ರಾಜ್ಯದಲ್ಲಿ AY 4.2 ಬಗ್ಗೆ ಆತಂಕ ಬೇಡ ತಜ್ಞರ ವರದಿ

ಬೆಂಗಳೂರು ಅ 27 : ಕೋವಿಡ್ ವೈರಾಣುವಿನ ಎ.ವೈ. 4.2 ರೂಪಾಂತರಿ ರಾಜ್ಯಕ್ಕೆ ಕಾಲಿರಿಸಿ ಮೂರು ತಿಂಗಳುಗಳ ಮೇಲಾಗಿದೆ. ಆದರೆ ಸೋಂಕು ಪ್ರಕರಣ ಹೆಚ್ಚಳವಾಗಿಲ್ಲ. ಹೀಗಾಗಿ ಆತಂಕ ಅನಗತ್ಯ ಎಂದು ರಾಜ್ಯ ಆರೋಗ್ಯ ತಜ್ಞರು ಅಭಯ ನೀಡಿದ್ದಾರೆ.

ಬ್ರಿಟನ್‌ನಲ್ಲಿ ಉದ್ಭವಿಸಿದ ಈ ರೂಪಾಂತರಿ ರಾಜ್ಯ ದಲ್ಲೂ ಪತ್ತೆಯಾಗಿರುವ ಬಗ್ಗೆ ವರದಿ ಬಹಿರಂಗವಾದ ಬೆನ್ನಲ್ಲೇ ಈ ಸಮಾಧಾನಕರ ಹೇಳಿಕೆ ಹೊರಬಿದ್ದಿದೆ. ಕೋವಿಡ್ ವೈರಾಣು ಪ್ರದೇಶವಾರು ಅಧಿಕ ಜನರ ದೇಹ ಸೇರಿದ ಬಳಿಕ ರೂಪಾಂತರವಾಗುತ್ತದೆ. ಈವರೆಗೆ ಬೀಟಾ, ಅಲ್ವಾ, ಡೆಲ್ಟಾ, ಡೆಲ್ಟಾ ಪ್ಲಸ್ ಸಹಿತ 8ಕ್ಕೂ ಅಧಿಕ ರೂಪಾಂತರಗಳು ದೃಢಪಟ್ಟಿವೆ. ಇವುಗಳ ಪತ್ತೆಗೆ ಮಾದರಿಗಳನ್ನು ವಂಶವಾಹಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಜುಲೈಯಲ್ಲಿ ಸೋಂಕು ದೃಢಪಟ್ಟಿದ್ದವರ ವಂಶವಾಹಿಯನ್ನು ಪರೀಕ್ಷೆಗೊಳಪಡಿಸಿದ್ದು, ವರದಿ ಸೋಮವಾರ ಲಭಿಸಿದೆ. ಎ.ವೈ. 4.2 ಹೆಚ್ಚು ಹಾನಿ ಮಾಡುವಂತಿದ್ದರೆ ಈಗಾಗಲೇ ರಾಜ್ಯದಲ್ಲಿ ಸೋಂಕು ಹೆಚ್ಚಳವಾಗಬೇಕಿತ್ತು. ಆದರೆ 3 ತಿಂಗಳುಗಳಿಂದ ಸೋಂಕು ಇಳಿ ಹಾದಿ ಯಲ್ಲಿದೆ. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.

Exit mobile version