ತೆರಿಗೆ ರಿಯಾಯಿತಿ ಕೋರಿ ಸಿಎಂಗೆ ಮನವಿ ಸಲ್ಲಿಸಿದ “ಡೇರ್ ಡೆವಿಲ್ ಮುಸ್ತಾಫಾ” ಚಿತ್ರತಂಡ

daredavil musthfa

ಬೆಂಗಳೂರು : ಡೇರ್ ಡೆವಿಲ್ ಮುಸ್ತಫಾ ಚಿತ್ರಕ್ಕೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ ನೀಡಬೇಕೆಂದು ಕೋರಿ ಚಿತ್ರತಂಡ ಮುಖ್ಯಮಂತ್ರಿ ಸಿದ್ದರಾಮಯ್ಯ (daredevil mustafa tax free) ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.

ಸಮಾಜದಲ್ಲಿನ ಕೋಮುದ್ವೇಷವನ್ನು ಬಯಲಿಗೆಳೆಯುವ ಮತ್ತು ಕೋಮು ಸೌಹಾರ್ದತೆಯನ್ನು ಸಾರುವ ಪ್ರಯತ್ನವನ್ನು ಈ ಸಿನಿಮಾದಲ್ಲಿ ಮಾಡಲಾಗಿದೆ. ಶಶಾಂಕ್ ಸೊಹಗಲ್ ನಿರ್ದೇಶನದ

ಈ ಚಿತ್ರವು ಮೇ 19 ರಂದು ತೆರೆಗೆ ಬಂದಿದೆ. ಹೀಗಾಗಿ ಚಿತ್ರತಂಡ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚಿತ್ರಕ್ಕೆ ತೆರಿಗೆ ವಿನಾಯಿತಿ (daredevil mustafa tax free) ಏಕೆ ಎಂದು ವಿವರಿಸಿದರು.

ಖ್ಯಾತ ಬರಹಗಾರ ಪೂರ್ಣಚಂದ್ರ ತೇಜಸ್ವಿ ಅವರ ಕಾದಂಬರಿ ಆಧರಿಸಿ ಶಶಾಂಕ್ ನಿರ್ದೇಶನದ ‘ಡೇರ್ ಡೆವಿಲ್ ಮುಸ್ತಫಾ’ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ

ಚಿತ್ರತಂಡ ಮುಖ್ಯಮಂತ್ರಿ

ಇದನ್ನು ಓದಿ: ಹಳೆಯ ಪಿಂಚಣಿ ಯೋಜನೆಯನ್ನು ಪುನರ್ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುವುದು : ಡಿಕೆ ಶಿವಕುಮಾರ್

ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದೆ ಎಂದು ಸಿಎಂ ಕಚೇರಿ ಟ್ವೀಟ್ ಮಾಡಿದೆ. ಆದರೆ, ತೆರಿಗೆ ವಿನಾಯಿತಿ ಕುರಿತು ಇನ್ನೂ ನಿರ್ಧಾರವಾಗಿಲ್ಲ ಎನ್ನಲಾಗಿದೆ.

ಈ ಹಿಂದೆ, ದಿ ಕಾಶ್ಮೀರ್ ಫೈಲ್ಸ್ನಂತಹ ಚಲನಚಿತ್ರಗಳು ಕರ್ನಾಟಕದಲ್ಲಿ ತೆರಿಗೆ ವಿನಾಯಿತಿಯನ್ನು ಪಡೆದಿದ್ದವು. ಈ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವಿಟರ್ನಲ್ಲಿ ವಿವಾದಾತ್ಮಕ

ಚಿತ್ರವನ್ನು ಶ್ಲಾಘಿಸಿದ್ದಾರೆ. “ಕಾಶ್ಮೀರಿ ಪಂಡಿತರು ತಮ್ಮ ತಾಯ್ನಾಡಿನಿಂದ ನಿರ್ಗಮಿಸುವ ಕಟುವಾದ ಮತ್ತು ಪ್ರಾಮಾಣಿಕ ನಿರೂಪಣೆಯ ಕಾಶ್ಮೀರಿ ಫೈಲ್ಸ್ಗಾಗಿ ವಿವೇಕ ಅಗ್ನಿಹೋತ್ರಿ ಅವರಿಗೆ ಅಭಿನಂದನೆಗಳು.

ಚಲನಚಿತ್ರಕ್ಕೆ ನಮ್ಮ ಬೆಂಬಲವನ್ನು ನೀಡಲು ಮತ್ತು ಅದನ್ನು ವೀಕ್ಷಿಸಲು ನಮ್ಮ ಜನರನ್ನು ಪ್ರೋತ್ಸಾಹಿಸಲು, ನಾವು ಕರ್ನಾಟಕದಲ್ಲಿ ಚಲನಚಿತ್ರವನ್ನು ತೆರಿಗೆ ಮುಕ್ತಗೊಳಿಸುತ್ತೇವೆ.”ಎಂದು ಘೋಷಿಸಿದ್ದರು.

ಅದೇ ರೀತಿ ಬಿಜೆಪಿ ಸರ್ಕಾರವು ಇತ್ತೀಚೆಗೆ ಬಿಡುಗಡೆಯಾದ ‘ದಿ ಕೇರಳ ಸ್ಟೋರಿ’ಯ ವಿಶೇಷ ಪ್ರದರ್ಶನವನ್ನು ಶಾಲಾ ಮಕ್ಕಳಿಗೆ ಏರ್ಪಡಿಸಿತ್ತು. ‘ದಿ ಕೇರಳ ಸ್ಟೋರಿ’ಯಂತಹ ಸಿನಿಮಾಗಳು

ಭಾರತದ ವಿರುದ್ಧದ ಪಿತೂರಿಗಳನ್ನು ಬಯಲು ಮಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದೀಗ ಡೆರ್ ಡೆವೀಲ್ ಮುಸ್ತಾಫಾ ಸಿನಿಮಾಗೆ ತೆರಿಗೆ ವಿನಾಯಿತಿ ಕೋರಿ ಮನವಿ

ಸಲ್ಲಿಸಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Exit mobile version