Koppala: 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ (CT Ravi Against Siddaramaiah) ಮೈತ್ರಿಕೂಟದ ಅಭ್ಯರ್ಥಿಯಾಗಿದ್ದ ವೇಳೆ ಸಿದ್ದರಾಮಯ್ಯನವರು ಕೂಡಾ ಪ್ರಜ್ವಲ್
ರೇವಣ್ಣ ಪರವಾಗಿ ಹಾಸನದಾದ್ಯಂತ ಪ್ರಚಾರ ಮಾಡಿದ್ದರು ಎಂದು ಕಾಂಗ್ರೆಸ್ ನಾಯಕರ ಆರೋಪಕ್ಕೆ ಬಿಜೆಪಿ ನಾಯಕ ಸಿಟಿ ರವಿ (C T Ravi) ಟಾಂಗ್ ನೀಡಿದ್ದಾರೆ.
ಪ್ರಜ್ವಲ್ ರೇವಣ್ಣ (Prajwal Revanna) ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರ ಮಾಡಿರುವುದನ್ನೇ ದೊಡ್ಡದನ್ನಾಗಿ ಮಾಡಿಕೊಂಡು, ಪ್ರಧಾನಿ ಮೋದಿ ಅವರನ್ನು ಟೀಕಿಸುತ್ತಿರುವ ಕಾಂಗ್ರೆಸ್
ನಾಯಕರಿಗೆ ಉತ್ತರಿಸಿದ ಅವರು, ನಾವು ಜೆಡಿಎಸ್ನೊಂದಿಗೆ ಮೈತ್ರಿಕೊಂಡಿದ್ದೇವೆ. ಹೀಗಾಗಿ ಎನ್ಡಿಎ (NDA) ಒಕ್ಕೂಟದಿಂದ ಮೂರು ಸ್ಥಾನ ಜೆಡಿಎಸ್ಗೆ ಬಿಟ್ಟು ಕೊಟ್ಟಿದ್ದೇವೆ. ಪ್ರಜ್ವಲ್ ರೇವಣ್ಣ ಪ್ರಕರಣಕ್ಕೂ
ಬಿಜೆಪಿಗೂ (BJP) ಸಂಬಂಧ ಇಲ್ಲ (CT Ravi Against Siddaramaiah) ಎಂದು ಸ್ಪಷ್ಟಪಡಿಸಿದರು.
ಕೊಪ್ಪಳ (Koppala) ದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಎಲ್ಲ ಘಟನೆಗಳು ಪ್ರಜ್ವಲ್ ರೇವಣ್ಣ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಯಾದ ನಂತರ ನಡೆದಿಲ್ಲ. ಇನ್ನು ಹಾಸನದಲ್ಲಿ ಯಾರನ್ನು
ಅಭ್ಯರ್ಥಿ ಮಾಡಬೇಕು ಎಂಬ ವಿಚಾರ ಜೆಡಿಎಸ್ (JDS) ಪಕ್ಷಕ್ಕೆ ಬಿಟ್ಟ ವಿಚಾರ ಆಗಿತ್ತು. ಇನ್ನು ನಮ್ಮ ಪಕ್ಷ ಈ ಪ್ರಕರಣವನ್ನು ಖಂಡಿಸಿದೆ.
ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ. ಇದು ಎಲ್ಲರಿಗೂ ಅನ್ವಯವಾಗುತ್ತದೆ. ಮಹಿಳೆಯರ ಮೇಲೆ ಆಗುವ ಯಾವುದೇ ಅನ್ಯಾಯವನ್ನು ಬಿಜೆಪಿ ಪಕ್ಷ ಸಹಿಸುವುದಿಲ್ಲ. ಪ್ರಜ್ವಲ್ ರೇವಣ್ಣ ಪರ ನಾವು ವಕಾಲತ್ತು ಮಾಡಲ್ಲ
ಎಂದರು. ಇದೇ ವೇಳೆ ಮಾಜಿ ಸಂಸದ ಸಂಗಣ್ಣ ಕರಡಿ (Sanganna Karadi) ಟೀಕೆಗೆ ಪ್ರತಿಕ್ರಿಯಿಸಿ ಅವರು, 2019ರಲ್ಲಿ ನರೇಂದ್ರ ಮೋದಿ (Narendra Modi) ಅವರ ಪ್ರಭಾವವೇ ಸಂಗಣ್ಣ ಕರಡಿ ಅವರನ್ನು
ಗೆಲ್ಲಿಸಿತ್ತು.
ಈ ಸತ್ಯ ಸಂಗತಿಯ ದರ್ಶನ ಆಗುವುದಕ್ಕೆ ಹೆಚ್ಚು ಕಾಲ ಹಿಡಿಯಲ್ಲ. ಅದಕ್ಕಾಗಿ ಹಳೆ ಕ್ಯಾಸೆಟ್ ಹಾಕಿ ತೋರಿಸಬೇಕಿಲ್ಲ. ಇನ್ನು ಕಾಂಗ್ರೆಸ್ (Congress) ಪಕ್ಷದಲ್ಲಿ ವಿಶ್ವಾಸಾರ್ಹ ಮತ್ತು ಸದೃಢ ನಾಯಕತ್ವ ಇಲ್ಲ.
ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂದರೆ ಬರುವ ಮತಗಳೂ ಬರುವುದಿಲ್ಲ ಎಂದು ಟೀಕಿಸಿದರು.
ಇದನ್ನು ಓದಿ: ಬಿಜೆಪಿ ಸೋಲಿಸಲು ನಾವು ನೀಡಿರುವ ಭರವಸೆಯ ಬ್ರಹ್ಮಾಸ್ತ್ರ ಸಾಕು: ಮಲ್ಲಿಕಾರ್ಜುನ ಖರ್ಗೆ