ರಾಮನಗರ: ಕಾಂಗ್ರೆಸ್ ಅಭ್ಯರ್ಥಿ ಕೊಟ್ಟಿದ್ದ ಕುಕ್ಕರ್ ಸ್ಫೋಟ; ಬಾಲಕಿಗೆ ಗಂಭೀರ ಗಾಯ

Ramanagara : 2023 ರ ವಿಧಾನ ಸಭಾ ಚುನಾವಣೆಯು (Legislative Assembly Elections) ಮುಗಿದು ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ (Congress Govt) ಸರ್ಕಾರ ಆಡಳಿತಕ್ಕೆ ಬಂದಿದೆ. ಈ ಹಿಂದೆ ನಡೆದ ಚುನಾವಣಾ ಪ್ರಚಾರಗಳಲ್ಲಿ ಬೇರೆ ಬೇರೆ ಪಕ್ಷದ ನಾಯಕರು ಅನೇಕ ಭರವಸೆ (Cooker explosion) ಆಶ್ವಾಸನೆಗಳನ್ನು ನೀಡಿದ್ದರು. ಇದರ ನಡುವೆಯೇ ಕೆಲವು ಪಕ್ಷದವರು ಮತದಾರರಿಗೆ ಕುಕ್ಕರ್, ಟಿವಿ ಮುಂತಾದ ವಸ್ತುಗಳನ್ನು ನೀಡುವ ಮೂಲಕ ಭರ್ಜರಿಯಾಗಿ ಪ್ರಚಾರ ನಡೆಸಿದ್ದರು.

ಆದರೆ ಈಗ ರಾಮನಗರ ಜಿಲ್ಲೆ (Ramnagara district) ಮಾಗಡಿ ಕ್ಷೇತ್ರದ ಕೂನಮುದ್ದನಹಳ್ಳಿಯಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್

ಅಭ್ಯರ್ಥಿ ಹಂಚಿದ್ದ ಕುಕ್ಕರ್ ಅಡುಗೆ ಮಾಡುವಾಗ ಸ್ಫೋಟಗೊಂಡು ಮಹಾಲಕ್ಷ್ಮಿ ಎಂಬ ಬಾಲಕಿ ಗಾಯಗೊಂಡಿದ್ದಾಳೆ. ಅಂದಿನಿಂದ ಕೂನಮುದ್ದನಹಳ್ಳಿ ನಿವಾಸಿಗಳು ಭಯದಿಂದ ಕುಕ್ಕರ್‌ಗಳನ್ನು ರಸ್ತೆಗೆ ಎಸೆದಿದ್ದಾರೆ.

ಇದು ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಅವರ ಪರವಾಗಿ ವಿತರಿಸಿದ ಅಡುಗೆ ಪಾತ್ರೆಗಳು ಎನ್ನಲಾಗಿದೆ. ಕುಕ್ಕರ್ ಸ್ಫೋಟಗೊಂಡ ನಂತರ (Cooker explosion) ಆಘಾತಕ್ಕೊಳಗಾದ ಕೂನಮುದ್ದನಹಳ್ಳಿ ನಿವಾಸಿಗಳು,

ನಿಮ್ಮ ಕುಕ್ಕರ್ ನಮಗೆ ಬೇಡ, ನಿಮ್ಮ ಸಹವಾಸ ನಮಗೆ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅವುಗಳನ್ನು ರಸ್ತೆಗೆ ಎಸೆದು ಚುನಾವಣೆ ಗಿಫ್ಟ್ ಕುಕ್ಕರ್ ಬಳಸಿದರೆ ನಮಗೂ ಅಪಾಯ ಎದುರಾಗುತ್ತದೆ ಎಂದರು.

https://vijayatimes.com/cancellation-of-license-of-8-banks/

ಇಕ್ಬಾಲ್ ಒಟ್ಟು 87,690 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದರು ಚುನಾವಣೆಗೆ ಮುನ್ನ ರಾಜ್ಯದ ಹಲವೆಡೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ಕುಕ್ಕರ್ ಹಂಚಿದ್ದ ಬಗ್ಗೆ ವರದಿಗಳು ಬಂದಿದ್ದವು.

