ಚೀನಿ ಸೈನಿಕರನ್ನು ಹಿಮ್ಮೆಟ್ಟಿಸಿದ ಭಾರತೀಯ ಯೋಧರು

ಅರುಣಾಚಲ ಪ್ರದೇಶ ಅ 08 : ಭಾರತ ಹಾಗೂ ಚೀನಾ ನಡುವೆ ಮತ್ತೆ ಸಂಘರ್ಷ ಏರ್ಪಟ್ಟಿದ್ದು ಅರುಣಾಚಲ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆಯ ಸಮೀಪದಲ್ಲಿ ಸುಮಾರು 200 ಮಂದಿ ಚೀನಿ ಸೈನಿಕರನ್ನು ಭಾರತೀಯ ಯೋಧರು ತಡೆ ಹಿಡಿದಿದ್ದಾರೆ

ಕಳೆದ ವಾರ ಚೀನಾದ ಗಡಿಗೆ ಸಮೀಪದಲ್ಲಿ ಗಸ್ತು ತಿರುಗುತ್ತಿದ್ದ ಸಮಯದಲ್ಲಿ ಭಾರತ ಮತ್ತು ಚೀನಾ ಪಡೆಗಳ ನಡುವೆ ಘರ್ಷಣೆ ಉಂಟಾಗಿದೆ.ಗಡಿಗೆ ಸಮೀಪ ಬಂದಿದ್ದ ಚೀನಾದ ಸುಮಾರು 200 ಯೋಧರನ್ನು ಭಾರತದ ಪಡೆಗಳು ತಡೆ ಹಿಡಿದಿರುವುದಾಗಿ ತಿಳಿದು ಬಂದಿದೆ

ಉಭಯ ಪಡೆಗಳ ಕಮಾಂಡರ್‌ಗಳ ವಿಚಾರವನ್ನು ಪ್ರಸ್ತುತ ಜಾರಿಯಲ್ಲಿರುವ ನಿಯಮಗಳ ಅನ್ವಯ ಬಗೆಹರಿಸಿಕೊಂಡ ನಂತರದಲ್ಲಿ ಎರಡೂ ದೇಶಗಳ ಪಡೆಗಳು ಹಿಂದಿರುಗಿದ ಕೆಲವು ಗಂಟೆಗಳ ವರೆಗೂ ಭಾರತ-ಚೀನಾ ಪಡೆಗಳ ನಡುವೆ ಘರ್ಷಣೆ ನಡೆದಿದೆ, ಆದರೆ ಘರ್ಷಣೆಯಲ್ಲಿ ಭಾರತದ ಪಡೆಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.

ಈ ನಡುವೆ, ಬಾಕಿ ಉಳಿದಿರುವ ಪೂರ್ವ ಲಡಾಖ್ ಭಾಗದ ಗಡಿಯ ವಿಚಾರಗಳನ್ನು ಬಗೆಹರಿಸುವ ಬಗ್ಗೆ ಚೀನಾ ಶೀಘ್ರದಲ್ಲೇ ಕ್ರಮಕೈಗೊಳ್ಳುವ ನಿರೀಕ್ಷೆ ಇರುವುದಾಗಿ ಭಾರತ ಹೇಳಿದ್ದು. ಚೀನಾದ ಕಡೆಯಿಂದ ಆಕ್ರಮಣಕಾರಿ ಮತ್ತು ಏಕಪಕ್ಷೀಯ ಧೋರಣೆಗಳು ಗಡಿಯಲ್ಲಿ ಶಾಂತಿ ಮತ್ತು ಪ್ರಶಾಂತತೆಗೆ ಧಕ್ಕೆಯುಂಟು ಮಾಡುತ್ತದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್ ಬಗಚಿ ಹೇಳಿದ್ದಾರೆ.

Exit mobile version