ಪಶ್ಚಿಮ ಬಂಗಾಳದಲ್ಲಿ ಅಬ್ಬರಿಸಿದ ರೀಮಲ್ ಚಂಡಮಾರುತ: ಬಿರುಗಾಳಿ ಸಹಿತ ಮಳೆ, ಜನಜೀವನ ಅಸ್ತವ್ಯಸ್ತ

Kolkata: ಪಶ್ಚಿಮ ಬಂಗಾಳದ (West Bengal) ಕರಾವಳಿ ಪ್ರದೇಶಗಳಲ್ಲಿ ರೀಮಲ್ ಚಂಡಮಾರುತದ (Cyclone Remal) ಎಫೆಕ್ಟ್‌ ಬಹಳ ಜೋರಾಗಿದೆ. ಮಧ್ಯರಾತ್ರಿ ಅಪ್ಪಳಿಸಿದ ಸೈಕ್ಲೋನ್‌ಗೆ ಅಲ್ಲಲ್ಲಿ ಭೂಕುಸಿತ ಉಂಟಾಗಿದೆ. ಬಹು ಶಕ್ತಿಶಾಲಿಯಾದ ರೀಮಲ್ ಚಂಡಮಾರುತವು ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ (Bangladesh) ಕರಾವಳಿಗಳ ನಡುವೆ ಗಂಟೆಗೆ 135 ಕಿಮೀ ವೇಗದ ಗಾಳಿಯೊಂದಿಗೆ ಅಪ್ಪಳಿಸಿದೆ. ಭಾರಿ ಪ್ರಮಾಣದ ಮಳೆ, ಹಾಗೂ ವಿಪರೀತ ರಭಸದ ಗಾಳಿಯಿಂದಾಗಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ.

ಆದರೆ ಸೋಮವಾರ ಬೆಳಿಗ್ಗೆಯಿಂದ ಚಂಡಮಾರುತದ ಆರ್ಭಟ ಕೊಂಚ ತಣ್ಣಗಾಗಿದೆ. ಚಂಡಮಾರುತವು ಕ್ರಮೇಣವಾಗಿ ದುರ್ಬಲವಾಗುವ ಸಾಧ್ಯತೆ ಇದೆ. ಆದರೆ ಈಗಾಗಲೇ ಅದು (Assam, Tripura, Meghalaya and Mizoram)ದ ಕರಾವಳಿಯಾದ್ಯಂತ ವ್ಯಾಪಕ ಹಾನಿ ಸೃಷ್ಟಿಸಿದೆ. ಭಾರೀ ಮಳೆ ಮತ್ತು ಗಾಳಿಯಿಂದಾಗಿ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಹಲವೆಡೆ ಜೋರು ಗಾಳಿಗೆ ಮರಗಳು ಧರೆಗುರುಳಿದ್ದು, ಎಲ್ಲೆಂದರಲ್ಲಿ ಬಿದ್ದಿವೆ.

ಈ ಹಿನ್ನೆಲೆಯಲ್ಲಿ ರೈಲು, ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬಾಂಗ್ಲಾದೇಶ ಮತ್ತು ಪಕ್ಕದ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಮುಂದಿನ ಕೆಲವು ಗಂಟೆಗಳ ಕಾಲ ಪರಿಸ್ಥಿತಿ ಹದಗೆಡುವ ಎಚ್ಚರಿಕೆಯನ್ನು ಐಎಂಡಿ (IMD) ನೀಡಿದೆ.

ಚಂಡಮಾರುತ ಅಪ್ಪಳಿಸುವುದಕ್ಕೂ ಮುನ್ನ ಬಂಗಾಳ ಹಾಗೂ ಉತ್ತರದ ರಾಜ್ಯಗಳ ವಿಪತ್ತು ನಿರ್ವಹಣಾ ಅಧಿಕಾರಿಗಳು ಮತ್ತು ಭದ್ರತಾ ಪಡೆಗಳು ಹೈ ಅಲರ್ಟ್ (High Alert) ಘೋಷಿಸಿದ್ದವು. ಇದರ ಹಾನಿಯನ್ನು ತಪ್ಪಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಸ್ಸಾಂ, ತ್ರಿಪುರಾ, ಮೇಘಾಲಯ ಮತ್ತು ಮಿಜೋರಾಂ ರಾಜ್ಯಗಳಲ್ಲಿನ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿತ್ತು.ಕೋಲ್ಕತ್ತಾ ವಿಮಾನ ನಿಲ್ದಾಣವು ನಿನ್ನೆ ಭಾನುವಾರ ಮಧ್ಯಾಹ್ನದಿಂದ 21 ಗಂಟೆಗಳ ಕಾಲ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.

ಕೋಲ್ಕತ್ತಾದ ಶ್ಯಾಮ ಪ್ರಸಾದ್ ಮುಖರ್ಜಿ (Shyam Prasad Mukherji) ಬಂದರು ನಿನ್ನೆ ಭಾನುವಾರ ಸಂಜೆಯಿಂದ 12 ಗಂಟೆಗಳ ಕಾಲ ಎಲ್ಲಾ ಸರಕು ಮತ್ತು ಕಂಟೈನರ್ ನಿರ್ವಹಣೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಆ ಸಮಯದಲ್ಲಿ ಬಂದರು ಪ್ರದೇಶದಲ್ಲಿ ರೈಲ್ವೆ ಕಾರ್ಯಾಚರಣೆಯನ್ನು ಸಹ ಸ್ಥಗಿತಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Exit mobile version