ಕೇರಳದಲ್ಲಿ ತೀವ್ರ ಗತಿಯಲ್ಲಿ ಏರುತ್ತಿರುವ ಕೊರೊನಾ, ಇದರಿಂದ ಕರ್ನಾಟಕಕ್ಕೂ ಇದೆ ಆಪತ್ತು

ನವದೆಹಲಿ ಸೆ10 : ದೇಶದಲ್ಲಿ ನಿತ್ಯ ದಾಖಲಾಗುತ್ತಿರುವ ಒಟ್ಟಾರೆ ಕೊರೊನಾ ಸೋಂಕಿನ ಪೈಕಿ ಕೇರಳವೊಂದರಲ್ಲಿ ಸುಮಾರು ಶೇ.69% ರಷ್ಡು ದಾಖಲಾಗುತ್ತಿದೆ. ಕೊರೊನಾ ಎರಡನೆ ಅಲೆ ದೇಶದಲ್ಲಿ ಇನ್ನೂ ಮುಗಿದಿಲ್ಲ. ಹೀಗಾಗಿ ಎಚ್ಚರಿಕೆ ವಹಿಸಿ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ‌.

ಈ ಬಗ್ಗೆ ಮಾತನಾಡಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು, ಎರಡನೇ ಅಲೆ ದೇಶಗಳಲ್ಲಿ ಇನ್ನೂ ಇರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ ಇಲ್ಲದಿದ್ದರೆ ಅನಾಹುತ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿರವ ಪೈಕಿ ಕೇರಳದ ಪಾಲು ಅರ್ಧಕ್ಕಿಂತ ಹೆಚ್ಚಾಗಿದ್ದು, ಇದು ಕೂಡ ಆತಂಕಕಾರಿ ಬೆಳವಣಿಗೆಯಾಗಿದೆ ಹೀಗಾಗಿ ಎಚ್ಚರಿಕೆ ಅಗತ್ಯ ಎಂದು ಅವರು ತಿಳಿಸಿದರು

ಗುರುವಾರ ದೇಶದಲ್ಲಿ 43,263 ಮಂದಿ ಯಲ್ಲಿ ಹೊಸದಾಗಿ‌ ಸೋಂಕು ಕಾಣಿಸಿಕೊಂಡಿದ್ದು. ಅದರಲ್ಲಿ ಕೇರಳದಲ್ಲಿ 32ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಜೊತೆಗೆ ದಿನೇ ದಿನೇ ಕೇರಳದಲ್ಲಿ ಸೋಂಕು ಹೆಚ್ಚುತ್ತಿರುವುದು ಕರ್ನಾಟಕಕ್ಕೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

Exit mobile version