲಿ ಅತಿಥಿ ಗಣ್ಯರಾಗಿ ನಿರ್ದೇಶಕ `ಅಯೋಗ್ಯ’ ಮಹೇಶ್, ಎ.ಪಿ ಅರ್ಜುನ್, ತರುಣ್ ಸುಧೀರ್ ಮೊದಲಾದವರು ಪಾಲ್ಗೊಂಡಿದ್ದರು

Exit mobile version