ಕಾಂಗ್ರೆಸ್ ಟ್ವೀಟ್ : ಬಿಜೆಪಿಯ ರೌಡಿ ಮೋರ್ಚಾಗೆ ಕ್ರೈಂ ಸ್ಕೋರ್ ಮುಖ್ಯ ಅಲ್ಲವೇ?

Karnataka : ಕರ್ನಾಟಕ ರಾಜ್ಯ(Karnataka State) ರಾಜಕೀಯದಲ್ಲಿ ಇದೀಗ ರೌಡಿಗಳ ಹೆಸರಿನ ರಾಜಕೀಯ ಭಾರಿ ಕೋಲಾಹಲ ಎಬ್ಬಿಸಿದ್ದು, ಪುಂಡರ ಹಾವಳಿ ಬಿಜೆಪಿಯ ಬಲದಿಂದಲೇ ಹೆಚ್ಚಾಗಿದೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್(congress tweet bjp) ಮುಖೇನ ಆರೋಪಿಸಿದೆ.

ರಾಜ್ಯ ಕಾಂಗ್ರೆಸ್, ಬಿಜೆಪಿ (BJP) ಸರ್ಕಾರದ ಲೋಪದೋಷಗಳನ್ನು ನೇರವಾಗಿ ದೂಷಿಸಿದ್ದು,

ಬಿಜೆಪಿ ಸರ್ಕಾರದಲ್ಲಿ ಕೇಳಿಬಂದ ಸರಣಿ ಹಗರಣಗಳನ್ನು ಪ್ರತ್ಯೇಕವಾಗಿ ಗುರಿಯಾಗಿಸಿ ಕಾಂಗ್ರೆಸ್ ಟೀಕಿಸಿದೆ. ಈ ಪೈಕಿ ಮೊನ್ನೆಯಷ್ಟೇ ರಾಜ್ಯದಲ್ಲಿ ರೌಡಿಗಳ ದಾಳಿ ಸಂಭವಿಸಿದ್ದು, ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗಿದೆ.

ಇದರ ಜೊತೆಗೆ ಪೊಲೀಸರು ಇಂಥ ರೌಡಿಗಳ ಪುಂಡಾಟಕ್ಕೆ ಬ್ರೇಕ್ ಹಾಕಲು ಬಿಗಿ ಬಂದೋಬಸ್ತ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಟೀ ಅಂಗಡಿ ಮಾಲಿಕ ರೌಡಿಗಳ ಗುಂಪಿನ ಬಳಿ ತನಗೆ ಬರಬೇಕಾದ ಹಣ ಕೇಳಿದ್ದಕ್ಕೆ ಪುಡಿ ರೌಡಿಗಳ ಗುಂಪು ಮಾಲಿಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಇದೇ ರೀತಿ ಬೆಂಗಳೂರಿನ ಕೆ.ಆರ್ ಪುರಂ(KR Puram) ನಲ್ಲಿ ಬಿಲ್ಡರ್ ಮೇಲೆ ಪುಂಡರು ಗುಂಡು ಹಾರಿಸಿರುವ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ನೋಡಿ : https://fb.watch/hjRbTXMq8_/ ಮೂಲಭೂತ ಸೌಕರ್ಯಗಳನ್ನು ಕಾಣದ ಗಂಗಾವತಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್.

ಈ ಎರಡು-ಮೂರು ಪುಡಿ ರೌಡಿಗಳ ಅಟ್ಟಹಾಸ ಪ್ರಕರಣಗಳು ರಾಜಕೀಯ ದೃಷ್ಟಿಕೋನ ಪಡೆದುಕೊಂಡಿದ್ದು,

ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಪ್ರಮುಖವಾದ ಕಾರಣ ಕಾಂಗ್ರೆಸ್(congress tweet bjp) ಇದನ್ನು ಅಸ್ತ್ರವಾಗಿ ಬಳಸಿಕೊಂಡಿದೆ.

ಈ ಸಂಗತಿಯನ್ನು ಗಮನದಲ್ಲಿಟ್ಟುಕೊಂಡು ಸರಣಿ ಟ್ವೀಟ್ ಮಾಡಿದೆ. ಮೊದಲ ಟ್ವೀಟ್ ಹೀಗಿದೆ, ನಿನ್ನೆ ಒಂದೇ ದಿನ ಬೆಂಗಳೂರಿನಲ್ಲಿ ಶೂಟೌಟ್,

ಕೊಲೆಯತ್ನ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದೆ. ರೌಡಿಗಳಿಗೂ ಬಿಜೆಪಿಗೂ ಇರುವ ಬಾಂಧವ್ಯದ ಪರಿಣಾಮ ರೌಡಿಗಳ ಪುಂಡಾಟ ಹೆಚ್ಚಿದೆ.

ಸ್ವತಃ ಮುಖ್ಯಮಂತ್ರಿಯೇ ಕ್ರಿಮಿನಲ್‌ಗಳ ಸಮರ್ಥನೆಗೆ ಇಳಿದರೆ ಇನ್ನೇನಾದೀತು, ರಾಜ್ಯದ ಕಾನೂನು ಸುವ್ಯವಸ್ಥೆ ಎಂಬುದು ತೋಳಗಳಿಗೆ ಕುರಿಗಳ ಕಾವಲು ಕೊಟ್ಟಂತಾಗಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಇದನ್ನೂ ಓದಿ : https://vijayatimes.com/childwood-memories-jaggesh/

ಮತ್ತೊಂದು ಟ್ವೀಟಿನಲ್ಲಿ, ಬಿಜೆಪಿ ರೌಡಿಗಳಿಗೆ ಮಣೆ ಹಾಕುತ್ತಿರುವುದರಿಂದಲೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿಯುತ್ತಿದೆ ಇದಕ್ಕೆ ಬೆಂಗಳೂರಿನ ಶೂಟೌಟ್ ಘಟನೆಯೇ ಸಾಕ್ಷಿ.

ಬಿಜೆಪಿಯಲ್ಲಿ ಸ್ಥಾನ ಪಡೆದುಕೊಳ್ಳಲು ರೌಡಿಗಳು ತಮ್ಮ ಕ್ರೈಮ್ ಸ್ಕೋರ್ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ.

ಬಿಜೆಪಿಯ ರೌಡಿ ಮೋರ್ಚಾಗೆ ಕ್ರೈಂ ಸ್ಕೋರ್ ಮುಖ್ಯ ಅಲ್ಲವೇ? ಎಂದು ಟ್ವೀಟ್ ಕಾಂಗ್ರೆಸ್ ಮಾಡಿದೆ.

Exit mobile version