Bengaluru: ಕಾಂಗ್ರೆಸ್ (CT Ravi against on Congress) ನಾಯಕರ ವಿರುದ್ಧ ಮಾಜಿ ಸಚಿವ ಸಿ.ಟಿ ರವಿ ಅವರು ವಾಗ್ದಾಳಿ ನಡೆಸಿದ್ದು, ನಮಗೆ ರಾಷ್ಟ್ರ ಭಕ್ತಿ ಹಾಗೂ ಹಿಂದುತ್ವದ ಹುಚ್ಚು. ಆದರೆ
ಕಾಂಗ್ರೆಸ್ಗೆ ಓಟ್ ಬ್ಯಾಂಕ್ (Vote Bank) ಹುಚ್ಚು ಎಂದು ಹೇಳಿಸಿದ್ದಾರೆ.
ಅನಂತ್ ಕುಮಾರ್ ಹೆಗಡೆ (Ananth Kumar Hegde) ಹುಚ್ಚ, ಅವರಿಗೆ ಚಿಕಿತ್ಸೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ನೀಡಬೇಕು ಎಂದು ಸಚಿವ ಶಿವರಾಜ್ ತಂಗಡಗಿ
ನೀಡಿದ ಹೇಳಿಕೆಗೆ ತಿರುಗೇಟು ನೀಡಿದ್ದು, ನಗರದ ಅರಮನೆ ಮೈದಾನದಲ್ಲಿ (CT Ravi against on Congress) ಶುಕ್ರವಾರ ಮಾತನಾಡಿದ ಅವರು ತಿರುಗೇಟು ನೀಡಿದ್ದಾರೆ.
ಅನಂತ್ ಕುಮಾರ್ ಹೆಗಡೆ ಸತತ 6 ಬಾರಿ ಸಂಸದರಾಗಿದ್ದಾರೆ. ಅವರನ್ನು ಟೀಕಿಸುವ ಬರದಲ್ಲಿ ಒಬ್ಬ ಹುಚ್ಚ ಅಂತಾರೆ, ಒಬ್ಬ ನಾಯಿ ಅಂತಾರೆ. ಬಾಯಿಗೆ ಬಂದಂತೆ ಮಾತಾಡಿದ್ರೆ ಇದು ಅಧಿಕಾರದ ಪಿತ್ತ
ತಲೆಗೇರಿದಂತೆ ಎಂದರು. ನಮಗೆ ಹಿಡಿದಿರುವುದು ಹಿಂದುತ್ವದ ಹುಚ್ಚು. ನಿಮಗೆ ಹಿಂದೂ ಸಮಾಜವನ್ನು ಒಡೆಯುವ ಹುಚ್ಚು ಹಾಗೂ ವೋಟ್ ಬ್ಯಾಂಕ್ ಹುಚ್ಚು ಎಂದು ಕಿಡಿಕಾರಿದರು.
ಇದೇ ವೇಳೆ ನಿಮಗೆ ಹಿಡಿದಿರುವ ಹುಚ್ಚು ಹೇಗೆ ಬಿಡಿಸಬೇಕು ಅಂತಾ ಜನರಿಗೆ ಗೊತ್ತಿದೆ ಎಂದು ಸಿ.ಟಿ ರವಿ (CT Ravi) ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದು, ಅನಂತ್ ಕುಮಾರ್ ಹೆಗಡೆ ಏಕವಚನದ
ಹೇಳಿಕೆಯನ್ನು ನಾವು ಸಮರ್ಥನೆ ಮಾಡಿಲ್ಲ. ಹಾಗಂತ ಇವರು ಏನು ಬೇಕಾದರೂ ಮಾತನಾಡಬಹುದಾ? ಅದಕ್ಕೆ ಲೈಸೆನ್ಸ್ (License) ಇದ್ಯಾ? ಅಧಿಕಾರದ ಮದ ತಲೆಗೇರಿದವರು ಆಡುವ ಮಾತಿದು.
ಕಳೆದ ಮೂರು ದಿನಗಳಿಂದ ಕಾಂಗ್ರೆಸ್ ನಾಯಕರ ಹೇಳಿಕೆ ಗಮನಿಸಿದ್ದೇನೆ.
ರಾಜಣ್ಣನವರು ಶ್ರೀರಾಮನ ಬಗ್ಗೆ ಬೊಂಬೆಯಂತೆ ಕಾಣ್ತಾರೆ ಅಂತಾರೆ. ಭಕ್ತಿ ಇದ್ದರೆ ಕಾಣ್ತಾರೆ. ಭಕ್ತಿ ಇರಬೇಕು ಎಂದರು. ಕಾಂಗ್ರೆಸ್ ನವರಿಗೆ ಸನಾತನ ಧರ್ಮದ ಅವಹೇಳನ ಮಾಡೋರು ಲೈಫ್ ಪಾರ್ಟ್ನರ್
(Life Partner) ಗಳಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಏನಿದು ಪ್ರಕರಣ:
ಸಂಸದ ಅನಂತ ಕುಮಾರ್ ಹೆಗಡೆ ಅವರು ಅಯೋಧ್ಯೆ (Ayodhya) ಭೇಟಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು.
ಇದಕ್ಕೆ ಕಾಂಗ್ರೆಸ್ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ನಾಡಿನ ಮುಖ್ಯಮಂತ್ರಿಯನ್ನು ಏಕವಚನದಲ್ಲಿ ಬೈದದ್ದು ಅವರ ಸಂಸ್ಕಾರವನ್ನು ಸೂಚಿಸುತ್ತದೆ ಎಂದು ತರಾಟೆಗ ತೆಗೆದುಕೊಂಡಿದ್ದರು.
ಕಾಂಗ್ರೆಸಿಗರ ಹೇಳಿಕೆಗೆ ತಿರುಗೇಟು ನೀಡಿದ್ದ ಅನಂತ್ ಕುಮಾರ್ (Ananth Kumar) ಅವರು, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನವರು ನಮ್ಮ ಸಂಸ್ಕಾರದ ಬಗ್ಗೆ ಮಾತನಾಡುವ ಅಗತ್ಯವಿಲ್ಲ.
ಸಿದ್ದರಾಮಯ್ಯ ಈ ಬಗ್ಗೆ ಚರ್ಚೆಗೆ ಬರಲಿ. ಯಾರು ಸಂಸ್ಕಾರ ಇರುವವರು, ಯಾರು ಇಲ್ಲದವರು ಎಂಬುದು ಜನರಿಗೆ ತಿಳಿದಿದೆ ಎಂದು ಸವಾಲು ಹಾಕಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ
ಪೊಲೀಸರು ಸ್ವಯಂ ಪ್ರೇರಿತರಾಗಿ ಕೇಸ್ ದಾಖಲಿಸಿದ್ದರು.
ಇದನ್ನು ಓದಿ: ನೀವು ಯಾವ ಸೀಮೆಯ ರಾಮಭಕ್ತ..? – ಮೋದಿ ವಿರುದ್ದ ಸಿದ್ದು ವಾಗ್ದಾಳಿ
- ಭವ್ಯಶ್ರೀ ಆರ್ ಜೆ