ಬಿಜೆಪಿ ಗುಂಪೊಂದು ಕಾಂಗ್ರೆಸ್ ಸರ್ಕಾರ ಉರುಳಿಸಲು ಪ್ರಯತ್ನಿಸುತ್ತಿದೆ: ಡಿ.ಕೆ.ಶಿವಕುಮಾರ್

Bengaluru: ಬೆಂಗಳೂರಿನ ಸದಾಶಿವನಗರದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ (congress vs bjp) ಬಿಜೆಪಿಯ ತಂಡವೊಂದು ಯಾವ ಶಾಸಕರನ್ನು ಭೇಟಿ ಮಾಡುತ್ತಿದ್ದಾರೆ

ಎಂದು ಮತ್ತು ಆ ಶಾಸಕರು ನನಗೆ ಹಾಗೂ ಸಿ.ಎಂ ಸಿದ್ದರಾಮಯ್ಯಗೆ (Siddaramaiah) ಮಾಹಿತಿ ನೀಡಿದ್ದಾರೆ ಎಂದರು.

ಹಾಲಿ ಕೈ ಶಾಸಕರಿಗೆ ಬಿಜೆಪಿ ಆಪರೇಷನ್
ಆಪರೇಷನ್ ಕಮಲಕ್ಕಾಗಿ ಏನೇನೋ ಆಫರ್ (Offer) ಮಾಡುತ್ತಿದ್ದಾರೆ ಎಂಬುದನ್ನು ಶಾಸಕರು ಹೇಳುತ್ತಿದ್ದಾರೆ, ಎಲ್ಲ ವಿಷಯವು ನನಗೆ ಗೊತ್ತು ಎಲ್ಲ ವಿಷಯದ ಬಗ್ಗೆ ನನಗೆ ಆ ಶಾಸಕರು ಹೇಳಿದ್ದಾರೆ.

ಬಿಜೆಪಿ (BJP) ಮತ್ತು ಜನತಾದಳ ಹತಾಶೆಯ ಅಂತಿಮ ಘಟ್ಟಕ್ಕೆ ತಲುಪಿದ್ದು, ಅವರಿಗೆ ಡಾಕ್ಟರ್ ಬಂದು ಸರ್ಜರಿ (congress vs bjp) ಮಾಡಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಜಗದೀಶ್ ಶೆಟ್ಟರ್ (Jagdish Shetter) ತಮ್ಮ ಶಕ್ತಿ ಏನಿದೆ ಎಂದು ತೋರಿಸಿದ್ದಾರೆ. ನಾನೇನು ಹೆಚ್ಚು ಮಾತನಾಡುವಂತಿಲ್ಲ, ಜಗದೀಶ್ ಶೆಟ್ಟರ್ ಹಾಗೂ ರಮೇಶ್ ಜಾರಕಿಹೊಳಿ ಭೇಟಿ ವಿಚಾರವಾಗಿ

ಕೇಳಿದ ಪ್ರಶ್ನೆಗೆ ಹಾಗೆಲ್ಲ ಎಲ್ಲರ ಮೇಲೂ ಅನುಮಾನ ಪಡಲು ಸಾಧ್ಯವಿಲ್ಲ ಎಂದರು. ಬಿಜೆಪಿಯಿಂದ ಕಾಂಗ್ರೆಸ್ಸಿಗೆ (Congress) ಬರಲು ಹಲವು ಶಾಸಕರು ಬಯಸುತ್ತಿದ್ದಾರೆ.

ಬಿಜೆಪಿಯ ಒಂದು ತಂಡ ಕಾಂಗ್ರೆಸ್ ಶಾಸಕರ ಸಂಪರ್ಕವನ್ನು ಹೊಂದಿದೆ ಎಂಬ ಮಾಹಿತಿ ಇದೆ. ಅಲ್ಲದೆ ಆಪರೇಷನ್ (Operation) ಆಫರ್ ಕೂಡ ಕೊಟ್ಟಿದ್ದಾರೆ ಎಂದು ಪ್ರಕಟಿಸಲಾಗಿದೆ. ಕೆಲವು

ಮಾಜಿ ಶಾಸಕರು ಕಾಂಗ್ರೆಸ್ ಕಡೆಗೆ ವಲಸೆ ಬಂದಿದ್ದಾರೆ. ಅದರಲ್ಲಿ 42 ಮಂದಿ ಬಿಜೆಪಿ ಹಾಗೂ ದಳದ ನಾಯಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ (JDS) ಮೈತ್ರಿಯ ಬೆನ್ನಲ್ಲೇ ಆಪರೇಷನ್ ಇನ್ನೂ ಚುರುಕುಗೊಂಡಿದೆ. ಕಾಂಗ್ರೆಸ್ ಪಕ್ಷದ ಭಿನ್ನಮತ ಲಾಭವನ್ನು ಪಡೆಯಲು ಎರಡು ಗುಂಪು ಪ್ರಯತ್ನ

ಪಡುತ್ತಿದೆ, ಸದ್ಯಕ್ಕೆ ಕಾಂಗ್ರೆಸ್ ಬಳಿಕ 135+2 ಬಹುಮತ ಇದೆ. ಆಪರೇಷನ್ ಹಸ್ತದ ಮೂಲಕ ಸರ್ಕಾರ ಪತನ ಅಷ್ಟು ಸುಲಭವಾಗಿಲ್ಲ. ಕೆಲವು ಶಾಸಕರನ್ನು ಸೆಳೆಯುವ ಕೆಲಸವನ್ನು ಬಿಜೆಪಿ

ಮಾಡುತ್ತಿದೆ. ಲೋಕಸಭೆ ಚುನಾವಣೆಗಾಗಿ ಮಾಡುತ್ತಿರುವ ಈ ಬೆಳವಣಿಗೆ ಎಲ್ಲರಿಗೂ ಕುತುಹಲಕಾರಿ ಸಂಗತಿಯಾಗಿದೆ.

ಇದನ್ನು ಓದಿ: ಇಂಡಿಯನ್ ಏರ್ಪೋರ್ಟ್ ಅಥಾರಿಟಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Exit mobile version