ಕೆಆರ್‌ಎಸ್‌ ಡ್ಯಾಂ ಸಮೀಪದ ತಡೆಗೋಡೆ ಕಲ್ಲುಗಳ ಕುಸಿತ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ಮಂಡ್ಯ, ಜು. 19: ಭಾರೀ ಚರ್ಚೆಗೆ ಕಾರಣವಾಗಿದ್ದ KRS ಡ್ಯಾಂ‌ ಬಿರುಕು ವಿಚಾರದ ಕುರಿತ ವಾದ-ವಿವಾದದ ಬೆನ್ನಲ್ಲೆ ಡ್ಯಾಂಗೆ ಹೊಂದಿಕೊಂಡಿರುವ ಗೋಡೆಯ ಕಲ್ಲುಗಳು ಉರುಳಿ ಬಿದ್ದು ಆತಂಕ ಹೆಚ್ಚಿಸಿದೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ ಎಸ್ ಡ್ಯಾಂ ಬಿರುಕು ವಿವಾದದ ಬೆನ್ನಲ್ಲೇ ಇದೀಗ ಕೆಆರ್ ಎಸ್  ಡ್ಯಾಂ ಮೆಟ್ಟಿಲಿನ ಗೋಡೆಯಿಂದ 30ಕ್ಕೂ ಹೆಚ್ಚು ಕಲ್ಲು ಕುಸಿದಿದೆ. ಭಾನುವಾರ ನಡೆದ ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಡ್ಯಾಂನಿಂದ ಬೃಂದಾವನ ಹಾಗೂ  ಕಾವೇರಿ ಮಾತೆ ಪ್ರತಿಮೆಗೆ ಹೋಗಲು ನಿರ್ಮಿಸಿದ್ದ 80 ಅಡಿ ಗೇಟುಗಳ ಬಳಿ ಇರುವ ಮೆಟ್ಟಿಲಿನ ಗೋಡೆಯಿಂದ ಕಲ್ಲು ಕುಸಿದಿದ್ದು, ಡ್ಯಾಂ ಬಿರುಕು ವಿವಾದದ ಬೆನ್ನಲ್ಲೇ  ಕಲ್ಲು ಕುಸಿತದಿಂದ ಆತಂಕ ಹೆಚ್ಚಾಗಿದೆ.

ಡ್ಯಾಂ ಭದ್ರತೆ ದೃಷ್ಟಿಯಿಂದ ಹಲವು ವರ್ಷದ ಹಿಂದೆಯೇ ಮೆಟ್ಟಿಲ ಮೇಲೆ  ಸಾರ್ವಜನಿಕರ ಸಂಚಾರ ನಿರ್ಬಂಧಿಸಲಾಗಿತ್ತು. ಇದೀಗ ಈ ಘಟನೆಯಿಂದಾಗಿ ಬೇಬಿ ಬೆಟ್ಟದ ಕಲ್ಲು ಗಣಿಗಾರಿಕೆಯಿಂದ ಡ್ಯಾಂಗೆ ಅಪಾಯಿದ ಭೀತಿ ಮತ್ತಷ್ಟು ಹೆಚ್ಚಳವಾಗಿದೆ.

ಮೆಟ್ಟಿಲುಗಳನ್ನು ಮಣ್ಣು, ಸುರ್ಕಿಯಿಂದ ನಿರ್ಮಾಣ ಮಾಡಿಲಾಗಿತ್ತು. ಸತತ ಮಳೆಯಿಂದಾಗಿ ಕಲ್ಲುಗಳು ಏಕಾಏಕಿ ಕುಸಿದಿದ್ದು, ಕಾವೇರಿ ನೀರಾವರಿ ನಿಗಮದ  SE ವಿಜಯ ಕುಮಾರ್ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿದೆ. ಇನ್ನು ಕಲ್ಲು ಕುಸಿದಿರುವ ಬಗ್ಗೆ ಆತಂಕ ಬೇಡ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

Exit mobile version