ಬೆಂಗಳೂರು, ರಾಮನಗರ, ಕೋಲಾರ, ತುಮಕೂರು ಸೇರಿದಂತೆ ಹಲವೆಡೆ ಗಳನ್ನು ವಿತರಿಸಲಾಗಿತ್ತು.

ಅಷ್ಟೇ ಅಲ್ಲದೆ ಈಗಾಗಲೇ ಹಲವು ಕಡೆ ಕುಕ್ಕರ್ ಸ್ಫೋಟಗೊಂಡ ಬಗ್ಗೆ ವರದಿಯಾಗಿದೆ.ಇನ್ನು ಚುನಾವಣಾ ಆಯೋಗವು ಹಲವು ಕಡೆ ಕುಕ್ಕರ್ಗಳನ್ನು ವಶಪಡಿಸಿಕೊಂಡಿತ್ತು.

ಇನ್ನು ಕಾಂಗ್ರೆಸ್ ಸರ್ಕಾರದ ಫ್ರೀ ಕರೆಂಟ್ ಎಫೆಕ್ಟ್: ಎಲ್‌ಪಿಜಿ ತ್ಯಜಿಸಿ ವಿದ್ಯುತ್ ಒಲೆ ಖರೀದಿಸುತ್ತಿರುವ ಜನ..!
ಗ್ಯಾಸ್ ಸಿಲಿಂಡರ್ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಇದೀಗ ಗ್ರಾಮೀಣ ಪ್ರದೇಶದಲ್ಲಿ (Rural area) ಸಿಲಿಂಡರ್ ಬೆಲೆ 1125ಕ್ಕೆ ತಲುಪಿದೆ.

ಇದು ಬಡವರು ಮತ್ತು ಸಾಮಾನ್ಯ ಜನರ ಮೇಲೆ ಹೊರೆಯಾಗಿದೆ.ಇಂತಹ ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಪ್ರತಿ ಮನೆಗೆ 200 ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿತ್ತು.

ನೂತನ ಸರ್ಕಾರದ ಮೊದಲ ಸಂಪುಟ ಸಭೆಯಲ್ಲಿ ಈ ಯೋಜನೆ ಜಾರಿಯಾಗಿದೆ.

ಹೀಗಾಗಿ ಉಚಿತ ವಿದ್ಯುತ್ ಯೋಜನೆಯಲ್ಲಿ ನಂಬಿಕೆ ಇಟ್ಟು ಇಲ್ಲಿನ ಜನರು ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಗಳನ್ನು ಮೂಲೆ-ಮೂಲೆಗಳಿಗೆ ಸ್ಥಳಾಂತರಿಸಿ ವಿದ್ಯುತ್ ಒಲೆ ಖರೀದಿಸುತ್ತಿದ್ದು,

ಹೂವಿನ ಹಡಗೇರಿ ಪಟ್ಟಣದ ವಿವಿಧ ಅಂಗಡಿಗಳಲ್ಲಿ ವಿವಿಧ ಮಾದರಿಯ ಸ್ಟೌಗಳನ್ನು ದಾಸ್ತಾನು ಮಾಡಿದ್ದಾರೆ.

ಇದನ್ನು ಗಮನಿಸಿದ ಜನರು ವಿದ್ಯುತ್ ಒಲೆಗಳನ್ನು ಖರೀದಿಸಲು ಮುಂದಾಗಿದ್ದಾರೆ. ಇಲ್ಲಿನ ವ್ಯಾಪಾರಸ್ಥರು ಮಾತನಾಡಿ,

ಇಲ್ಲಿನ ಅಂಗಡಿಗಳಲ್ಲಿ ಪ್ರತಿ ದಿನ 30ರಿಂದ 40 ವಿದ್ಯುತ್ ಒಲೆಗಳು ಮಾರಾಟವಾಗುತ್ತಿದ್ದು, ವ್ಯಾಪಾರಸ್ಥರು ಗ್ರಾಮಾಂತರ ಪ್ರದೇಶಗಳಿಗೂ ವ್ಯಾನ್‌ಗಳಲ್ಲಿ ತೆರಳಿ ವಿದ್ಯುತ್‌ ಒಲೆ ಮಾರಾಟ ಮಾಡುತ್ತಿದ್ದಾರೆ.

Exit mobile version