ಕೇರಳದಲ್ಲಿ ಕೋವಿಡ್ ತೀವ್ರತೆ ಕಡಿಮೆಯಾಗುತ್ತಿದೆ: ಆರೋಗ್ಯ ಸಚಿವೆ

ತಿರುವನಂತಪುರ, ಆ. 04: ಕೇರಳದಲ್ಲಿ ಕೋವಿಡ್ ಸೋಂಕು ಏರಿಕೆಯತ್ತ ಸಾಗುತ್ತಿದ್ದರೂ, ರಾಜ್ಯದಲ್ಲಿ ಕೋವಿಡ್ ಪಿಡುಗಿನ ತೀವ್ರತೆ ಕಡಿಮೆಯಾಗುತ್ತಿದೆ ಎಂದು ಅಲ್ಲಿನ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ವಿಧಾನಸಭೆಗೆ ತಿಳಿಸಿದ್ದಾರೆ.

ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ಪಡೆಯಬೇಕಾದವರ ಮತ್ತು ಐಸಿಯುನಲ್ಲಿ ದಾಖಲಾಗಬೇಕಾದವರ ಸಂಖ್ಯೆ ಕಡಿಮೆಯಾಗಿದೆ ಎಂದು ಅವರು ಹೇಳಿದರು.

ಸಂಪೂರ್ಣವಾಗಿ ಲಸಿಕೆ ಪಡೆದವರಿಗೆ ಸೋಂಕು ಬರುತ್ತಿದೆಯೇ ಅಥವಾ ಒಮ್ಮೆ ಸೋಂಕಿತರಾಗಿದ್ದವರಲ್ಲಿ ಮರು ಸೋಂಕು ಕಾಣಿಸಿಕೊಳ್ಳುತ್ತಿದೆಯೇ ಎಂಬುದರ ಕುರಿತು ಪರಿಶೀಲಿಸಲಾಗುತ್ತಿದೆ. ಸಮೀಕ್ಷೆಯ ಪ್ರಕಾರ ಮರು ಸೋಂಕಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಕೇರಳದಲ್ಲಿ ಮಂಗಳವಾರ 23,676 ಹೊಸ ಪ್ರಕರಣಗಳು ವರದಿಯಾಗಿದ್ದು, 148 ಜನರು ಮೃತಪಟ್ಟಿದ್ದಾರೆ.

Exit mobile version