ಕೊರೊನಾ ಕಂಟಕ: ಛತ್ತೀಸ್‌ಘಡ ರಾಜಧಾನಿ ರಾಯ್ಪುರ್ ನಲ್ಲಿ ಏ.9ರಿಂದ 19ರವರೆಗೆ ಲಾಕ್‌ಡೌನ್

ಛತ್ತೀಸ್‌ಘಡ, ಏ. 07: ದೇಶಾದ್ಯಂತ ಕೊರೊನಾ ಎರಡನೇ ಅಲೆಯ ಆರ್ಭಟ ಜೋರಾಗಿದ್ದು, ಮಹಾಮಾರಿಯ ಅಬ್ಬರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿವಿಧ ರಾಜ್ಯ ಸರ್ಕಾರಗಳು ಹರಸಾಹಸಪಡುತ್ತಿವೆ. ಇದರ ಬೆನ್ನಲ್ಲೇ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಛತ್ತೀಸ್ಗಢ ಸರ್ಕಾರ, ಮತ್ತೊಮ್ಮೆ
ಲಾಕ್‌ಡೌನ್‌ ಜಾರಿಗೊಳಿಸಿದೆ.

ಕಳೆದ‌ ಕೆಲವು ದಿನಗಳಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವ ಸ್ಥಳೀಯ ಸರ್ಕಾರ ಛತ್ತೀಸ್ಗಢ್ ರಾಜಧಾನಿ ರಾಯ್ಪುರ್ ಜಿಲ್ಲೆಯಾಧ್ಯಂತ ಏ.9 ರಿಂದ 19ರವರೆಗೆ ಸಂಪೂರ್ಣ ಲಾಕ್‌ಡೌನ್‌ ಜಾರಿಗೊಳಿಸಿದೆ.

ಛತ್ತೀಸ್ಗಢದಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, ಮಂಗಳವಾರ ಒಂದೇ ದಿನ ದಾಖಲೆಯ 9,921 ಪ್ರಕರಣ ‌ದಾಖಲಾಗಿದೆ. ಇದರಿಂದಾಗಿ ಎಚ್ಚೆತ್ತ ಸರ್ಕಾರ ಲಾಕ್‌ಡೌನ್‌ ನಿಯಮ ಜಾರಿಗೊಳಿಸಲು ತೀರ್ಮಾನಿಸಿದೆ. ಏ.8ರವರೆಗೆ ಛತ್ತೀಸ್ಗಢದಲ್ಲಿ 3,86,269 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಈವರೆಗೂ ಒಟ್ಟು 4,416 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.

Exit mobile version