200 ಕೋಟಿ ಸುಲಿಗೆ ಪ್ರಕರಣ ; ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮಧ್ಯಂತರ ಜಾಮೀನು ವಿಸ್ತರಣೆ!

Mumbai : ಸುಕೇಶ್ ಚಂದ್ರಶೇಖರ್ ಅವರ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡೀಸ್ಗೆ (Court extends Jacqueline Bail) ದೆಹಲಿ ನ್ಯಾಯಾಲಯವು ಮಧ್ಯಂತರ ಜಾಮೀನನ್ನು ನವೆಂಬರ್ 10 ರವರೆಗೆ ವಿಸ್ತರಿಸಿದೆ.

ನ್ಯಾಯಾಲಯವು ಎಲ್ಲಾ ಕಕ್ಷಿದಾರರಿಗೆ ಆರೋಪ ಪಟ್ಟಿ ಮತ್ತು ಇತರ ಸಂಬಂಧಿತ ದಾಖಲೆಗಳನ್ನು ನೀಡುವಂತೆ ಜಾರಿ ನಿರ್ದೇಶನಾಲಯಕ್ಕೆ ನಿರ್ದೇಶಿಸಿದೆ.

ಜಾಮೀನು ಮತ್ತು ಇತರ ಬಾಕಿ ಅರ್ಜಿಗಳ (Court extends Jacqueline Bail) ವಿಚಾರಣೆಯನ್ನು ಮುಂದುವರೆಸಲು ನವೆಂಬರ್ 10 ರಂದು ನಿಗದಿಪಡಿಸಲಾಗಿದೆ.

https://youtu.be/H2pBkVOjVsE

ತನಿಖಾ ಸಂಸ್ಥೆ ಆಗಸ್ಟ್ 17 ರಂದು ಪ್ರಕರಣದಲ್ಲಿ ನಟಿಯನ್ನು ಆರೋಪಿ ಎಂದು ಹೆಸರಿಸಿ ಆರೋಪಪಟ್ಟಿ ಸಲ್ಲಿಸಿದೆ. ನಟಿ ಜಾಕ್ವೆಲಿನ್‌ಗೆ ಸುಕೇಶ್ ಚಂದ್ರಶೇಖರ್ 7 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಭರಣಗಳನ್ನು ಉಡುಗೊರೆಯಾಗಿ ನೀಡಿದ್ದರು ಎನ್ನಲಾಗಿದೆ.

ಸುಖೇಶ್ ನಟಿ ಜಾಕ್ವಲಿನ್ ಕುಟುಂಬ ಸದಸ್ಯರಿಗೆ ಹಲವಾರು ದುಬಾರಿ ಕಾರುಗಳು, ದುಬಾರಿ ಬ್ಯಾಗ್‌ಗಳು, ಬಟ್ಟೆಗಳು, ಬೂಟುಗಳು ಮತ್ತು ದುಬಾರಿ ವಾಚ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ : https://vijayatimes.com/health-benefits-of-ridge-gourd/

ಪ್ರಸ್ತುತ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಅವರು ಮಾಜಿ ಫೋರ್ಟಿಸ್ ಹೆಲ್ತ್‌ಕೇರ್ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಅವರಂತಹ ವಿವಿಧ ಉನ್ನತ ವ್ಯಕ್ತಿಗಳನ್ನು ವಂಚಿಸಿದ ಆರೋಪ ಹೊತ್ತಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್‌ನಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ದೆಹಲಿ ಪೊಲೀಸ್ ಆರ್ಥಿಕ ಅಪರಾಧ ವಿಭಾಗವು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು.

ವಿಚಾರಣೆಯ ಸಮಯದಲ್ಲಿ, ಜಾಕ್ವೆಲಿನ್ ಚಂದ್ರಶೇಖರ್ ಅವರೊಂದಿಗೆ ಆರು ತಿಂಗಳ ಕಾಲ ಸಂಬಂಧ ಹೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ.

ಆದ್ರೆ, ತನಗೆ ಚಂದ್ರಶೇಖರ್ ಅವರ ಇಂಥ ಚಟುವಟಿಕೆಗಳ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಹೇಳಿರುವುದರ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆಗೆ ಪಿಟಿಐ (PTI) ವರದಿ ಮಾಡಿದೆ.
Exit mobile version