ಕೊನೆಗೂ ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕ: 44 ಮಂದಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ

Bengaluru: ಕರ್ನಾಟಕ ಕಾಂಗ್ರೆಸ್ ಸರ್ಕಾರವು ತಿಂಗಳ ಹಿಂದಷ್ಟೇ ಶಾಸಕರಿಗೆ (Congress Good News) ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಆದೇಶ ಹೊರಡಿಸಿದ್ದು,

ಇದೀಗ ಕಾರ್ಯಕರ್ತರಿಗೂ ಶುಭ ಸುದ್ದಿ ನೀಡಿದೆ. ಪಕ್ಷದ 44 ಮಂದಿ ಕಾರ್ಯಕರ್ತರಿಗೆ ನಿಗಮ ಮಂಡಳಿ (Corporation Board) ಅಧ್ಯಕ್ಷ ಸ್ಥಾನ ನೀಡಿ ಆದೇಶ ಹೊರಡಿಸಿದೆ.

ರಾಜ್ಯ ಸಿದ್ದರಾಮಯ್ಯ (Siddaramaiah) ಸರ್ಕಾರ ನಿಗಮ ಮಂಡಳಿ ಪ್ರಾಧಿಕಾರದ ಅಧ್ಯಕ್ಷ, ಉಪಾಧ್ಯಕ್ಷರನ್ನು ನೇಮಕ ಮಾಡಿದ್ದು, ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸವಂತೆ

ತಿಳಿಸಿದೆ. ಅದರಂತೆಯೇ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಎಚ್.ಎಂ. ರೇವಣ್ಣ (H M Revanna) ಅವರನ್ನು ನೇಮಿಸಿದೆ.

ನಿಯಮ ಮಂಡಳಿಯ ಪಟ್ಟಿಯನ್ನು ಬಿಡುಗಡೆ ಮಾಡಿದ ರಾಜ್ಯ ಸರ್ಕಾರ ಅದರಲ್ಲಿ ಕೌಶಲ್ಯಾಭಿವೃದ್ಧಿ. ಕ್ರೀಡಾ ಪ್ರಾಧಿಕಾರ, ಚಲನಚಿತ್ರ ಮಂಡಳಿ, ನಗರಾಭಿವೃದ್ಧಿ ಹೀಗೆ ನಿಗಮದ

ಅಧ್ಯಕ್ಷರನ್ನಾಗಿ ಆಯ್ಕೆಯಾದವರ ಹೆಸರನ್ನು ಬಿಡುಗಡೆ ಮಾಡಿದೆ. ಒಟ್ಟು 44 ಕಾರ್ಯಕರ್ತರಿಗೆ (Congress Good News) ನಿಗಮ ಮಂಡಳಿಯಲ್ಲಿ ಸ್ಥಾನ ಸಿಕ್ಕಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಯಾರು ಯಾರಿಗೆ?
ಎಚ್.ಎಂ. ರೇವಣ್ಣ – ಅಧ್ಯಕ್ಷರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ
ಆಂಜನೇಯಲು – ಅಧ್ಯಕ್ಷ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ
ನಾಗಲಕ್ಷ್ಮಿ ಚೌಧರಿ (Nagalakshmi Choudhary) – ಅಧ್ಯಕ್ಷರು, ಮಹಿಳಾ ಆಯೋಗ
ಮರಿಗೌಡ – ಅಧ್ಯಕ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ

ವಿನೋದ್ ಅಸೂಟಿ – ಉಪಾಧ್ಯಕ್ಷ, ಕ್ರೀಡಾ ಪ್ರಾಧಿಕಾರ
ಸರೋವರ ಶ್ರೀನಿವಾಸ್ – ಅಧ್ಯಕ್ಷ, ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
ಅಲ್ತಾಫ್ – ಅಧ್ಯಕ್ಷ, ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ
ಪಲ್ಲವಿ (Pallavi) – ಸಾಂಬಾರು ಮಂಡಳಿ
ಜಯಸಿಂಹ- ಬ್ರಾಹ್ಮಣ ಅಭಿವೃದ್ಧಿ ಮಂಡಳಿ

ವಿಜಯ್​ ಕೆ ಮುಳುಗುಂದ್​- ಉಪನಗರ ವರ್ತುಲ ರಸ್ತೆ ಯೋಜನಾ ಪ್ರಾಧಿಕಾರ
ಮರಿಸ್ವಾಮಿ ಚಾಮರಾಜನಗರ- ಅಧ್ಯಕ್ಷರು ಕಾಡಾ, ಮೈಸೂರು (Mysore)
ಕಾಂತಾ ನಾಯಕ್ – ಅಧ್ಯಕ್ಷೆ, ಕೌಶಲ್ಯ ಅಭಿವೃದ್ಧಿ ನಿಗಮ
ಮಂಜುನಾಥ್ ಗೌಡ – ಮಲೆನಾಡು ಪ್ರಾಧಿಕಾರ
ಸುಂದರೇಶ್ – ಶಿವಮೊಗ್ಗ ಅಭಿವೃದ್ಧಿ ಪ್ರಾಧಿಕಾರ

ಮಂಡ್ಯ ಡಾ.ಹೆಚ್ ಕೃಷ್ಣ – ಆಹಾರ ನಿಗಮ
ಸದಾಶಿವ್​ ಉಲ್ಲಾಳ್​- ಮಂಗಳೂರು ನಗರಾಭಿಮೃದ್ಧಿ ಪ್ರಾಧಿಕಾರ
ರಘನಂದನ್​ ರಾಮಣ್ಣ- ಬೆಂಗಳೂರು ಮೈಸೂರು ಇನ್ಫಾಸ್ಟ್ರಕ್ಚರ್​ ಕಾರಿಡಾರ್​ ಪ್ರದೇಶ ಯೋಜನೆ ಪ್ರಾಧಿಕಾರ
ಬಸವರಾಜ್​ ಜಾಬಶೆಟ್ಟಿ (Basavaraj Jabashetti) – ಬೀದರ್​ ನಗರಾಭಿವೃದ್ಧಿ ಪ್ರಾಧಿಕಾರ
ಸಾಧು ಕೋಕಿಲ- ಕರ್ನಾಟಕ ಚಲನಚಿತ್ರ ಅಕಾಡೆಮಿ

ಇದನ್ನು ಓದಿ: ಕೊನೆಗೂ ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕ: 44 ಮಂದಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ

Exit mobile version