ಕೊರೋನಾ ಅಬ್ಬರ: ಕಳೆದ 24 ಗಂಟೆಯಲ್ಲಿ 56,211 ಪ್ರಕರಣ ದಾಖಲು

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 56,211 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಕೊರೊನಾಕ್ಕೆ ಒಳಗಾದವರ ಒಟ್ಟುಸಂಖ್ಯೆ 1,20,95,855ಕ್ಕೇರಿದೆ. ಭಾರತದಲ್ಲಿ 24 ಗಂಟೆಯಲ್ಲಿ ಕೊರೊನಾಗೆ 271 ಜನರು ಬಲಿಯಾಗಿದ್ದು, ಈ ಮೂಲಕ ಒಟ್ಟು ಮೃತಪಟ್ಟವರ ಸಂಖ್ಯೆ 1,62,114 ಆಗಿದೆ. ಈವರೆಗೆ ಸೋಂಕಿನಿಂದ 1,13,93,021 ಜನರು ಗುಣಮುಖರಾಗಿದ್ದು,ಸದ್ಯ 5,40,720 ಕೊರೊನಾ ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಈವರೆಗೆ ದೇಶದಲ್ಲಿ 6,11,13,354 ಜನರಿಗೆ ಕೊವಿಡ್ ಲಸಿಕೆ ನೀಡಲಾಗಿದೆ.

ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಕೊರೊನಾ ಪ್ರಕರಣಗಳು ಕಂಡುಬಂದಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಇದರ ಜೊತೆಗೆ ಕರ್ನಾಟಕದಲ್ಲೂ ಕೊರೋನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗಿ ಕಂಡುಬರುತ್ತಿದ್ದು, ನಿನ್ನೆ ಸಿ ಎಂ ಯೂಡಿಯೂರಪ್ಪ ಸಭೆ ನಡೆಸಿದ್ದು, ಸದ್ಯ ಯಾವುದೇ ಲಾಕ್ ಡೌನ್ ಇಲ್ಲ, ಆದರೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದಿದ್ದಾರೆ.

Exit mobile version