ಯಾಸ್ ಚಂಡಮಾರುತದ ಹಿನ್ನೆಲೆ: ಮೇ 24 ಮತ್ತು 29ರ ನಡುವೆ ಪೂರ್ವ ರೈಲ್ವೆ ವಿಭಾಗದ 25 ರೈಲುಗಳ ಸಂಚಾರ ಸ್ಥಗಿತ

ಹೊಸದಿಲ್ಲಿ, ಮೇ. 24: ಯಾಸ್ ಚಂಡಮಾರುತದ ಹಿನ್ನೆಲೆಯಲ್ಲಿ ಪೂರ್ವ ರೈಲ್ವೆ ವಿಭಾಗವು ಮೇ 24 ಮತ್ತು 29ರ ನಡುವೆ 25 ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಿದೆ.

ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಯಾಸ್ ಚಂಡಮಾರುತ ಮೇ26ರಂದು ಪಶ್ವಿಮ ಬಂಗಾಳ ಹಾಗೂ ಉತ್ತರ ಒಡಿಶಾ ಭಾಗಕ್ಕೆ ಅಪ್ಪಳಿಸಲಿದ್ದು, ಅಂದಾಜು 155 ರಿಂದ 165ರ ವೇಗದಲ್ಲಿ ಗಾಳಿ ಬೀಸಲಿದೆ. ಈ ಗಾಳಿಯು ಅತ್ಯಂತ ಅಪಾಯದ ಮಟ್ಟದಲ್ಲಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಡೈರೆಕ್ಟರ್ ಜನರಲ್ ಡಾ.ಮೃತ್ಯುಂಜಯ ಮಹೋಪಾತ್ರ ಮಾಹಿತಿ ನೀಡಿದ್ದಾರೆ.

ಯಾಸ್ ಚಂಡಮಾರುತದ ವೇಗ ಇತ್ತೀಚೆಗೆ ಅಪ್ಪಳಿಸಿದ್ದ ತೌಕ್ತೆ ಚಂಡಮಾರುತ ಹಾಗೂ ಕಳೆದ ವರ್ಷ ಭೂಕುಸಿತ ಸೃಷ್ಟಿಸಿದ್ದ ಅಫನ್ ಚಂಡಮಾರುತದಷ್ಟೇ ವೇಗವನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.‌ ಈ ಹಿನ್ನೆಲೆಯಲ್ಲಿ ಮೇ ಅಂತ್ಯದಲ್ಲಿ ಉತ್ತರ ಭಾರತದ ಕರಾವಳಿಗೆ ಅಪ್ಪಳಿಸಲಿರುವ ಯಾಸ್ ಚಂಡಮಾರುತದ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ರೈಲು ಸಂಚಾರ ಸ್ಥಗಿತಗೊಳಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.‌ ಈ ಹಿನ್ನೆಲೆಯಲ್ಲಿ ಮೇ 24 ಮತ್ತು 29ರ ನಡುವೆ 25 ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಿ ಪೂರ್ವ ರೈಲ್ವೆ ವಿಭಾಗ ಈ ಸಂಬಂಧ ಪತ್ರಿಕಾ ಪ್ರಕಟಣೆ ಬಿಡುಗಡೆ‌ ಮಾಡಿದೆ.

Exit mobile version