ಲಸಿಕೆ ಪಡೆದ ಮೇಲೂ ನಟಿ ನಗ್ಮಾಗೆ ಕೊರೋನಾ ಸೋಂಕು

ನವದೆಹಲಿ, ಏ. 08: ನಟಿ, ರಾಜಕಾರಣಿ ನಗ್ಮಾ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಕುರಿತು ಟ್ವೀಟರ್​ ಮೂಲಕ ಮಾಹಿತಿ ನೀಡಿರುವ ಅವರು, ಇತ್ತೀಚೆಗಷ್ಟೇ ತಾವು ಕೊವೀಡ್​ ಲಸಿಕೆ ಮೊದಲ ಡೋಸ್​ ಪಡೆದಿದ್ದರೂ ತಮಗೆ ಕೋವಿಡ್​ ಸೋಂಕು ದೃಢಪಟ್ಟಿದೆ. ಇದರಿಂದ ತಾವು ಹೋಂ ಕ್ವಾರಂಟೈನ್​ಗೆ ಒಳಗಾಗುತ್ತಿರುವುದಾಗಿ ತಿಳಿಸಿದ್ದಾರೆ.

ಏ.2 ರಂದು ನಟಿ ನಗ್ಮಾ ಕೋವಿಡ್​ ಲಸಿಕೆ ಪಡೆದಿದ್ದರು. ಸೋಂಕಿಗೆ ತುತ್ತಾಗಿರುವ ಹಿನ್ನಲೆ ತಮ್ಮ ಸಂಪರ್ಕಕ್ಕೆ ಒಳಗಾದ ಕಾಂಗ್ರೆಸ್​ ಮುಖಂಡರು ಮತ್ತು ಅಭಿಮಾನಿಗಳು ಎಚ್ಚರಿಕೆವಹಿಸುವಂತೆ ಮನವಿ ಮಾಡಿದ್ದಾರೆ.

ಕೋವಿಡ್​ ಎರಡನೇ ಅಲೆಯಿಂದಾಗಿ ದೇಶದಲ್ಲಿ ಸೋಂಕಿತರ ಸಂಖ್ಯೆ ಏರುತ್ತಿದೆ. ಲಸಿಕೆ ಪಡೆದವರು ಕೂಡ ಕೊರೋನಾ ಸೋಂಕಿಗೆ ತುತ್ತಾಗುತ್ತಿರುವುದು ವರದಿಯಾಗುತ್ತಿದೆ. ಇದು ಕೇಂದ್ರ ಸರ್ಕಾರವನ್ನು ಕೂಡ ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಇದೇ ಹಿನ್ನಲೆ ಲಸಿಕೆ ಪಡೆದವರು ಕೂಡ ಕೊರೋನಾ ಪಾಸಿಟಿವ್ ಆಗುತ್ತಿರುವವರ ಮಾಹಿತಿ ಕಲೆ ಹಾಕಲಿ ಕೇಂದ್ರ ಆರೋಗ್ಯ ಇಲಾಖೆ ನಿರ್ಧರಿಸಿದೆ.

Exit mobile version