ರಾಜ್ಯದಲ್ಲಿ ನಾಳೆಯಿಂದ (ಮೇ 22) 18 ರಿಂದ 44 ವರ್ಷದವರಿಗೆ ಕೋವಿಡ್ ಲಸಿಕೆ; ಕೊರೊನಾ ಸೇನಾನಿಗಳಿಗೆ ಮೊದಲ ಆದ್ಯತೆ

ಬೆಂಗಳೂರು, ಮೇ. 21: ಕೊರೊನಾ‌ ಲಸಿಕೆ ಕೊರತೆಯಿಂದಾಗಿ ರಾಜ್ಯದಲ್ಲಿ ನಿಲ್ಲಿಸಲಾಗಿದ್ದ 18 ರಿಂದ 44 ವರ್ಷದವರಿಗೆ ಕೊರೊನಾ ಲಸಿಕೆ ಪೂರೈಕೆಗೆ ಮತ್ತೆ ಚಾಲನೆ ದೊರೆಯಲಿದ್ದು, ಮೇ 22ರಿಂದ ಕೊರೊನಾ ಲಸಿಕೆ ನೀಡಲಾಗುತ್ತಿದೆ.

ರಾಜ್ಯದಲ್ಲಿ ಕೊವಿಡ್ ಲಸಿಕೆಯ ಅಭಾವ ಸೃಷ್ಟಿಯಾದ ಕಾರಣ ಮೇ 12ರಂದು 18ರಿಂದ 44 ವರ್ಷದವರಿಗೆ ಮೇ 14ರಿಂದ ಕೊರೊನಾ ಲಸಿಕೆ ನೀಡಿಕೆ ಸ್ಥಗಿತಗೊಳಿಸಲು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತ್ತು. ತಾತ್ಕಾಲಿಕವಾಗಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಣೆ ಸ್ಥಗಿತಗೊಳಿಸಲಾಗಿತ್ತು. 

