ಭಾಗಮಂಡಲ ದೇಗುಲ ಸಿಬ್ಬಂದಿಗೆ ಕೊರೊನಾ: ಭಗಂಡೇಶ್ವರನ ದರ್ಶನಕ್ಕೆ ತಾತ್ಕಾಲಿಕ ಬ್ರೇಕ್

ಕೊಡಗು, ಮಾ. 24: ಕಾಫಿ ನಾಡು ಕೊಡಗಿನಲ್ಲಿ ಮತ್ತೆ ಕೊರೊನಾ ಭೀತಿ ಸೃಷ್ಟಿಯಾಗಿದ್ದು, ಇಲ್ಲಿನ ಪ್ರಮುಖ ಪ್ರವಾಸಿ ತಾಣವಾದ ಭಾಗಮಂಡಲ ದೇವಾಲಯ ಸಿಬ್ಬಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಭಗಂಡೇಶ್ವರ ದೇವಾಲಯಕ್ಕೆ ಭಕ್ತರ ಪ್ರವೇಶಕ್ಕೆ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ದೇವಾಲಯದ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ದೇವಸ್ಥಾನಕ್ಕೆ ಸ್ಯಾನಿಟೈಸೇಷನ್ ಮಾಡುವ ಕಾರ್ಯ ನಡೆಯುತ್ತಿದೆ. ಹೀಗಾಗಿ ನಾಳೆ(ಬುಧವಾರ) ಭಕ್ತರಿಗೆ ದೇವಸ್ಥಾನ ಪ್ರವೇಶಕ್ಕೆ ಮತ್ತೆ ಅವಕಾಶ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಮಡಿಕೇರಿ ಸಂತ ಮೈಕಲರ ಕಾಲೇಜಿನ ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ಖಚಿತಪಟ್ಟಿದೆ. ಪದವಿ ಪೂರ್ವ ಕಾಲೇಜಿನ 6 ಮಂದಿಗೆ ಕೊರೊನಾ ಸೋಂಕು ಹರಡಿದೆ. ಕಾಲೇಜು ವಿಭಾಗವನ್ನು ಕಂಟೈನ್ಮೆಂಟ್ ಝೋನ್ ಆಗಿ ಪರಿವರ್ತನೆ ಮಾಡಲಾಗಿದ್ದು, ಮೂರು ದಿನಗಳ ಬಳಿಕ ಕಾಲೇಜು ಮರು ಆರಂಭವಾಗಲಿದೆ.

Exit mobile version