ಮುಸ್ಲಿಮರು ಬಹುಸಂಖ್ಯಾತರಾದ ದಿನ ಸಂವಿಧಾನವೂ ಇರಲ್ಲ, ಅಂಬೇಡ್ಕರ್ ಕೂಡಾ ಇರಲ್ಲ : ಸಿ.ಟಿ ರವಿ!

ct ravi

ಈ ದೇಶದಲ್ಲಿ ಮುಸ್ಲಿಮರು(Muslim) ಬಹುಸಂಖ್ಯಾತರಾದ ದಿನ ಸಂವಿಧಾನ(Constitution)ಇರುವುದಿಲ್ಲ, ಅಂಬೇಡ್ಕರ್(Ambedkar) ಇರುವುದಿಲ್ಲ, ಗಾಂಧಿ(Gandhi) ಇರುವುದಿಲ್ಲ, ಕನಕದಾಸರು(Kanakadasaru) ಸೇರಿದಂತೆ ಯಾವ ಮಹಾತ್ಮನಿಗೂ ಇಲ್ಲಿ ಜಾಗ ಇರುವುದಿಲ್ಲ ಎಂದು ಬಿಜೆಪಿ ನಾಯಕ(BJP Leader) ಸಿಟಿ ರವಿ(CT Ravi) ಹೇಳಿದ್ದಾರೆ.

ನಾವು ಹಿಂದೂಗಳು ‘ದೇವನೊಬ್ಬ ನಾಮ ಹಲವು’ ಎಂಬ ತತ್ವವನ್ನು ನಂಬಿದವರು. ಹೀಗಾಗಿಯೇ ಎಲ್ಲ ದೇವರಿಗೂ ಜಾಗ ನೀಡಿದ್ದೇವೆ. ಎಲ್ಲ ಧರ್ಮದವರಿಗೂ ಈ ನೆಲದಲ್ಲಿ ಬದುಕಲು ಅವಕಾಶ ನೀಡಲಾಗಿದೆ. ಜಾತ್ಯಾತೀತತೆ ಎಂಬುದು ನಮ್ಮ ರಕ್ತದಲ್ಲಿದೆ. ಮಸೀದಿಯಲ್ಲಿ ಎಂದಾದರೂ ‘ದೇವನೊಬ್ಬ ನಾಮ ಹಲವು’ ಎಂಬ ಬಹುತ್ವವನ್ನು ಹೇಳಲಾಗುತ್ತದೆಯೇ? ಇನ್ನು ನಮ್ಮ ಈ ನೆಲದಲ್ಲೇ ಬಹುತ್ವವಿದೆ. ನಾವು ಎಲ್ಲ ದೇವರನ್ನು ಪೂಜಿಸುತ್ತೇವೆ, ಗೌರವಿಸುತ್ತೇವೆ. ಆದರೆ ಇಸ್ಲಾಂನಲ್ಲಿ ಇದು ಸಾಧ್ಯವೇ?

ಕೆಲವೇ ಶತಮಾನಗಳ ಹಿಂದೆ ಬೌದ್ದರ ನಾಡಾಗಿದ್ದ ಅಪ್ಘಾನಿಸ್ತಾನ ಇಂದು ಏನಾಗಿದೆ? ಪಾಕಿಸ್ತಾನದಲ್ಲಿ ಹಿಂದೂ, ಜೈನ, ಸಿಖ್ ಸೇರಿದಂತೆ ಎಲ್ಲ ಜನಾಂಗದ ಜನರಿದ್ದರು. ಈಗ ಅವರೆಲ್ಲ ಎಲ್ಲಿ ಹೋದರು? ನಮಗೆ ಜಾತ್ಯಾತೀತತೆಯನ್ನು ಬೋಧಿಸಲಾಗುತ್ತಿದೆ. ಜಾತ್ಯಾತೀತತೆ ಎಂಬುದು ನಮ್ಮ ರಕ್ತದಲ್ಲಿದೆ. ನಮಗೆ ದೇವರಲ್ಲಿ ಭೇದವಿಲ್ಲ. ನಮಗೆ ರಾಮ ಮತ್ತು ರಹಿಮ ಇಬ್ಬರು ಒಂದೇ. ಆದರೆ ಇದನ್ನು ಮುಸ್ಲಿಮರು ಒಪ್ಪುತ್ತಾರಾ ಎಂದು ಕಿಡಿಕಾರಿದರು.

ಇನ್ನು 1947ರಲ್ಲಿ ಈ ದೇಶ ವಿಭಜನೆಯಾಗಿದ್ದೆ ಧರ್ಮದ ಆಧಾರದ ಮೇಲೆ. ಹಿಂದೂಗಳ ಜೊತೆ ಬದುಕಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಸೃಷ್ಟಿಯಾಯಿತು. ಅದಾದ ನಂತರವೂ ಇವರು ಇಲ್ಲಿಯೂ ನಮ್ಮನ್ನು ನೆಮ್ಮದಿಯಾಗಿ ಇರಲು ಬಿಡುತ್ತಿಲ್ಲ. 1947 ರಲ್ಲಿಯೇ ‘ಪಾಕಿಸ್ತಾನದಲ್ಲಿರುವ ಹಿಂದೂಗಳನ್ನು ಭಾರತಕ್ಕೆ ಕರೆತನ್ನಿ, ಇಲ್ಲಿರುವ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳುಹಿಸಿ’ ಎಂದು ಅಂಬೇಡ್ಕರ್ ದೆಹಲಿಯ ಪಾರ್ಲಿಮೆಂಟ್‍ನಲ್ಲೇ ಹೇಳಿದ್ದರು. ಆದರೆ ಅದನ್ನು ಅಂದು ನಿರ್ಲಕ್ಷಿಸಿದ ಪರಿಣಾಮವನ್ನು ಇಂದು ಎದುರಿಸುತ್ತಿದ್ದೇವೆ ಎಂದರು.

ಇನ್ನು ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ಅಳವಡಿಸುವುದಕ್ಕೆ ವಿರೋಧಿಲಾಗುತ್ತಿದೆ. ಆದರೆ ಒಳ್ಳೆಯ ಅಂಶಗಳಿದ್ದರೆ ಕುರಾನ್ ಅನ್ನು ಕೂಡಾ ಪಠ್ಯದಲ್ಲಿ ಅಳವಡಿಸಿ. ಕುರಾನ್ ಮತ್ತು ಭಗವದ್ಗೀತೆಯಲ್ಲಿ ಕೆಟ್ಟ ಅಂಶಗಳಿದ್ದರೆ ಎರಡನ್ನು ತೆಗೆದುಕೊಂಡು ಹೋಗಿ ಅರಬ್ಬಿ ಸಮುದ್ರಕ್ಕೆ ಎಸೆಯಿರಿ. ಕುರಾನ್ ಮತ್ತು ಭಗವದ್ಗೀತೆಯನ್ನು ಚರ್ಚೆಗೆ ಒಳಪಡಿಸಿ. ಆಗ ಜಗತ್ತಿಗೆ ಸತ್ಯದ ಅರಿವಾಗುತ್ತದೆ. ಜಗತ್ತಿಗೆ ಬೇಕಾದ ಬೆಳಕು ಭಗವದ್ಗೀತೆಯಲ್ಲಿದೆ ಎಂದರು.

Exit mobile version