ಹೊಸದಿಲ್ಲಿ, ಮೇ. 01: ಬಾಲಿವುಡ್ ನಟ ರಣಧೀರ್ ಕಪೂರ್ ಅವರಿಗೆ ಕೋವಿಡ್ ತಗುಲಿರುವುದು ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಪೂರ್ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ʻಕಳೆದ ರಾತ್ರಿ ರಣಧೀರ್ ಕಪೂರ್ ಕೋವಿಡ್‌ನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಆತಂಕವಿಲ್ಲʼ ಎಂದು ಆಸ್ಪತ್ರೆ ವೈದ್ಯ ಸಂತೋಷ್ ಶೆಟ್ಟಿ ತಿಳಿಸಿದ್ದಾರೆ.
ಕೆಲ ವಾರಗಳ ಹಿಂದೆ ಕಪೂರ್ ತನ್ನ ಮಾಜಿ ಪತ್ನಿ ಬಿಬತಾ ಅವರ ಜನ್ಮದಿನದಂದು ಪುತ್ರಿ ನಟಿ ಕರೀನಾ ಕಪೂರ್ ಅವರ ಮನೆಯಲ್ಲಿ ನಡೆದ ಕಾರ್ಯಕಮದಲ್ಲಿ ಪಾಲ್ಗೊಂಡಿದ್ದರು. ಮತ್ತೊಬ್ಬಳು ಪುತ್ರಿ ನಟಿ ಕರೀಶ್ಮಾ ಕೂಡ ಪಾಲ್ಗೊಂಡಿದ್ದರು. ರಣಧೀರ್ ಕಪೂರ್ ಬಾಲಿವುಡ್‌ನ ಖ್ಯಾತ ನಟ ಹಾಗೂ ನಿರ್ಮಾಪಕ ರಾಜ್‌ಕುಪೂರ್ ಪುತ್ರ.