ಬಿ ಎಸ್ ವೈ ವಿರುದ್ಧ ವಾರೆಂಟ್ ಹೊರಡಿಸಿದ್ದು ನಾವಲ್ಲ:ಕಾಂಗ್ರೆಸ್ ದ್ವೇಷ ರಾಜಕಾರಣವನ್ನು ಮಾಡುವುದಿಲ್ಲವೆಂದ ಡಿಕೆಶಿ.

Bengaluru: ಮಾಜಿ ಸಿಎಂ ಯಡಿಯೂರಪ್ಪ (Former CM Yeddyurappa) ವಿರುದ್ಧದ ಪೋಕ್ಸೋ ಪ್ರಕರಣಕ್ಕೆ (POCSO case) ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಹೇಳಿಕೆ ನೀಡಿರುವ ಡಿಕೆ ಶಿವಕುಮಾರ್ (DKS) ಅವರು ಬಿ ಎಸ್ ವೈ ವಿರುದ್ಧ ವಾರೆಂಟ್ ನೀಡುವಂತೆ ಹೇಳಿದ್ದು ನಾವಲ್ಲ.ಕಾಂಗ್ರೆಸ್ ದ್ವೇಷ ರಾಜಕಾರಣ ಮಾಡುವುದಿಲ್ಲ. ಹಾಗಾಗಿ ಬಿಎಸ್ವೈ ಪ್ರಕರಣದ ಬಗ್ಗೆ ಜಾಸ್ತಿ ತಿಳಿದುಕೊಳ್ಳಲು ಹೋಗಿಲ್ಲ. ಅವರ ಮೇಲೆ ಈ ವಯಸ್ಸಿನಲ್ಲಿ ಇಂತಹ ಅಪವಾದ ಹೋರಿಸಬೇಕು ಎನ್ನುವ ಮನಸ್ಥಿತಿ ನಮ್ಮದಲ್ಲ.ಅವರನ್ನು ನೋಡಿದರೆ ಅಯ್ಯೋ ಅನಿಸುತ್ತದೆ. ನಿನ್ನೆಯ ವರೆಗೂ ಈ ಬಗ್ಗೆ ನನಗೆ ಅಷ್ಟಾಗಿ ಗೊತ್ತಿರಲಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಅಪ್ರಾಪ್ತ ಬಾಲಕಿಯ (Minor girl) ಮೇಲೆ ಲೈಂಗಿಕ ಕಿರುಕುಳ (Sexual harassment) ನೀಡಿದ್ದಾರೆ ಎಂದು ಹೇಳಲಾಗುವ ಪ್ರಕರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಬಂದನಕ್ಕೆ ಜಾಮೀನು ರಹಿತ ವಾರೆಂಟ್ ಈಗಾಗಲೇ ಆದೇಶವಾಗಿದೆ. ಹೀಗಾಗಿ ಅಜ್ಞಾತ ವಾಸಕ್ಕೆ ತರಳಿರುವ ಯಡಿಯೂರಪ್ಪ ಅವರ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ. ಇನ್ನೊಂದೆಡೆ ಇವೆಲ್ಲ ಕಾಂಗ್ರೆಸ್ ಸರ್ಕಾರದ ಕೈವಾಡ ಎಂಬ ಮಾತು ಕೇಳಿ ಬರ್ತಿದ್ದು ಅದಕ್ಕಾಗಿ ಡಿಕೆ ಶಿವಕುಮಾರ್ ಕಾಂಗ್ರೆಸ್ (Congress) ಪಕ್ಷ ಯಾರ ಮೇಲೆ ಕೂಡ ದ್ವೇಷ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ರೇಣುಕ ಸ್ವಾಮಿ (Renuka Swami) ಕೊಲೆ ಕೇಸಿನಲ್ಲಿ ನಟ ದರ್ಶನ್ (Darshan) ಅವರನ್ನು ಬಂಧಿಸಿರಿರುವುದರಿಂದ ಸರ್ಕಾರದ ಮೇಲೆಯಾವ ಒತ್ತಡವೂ ಇಲ್ಲ.ಅಧಿಕಾರಿಗಳು ಕೂಡ ಒತ್ತಡವಿಲ್ಲದೆ ಕಾರ್ಯ ನಿರ್ವಹಿಸುತ್ತಿರುವ ಕಾರಣ ಪ್ರಕರಣದಲ್ಲಿ ಇಷ್ಟೆಲ್ಲಾ ಬೆಳೆವಣಿಗೆ ಆಗಿದೆ.ಇಲ್ಲವಾದರೆ ಪ್ರಕರಣ ದಾಖಲಾಗುವ ಮುನ್ನವೇ ಮುಚ್ಚಿ ಹೋಗಿರುತ್ತಿತ್ತು.ಈಗ ಪ್ರಕರಣದಲ್ಲಿ 13 ಜನ ಆರೋಪಿಗಳು (13 accused) ಇದ್ದಾರೆ. ಬೆಳಗ್ಗೆಯಿಂದ ಮಾಧ್ಯಮದವರು ಕ್ಯಾಮರಾ ಹಾಕೊಂಡು ಇರುತ್ತೀರಿ,ಪೊಲೀಸರಿಗೆ ಫ್ರೀಯಾಗಿ ಕೆಲಸ ಮಾಡಲು ಅವಕಾಶ ಸಿಗುವುದಿಲ್ಲ. ಹಾಗಾಗಿಯೇ ಪೋಲಿಸ್ ಠಾಣೆ ಸುತ್ತ ಶಾಮಿಯಾನ ಹಾಕಿಕೊಳ್ಳಲು ಅನುಮತಿ ನೀಡಿದ್ದೇವೆ ಹೊರತು ತನಿಖೆ ಮುಚ್ಚಿಡಲು ಅಲ್ಲ ಎಂದು ಹೇಳಿದ್ದಾರೆ.

Exit mobile version