ಆದರೆ ಇದೀಗ 18ರಿಂದ 44 ವರ್ಷದೊಳಗಿನ ಕೋವಿಡ್ ವಾರಿಯರ್ಸ್​​ಗಳಿಗೆ ಮತ್ತು ಆಯ್ದ ಗುಂಪುಗಳಿಗೆ ಮಾತ್ರ ಆದ್ಯತೆ ಮೇರೆಗೆ ಲಸಿಕೆ ವಿತರಣೆ ಮಾಡಲು ತೀರ್ಮಾನಿಸಲಾಗಿದೆ. ಈ ಕುರಿತು ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕೆಳಕಂಡ ವರ್ಗಕ್ಕೆ ಮೇ 22ರಿಂದಲೇ ಲಸಿಕೆ ಲಭ್ಯವಾಗಲಿದೆ. ಅದರಂತೆ ಅಂಗವೈಕಲ್ಯ ಹೊಂದಿರುವ (ಮಾನಸಿಕ ಅಸ್ವಸ್ಥತೆ ಸೇರಿದಂತೆ) ಫಲಾನುಭವಿಗಳು ಮತ್ತು ಒರ್ವ ಆರೈಕೆದಾರರು
ಖೈದಿಗಳು, ಚಿತಾಗಾರ/ ಸ್ಮಶಾನ/ ರುದ್ರಭೂಮಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಸ್ವಸಹಾಯಕರು
ಆರೋಗ್ಯ ಕಾರ್ಯಕರ್ತರ ನಿಕಟ ಕುಟುಂಬಸ್ಥರು
ಕೊವಿಡ್ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಶಿಕ್ಷಕರು
ಸರ್ಕಾರಿ ಸಾರಿಗೆ ಸಿಬ್ಬಂದಿ
ಆಟೋ ಮತ್ತು ಕ್ಯಾಬ್ ಚಾಲಕರು, ವಿದ್ಯುತ್ ಮತ್ತು ನೀರು ಸರಬರಾಜು ಮಾಡುವವರು, ಅಂಚೆ ಇಲಾಖೆ ಸಿಬ್ಬಂದಿ, ಭದ್ರತೆ ಮತ್ತು ಕಚೇರಿಗಳ ಹೌಸ್ ಕೀಪಿಂಗ್ ಸಿಬ್ಬಂದಿ, ನ್ಯಾಯಾಂಗ ಅಧಿಕಾರಿಗಳು, ವಯೋವೃದ್ಧರ/ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರ ಆರೈಕೆದಾರರು
ಮಾಧ್ಯಮದವರು
ಆಸ್ಪತ್ರೆಗಳಿಗೆ ಸರಕು ಸರಬರಾಜು ಮಾಡುವ ವ್ಯಕ್ತಿಗಳು
ಆಯಿಲ್ ಇಂಡಸ್ಟ್ರಿ ಮತ್ತು ಗ್ಯಾಸ್ ಸರಬರಾಜು ಮಾಡುವವರು
ಪೆಟ್ರೋಲ್ ಬಂಕ್, ಕರ್ಮಚಾರಿಗಳು ಒಳಗೊಂಡಂತೆ
ಔಷಧಿ ತಯಾರಿಕಾ ಕಂಪನಿಗಳ ಸಿಬ್ಬಂದಿ
ಆಸ್ಪತ್ರೆಗಳಿಗೆ ಆಕ್ಸಿಜನ್, ಔಷಧಿಗಳು ಮತ್ತು ವೈದ್ಯಕೀಯ ಉಪಕರಣ ಸರಬರಾಜು ಸಿಬ್ಬಂದಿ
ಅಧಿಕೃತ ಗುರುತಿನ ಚೀಟಿ ಹೊಂದಿರದ ಫಲಾನುಭವಿಗಳು (ವೃದ್ದಾಶ್ರಮ ವಾಸಿಗಳು, ನಿರ್ಗತಿಕರು)
ಭಾರತೀಯ ಆಹಾರ ನಿಗಮ ಸಿಬ್ಬಂದಿ

ಲಸಿಕೆ ಪಡೆಯಲಿರುವ ಆದ್ಯತೆ ಗುಂಪುಗಳು ಇಂತಿವೆ:
ಎಪಿಎಂಸಿ ಕೆಲಸಗಾರರು
ಆದ್ಯತೆಯ ಗುಂಪುಗಳು
ಕಟ್ಟಡ ಕಾರ್ಮಿಕರು
ಟೆಲಿಕಾಂ ಮತ್ತು ಇಂಟರ್ನೆಟ್ ‌ಸೇವಾದಾರರು
ವಿಮಾನಯಾನ ಸಂಸ್ಥೆಗಳ ಸಿಬ್ಬಂದಿ
ಬ್ಯಾಂಕ್ ಸಿಬ್ಬಂದಿ
ಪೆಟ್ರೋಲ್ ಬಂಕ್ ಕೆಲಸಗಾರರು
ಚಿತ್ರೋದ್ಯಮದ ಉದ್ಯಮಿ/ಕಾರ್ಯಕರ್ತ/ ಸಿಬ್ಬಂದಿ
ಅಡ್ವೋಕೇಟ್ ಗಳು
ಹೋಟೆಲ್ ಮತ್ತು ಆತಿಥ್ಯ ಸೇವಾದಾರರು
ಕೆಎಂಎಫ್ ಸಿಬ್ಬಂದಿ
ರೈಲ್ವೇ ಸಿಬ್ಬಂದಿ
ಗಾರ್ಮೆಂಟ್ಸ್ ಕಾರ್ಖಾನೆ ಸಿಬ್ಬಂದಿ
ಅರಣ್ಯ ಇಲಾಖೆ ಸಿಬ್ಬಂದಿ
ಎನ್ ಹೆಚ್ಎಐ ಸಿಬ್ಬಂದಿ

Exit mobile version