ಬೆಂಗಳೂರು ಡಿ 3 : ಕರ್ನಾಟಕದಲ್ಲಿ ಒಮಿಕ್ರಾನ್ ಕಾಣಿಸಿಕೊಂಡ ಹಿನ್ನಲೆಯಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಯಿತು. ಇಂದು ಸಿಎಂ ಬೊಮ್ಮಾಯಿ ಅವರು ಹಲವು ಸಚಿವ ಮತ್ತು ತಜ್ಞರೊಂದಿಗೆ ಮಾತನಾಡಿ ಕೆಲ ಕಠಿಣ ಕ್ರಮ ಜಾರಿಗೊಳಿಸಲು ತೀರ್ಮಾನಿಸಿದ್ದಾರೆ.
ಈ ಕುರಿತು ಸಭೆಯ ಬಳಿಕ ಮಾತಾನಾಡಿದ ಸಚಿವ ಆರ್ ಅಶೋಕ್, ರಾಜ್ಯದಲ್ಲಿ ಎರಡು ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದೆ. ವರದಿಯ ಪ್ರಕಾರ ಒಮಿಕ್ರಾನ್ ಹೆಚ್ಚಿನ ತೀವ್ರತೆ ಹೊಂದಿಲ್ಲ. ಇದರಿಂದ ಯಾವುದೇ ಸಾವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ ಎಂದು ತಿಳಿಸಿದರು.
ಕೊರೊನಾದ ಹೊಸ ಮಾರ್ಗಸೂಚಿಗಳು
- ವಿಮಾನ ನಿಲ್ದಾಣದಲ್ಲಿ ನೆಗೆಟಿವ್ ವರದಿ ಬಂದ ನಂತರವೇ ಹೊರಗೆ ಹೋಗಲು ಅವಕಾಶ
- ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆದಿರಬೇಕು
- ಸಿನಿಮಾ ಥಿಯೇಟರ್ಗಳು ಮತ್ತು ಮಾಲ್ಗಳನ್ನು ಪ್ರವೇಶಿಸಲು 2 ಡೋಸ್ ಲಸಿಕೆ ಕಡ್ಡಾಯವಾಗಿ ಪಡೆದಿರಬೇಕು
- ಮದುವೆಗೆ ಭಾಗವಹಿಸಲು 500 ಜನಕ್ಕೆ ಮಾತ್ರ ಅವಕಾಶ
- ಶಾಲೆ ಕಾಲೇಜುಗಳಲ್ಲಿ ಯಾವುದೇ ಸಮಾರಂಭ ನಡೆಸಲು ಅವಕಾಶವಿಲ್ಲ.
ಕಂಟ್ರೋಲ್ ರೂಂ ಮತ್ತೆ ಆರಂಭ ಮಾಡಲಾಗುವುದು. ಪ್ರತಿ ದಿನ ಒಂದು ಲಕ್ಷ ಟೆಸ್ಟ್ ಮಾಡಲು ತೀರ್ಮಾನ ಮಾಡಲಾಗಿದೆ. ಕೋವಿಡ್ 2 ಅಲೆಯ ಸಂದರ್ಭದಲ್ಲಿ ಮಾಡಿರುವ ಆಕ್ಸಿಜನ್ ಹಾಗೂ ಐಸಿಯು ಬೆಡ್ ಸಿದ್ಧಗೊಳಿಸಲು ಸೂಚನೆ ನೀಡಲಾಗಿದೆ. ಕಳೆದ ಬಾರಿ ಉಂಟಾದ ಔಷಧಿಯ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗವುದು ಎಂದು ಆರ್.ಅಶೋಕ್ ಹೇಳಿದರು.