ಕೊರೊನಾ ನಡುವೆಯೂ ಚಾಮುಂಡಿ ಸನ್ನಿಧಿಗೆ ಹರಿದು ಬಂತು ಕೋಟಿ ರೂ. ಆದಾಯ

ಮೈಸೂರು, ಡಿ. 18: ಸಾಂಸ್ಕೃತಿಕ ನಗರಿ ಮೈಸೂರಿಗೆ ಐತಿಹಾಸಿಕ ಪ್ರವಾಸಿ ತಾಣವಾಗಿರುವ ನಾಡದೇವತೆ‌ ಚಾಮುಂಡೇಶ್ವರಿ ದೇವಿಯ ಹುಂಡಿಗೆ ಕೊರೊನಾ ನಡುವೆ ಕೋಟಿ ರೂ. ಆದಾಯ ಹರಿದು ಬಂದಿದೆ.

ನವೆಂಬರ್ ತಿಂಗಳ ಹುಂಡಿ ಎಣಿಕೆ ಕಾರ್ಯದಲ್ಲಿ ಒಂದು ಕೋಟಿಗೂ ಅಧಿಕ ಮೊತ್ತದ ಹಣ ಸಂಗ್ರಹವಾಗಿರುವುದು ತಿಳಿದು ಬಂದಿದೆ. ಹುಣ್ಣಿಮೆ ಹಬ್ಬದ ದಿನಗಳಲ್ಲಿ ದೇವಾಲಯ ಪ್ರವೇಶ ನಿರ್ಬಂಧ ಮಾಡಲಾಗಿತ್ತು. ಇದರ ನಡುವೆಯೂ ಭಕ್ತರಿಂದ ಹರಿದು ಬಂದ ಕಾಣಿಕೆ.
ಹುಂಡಿಯಲ್ಲಿ 1,14,18,628 ರೂ.ಗಳು ಸಂಗ್ರಹ.

ನೋಟ್ ಬ್ಯಾನ್ ಆಗಿ ನಾಲ್ಕು ವರ್ಷವಾದರೂ ಇನ್ನು ಹಳೆ ನೋಟುಗಳು ಹುಂಡಿಯಲ್ಲಿ ಪತ್ತೆಯಾಗಿದ್ದು, 500 ರೂ. ಮುಖ ಬೆಲೆಯ 138 ನೋಟುಗಳು ಹಾಗೂ 1000 ರೂ. ಮುಖ‌ ಬೆಲೆಯ 2 ನೋಟುಗಳು ಎಣಿಕೆ ವೇಳೆ ಲಭಿಸಿವೆ.

Exit mobile version