Bengaluru: ಕರ್ನಾಟಕಕ್ಕೂ (Karnataka) ಕೋವಿಡ್ ರೂಪಾಂತರಿ ಜೆಎನ್.1 ಉಪತಳಿ ಲಗ್ಗೆ ಇಟ್ಟಿದ್ದು, ಈ ಕುರಿತು(Corona Subtype JN.1 Confirmed) ಇಂದು (ಡಿ.26) ರಾಜ್ಯ ಸಂಪುಟ
ಉಪಸಮಿತಿ ಸಭೆ ನಡೆದಿದ್ದು, ಉಪತಳಿ ನಿಯಂತ್ರಣದ ಬಗ್ಗೆ ಮಹತ್ವದ ಚರ್ಚೆಗಳು ನಡೆದಿವೆ. ಇನ್ನು ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್
(Dinesh Gundurao) ರಾಜ್ಯದಲ್ಲಿ ಜೆಎನ್.1 ಉಪತಳಿ (Corona Subtype JN.1 Confirmed) ಹೆಚ್ಚಾಗುವ ಸಾಧ್ಯತೆಗಳಿವೆ.
60 ಸ್ಯಾಂಪಲ್ಸ್ ನಲ್ಲಿ 34 JN.1 ಪ್ರಕರಣಗಳು ಸೋಮವಾರ (ಡಿ.25) ಪತ್ತೆಯಾಗಿದ್ದು, ಟೆಸ್ಟ್ ಹೆಚ್ಚಿಗೆ ಮಾಡಿದಷ್ಟು ಸ್ಪ್ರೆಡಿಂಗ್ (Spreading) ಗೊತ್ತಾಗುತ್ತೆ. ಹೀಗಾಗಿ ಇಂದಿನಿಂದ ನಿತ್ಯ 5 ಸಾವಿರ ಟೆಸ್ಟ್
ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಈ ಹಿಂದೆ ಆದ ತಪ್ಪು ಮತ್ತೆ ಆಗಬಾರದು ಎಂದು ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಇದು ಆಶ್ಚರ್ಯ ಪಡುವ ವಿಚಾರ ಅಲ್ಲ. ಇದು ಎಕ್ಸ್ ಪೆಕ್ಟ್ ಮಾಡಲಾಗಿತ್ತು ಎಂದು
WHO ತಿಳಿಸಿದೆ.
ಹೆಚ್ಚಿಗೆ ಮಾಡಿದಷ್ಟು ಸ್ಪ್ರೆಡಿಂಗ್ ಗೊತ್ತಾಗುತ್ತೆ. ಹೀಗಾಗಿ ಇಂದಿನಿಂದ ನಿತ್ಯ 5 ಸಾವಿರ ಟೆಸ್ಟ್ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಈ ಹಿಂದೆ ಆದ ತಪ್ಪು ಮತ್ತೆ ಆಗಬಾರದು ಎಂದು ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ.
ಇದು ಆಶ್ಚರ್ಯ ಪಡುವ ವಿಚಾರ ಅಲ್ಲ. ಇದು ಎಕ್ಸ್ ಪೆಕ್ಟ್(Expect) ಮಾಡಲಾಗಿತ್ತು ಎಂದು WHO ತಿಳಿಸಿದೆ.
ರಿಸ್ಕ್ ಫ್ಯಾಕ್ಟರಿ ಅಡೈಸರಿ (Risk Factory Advisory) ಬಂದಿಲ್ಲ. ಇದು ಸಮಾಧಾನಕರ ವಿಚಾರ. ಆದರೂ ಎಚ್ಚರಿಕೆ ಅಗತ್ಯ ಎಂದು ಹೇಳಿದರು. ಸಿಎಂ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ.
ICU ಪರಿಶೀಲನೆ ನಡೆಸಲಿದ್ದೇವೆ. ಆಕ್ಸಿಜನ್ ಸಪ್ಲೈ , LMO ರಾಜ್ಯದಲ್ಲಿ ಸಜ್ಜುಗೊಳಿಸಲು ತಿಳಿಸಲಾಗಿದೆ. ಆಕ್ಸಿಜನ್ (Oxygen)ಕೊರತೆಯಾಗದಂತೆ ಎಚ್ಚರವಹಿಸಲು ಸೂಚಿಸಲಾಗಿದೆ.
436 ಪಾಸಿಟಿವ್ ಪ್ರಕರಣಗಳ ಪೈಕಿ 400 ಜನ ಹೋಂ ಐಸೋಲೇಷನ್(Isolation) ನಲ್ಲಿದ್ದಾರೆ. 7 ಜನ ಐಸಿಯು ನಲ್ಲಿದ್ದಾರೆ. ಖುದ್ದು ನಮ್ಮ ಆರೋಗ್ಯ ಇಲಾಖೆ(Department of Health) ಅಧಿಕಾರಿಗಳು
ಟ್ರ್ಯಾಕಿಂಗ್ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು. 4 ಆಕ್ಸಿಜನ್ ಕಂಟೈನರ್ ಖರೀದಿ ಮಾಡಲಿದ್ದೇವೆ. ಆಸ್ಪತ್ರೆ ಮತ್ತು ಮನೆಯಲ್ಲಿ ಇರುವವರಿಗೆ ಈ ಆಕ್ಸಿಜನ್ ಕಂಟೈನರ್ ಉಪಯೋಗವಾಗಲಿದೆ.
ಮೊದಲ ಹಾಗೂ ಎರಡನೇ ಡೋಸ್ 9 ಡೆದಿದ್ದಾರೆ. ಅವರಿಗೆಲ್ಲ ಮುನ್ನೆಚ್ಚರಿಕೆಗಾಗಿ ಲಸಿಕೆ (The vaccine)ನೀಡಲಾಗುತ್ತೆ. ಕೇಂದ್ರ ಸರ್ಕಾರದಿಂದ 30 ಸಾವಿರ ಮುನ್ನೆಚ್ಚರಿಕೆ ವ್ಯಾಕ್ಸಿನ್ ಕೇಳಿದ್ದು, ಉಪ
ಸಮಿತಿಯಲ್ಲಿ ಖರೀದಿಗೆ ನಿರ್ಧಾರ ಮಾಡಲಾಗಿದೆ ಎಂದು ಕೋ ಮಾರ್ಬಿಟ್, ಹೆಲ್ತ್ ವರ್ಕಸ್(Co Morbit, Health Works) ಸೇರಿ ಹಲವರಿಗೆ ಮುನ್ನೆಚ್ಚರಿಕೆ ವ್ಯಾಕ್ಸಿನ್ ಕೊಡಲಾಗುತ್ತದೆ.
ಸುವೆಜ್ ಸರ್ವಲೆನ್ಸ್ ಮೂಲಕ ಕೂಡಾ ಕೊವಿಡ್ ಟ್ಯ್ರಾಕ್ ((Covid Track) ಮಾಡಲಾಗುತ್ತೆ. ಆರೋಗ್ಯ ಸಿಬ್ಬಂದಿಗೆ ಪ್ಲೂ ವ್ಯಾಕ್ಸಿನ್ (Flu vaccine)ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ 30 ಸಾವಿರ
ಕೋರ್ಬಿ ವ್ಯಾಕ್ಸ್ ಖರೀದಿಸಲಿದ್ದೇವೆ ಎಂದು ವಿವರಿಸಿದರು.
- ಭವ್ಯಶ್ರೀ ಆರ್ ಜೆ