ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್ ನ ಅಡಿಯಲ್ಲಿ ಹೊಸ ಚಿತ್ರ

ಕೋಮಲ್ ಕುಮಾರ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ಟಿ. ಆರ್. ಚಂದ್ರಶೇಖರ್ ಅವರು ಬಂಡವಾಳ ಹೂಡುತ್ತಿದ್ದು, ,ಧನ್ಯ ಬಾಲಕೃಷ್ಣ,ಕುರಿ ಪ್ರತಾಪ್ ತಬಲಾ ನಾಣಿ, ಗಿರಿ, ಅಪೂರ್ವ,ಉಮೇಶ್ ಹಾಗೂ ಇತರರೂ ಮುಖ್ಯ ಭೂಮಿಕೆಯಲ್ಲಿದ್ದಾರೆ. ರಾಬರ್ಟ್, ವಿಕ್ಟರಿ 2, ಅಮ್ಮ ಐ ಲವ್ ಯು, ತ್ರಿಬಲ್ ರೈಡಿಂಗ್, ಉಪಾಧ್ಯಕ್ಷ ಹಾಗೂ ಇನ್ನೂ ಹಲವು ಚಿತ್ರಗಳಿಗೆ ಸಂಭಾಷಣೆ ಬರೆದ
ಕೆ.ಎಲ್.ರಾಜಶೇಖರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಇದೇ ನವಂಬರ್ ನಲ್ಲಿ ಬೆಂಗಳೂರಿನಲ್ಲಿ ಮೊದಲ ಹಂತದ ಶೂಟಿಂಗ್ ಶುರುವಾಗಲಿದೆ. ಸಂಪೂರ್ಣ ಹಾಸ್ಯ ಪ್ರಧಾನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಬಹುತೇಕ ಪಾತ್ರಗಳ ಆಯ್ಕೆ ಪೂರ್ಣಗೊಂಡಿದ್ದು ಮಿಕ್ಕ ಕೆಲವು ಮುಖ್ಯ ಪಾತ್ರಗಳ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ.

ತಾಂತ್ರಿಕ ವರ್ಗದಲ್ಲಿ ನವೀನ್ ಕುಮಾರ್ .ಎಸ್ ಛಾಯಾಗ್ರಹಣ, ಕೆ,ಎಮ್,ಪ್ರಕಾಶ್ ಸಂಕಲನ,ಶ್ರೀಧರ್ ಸಂಭ್ರಮ ಸಂಗೀತ, ಬಾಲು ಕುಮುಟ ನಿರ್ಮಾಣ ನಿರ್ವಹಣೆ,ದಯಾನಂದ್ ಭದ್ರಾವತಿ ವಸ್ತ್ರಾಲಂಕಾರ, ಮಲ್ಲಿಕಾರ್ಜುನ ವರ್ಣಾಲಂಕಾರ ಮಾಡುತ್ತಿದ್ದು ನಿರ್ದೇಶನ ತಂಡದಲ್ಲಿ ಸತೀಶ್ ಕುಮಾರ್, ವಿನೋದ್, ರವಿ ಸಾಥ್ ನೀಡುತ್ತಿದ್ದಾರೆ.

Exit mobile version