ಕೊಲೆ ಕೇಸ್ ನಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಧನ

Bangalore: ರೇಣುಕಾ ಸ್ವಾಮಿ (Renuka Swami) ಎಂಬ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ಕನ್ನಡದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಅವರನ್ನು ಬೆಂಗಳೂರು ಪೊಲೀಸರು ಮೈಸೂರಿನಲ್ಲಿ ಬಂಧಿಸಿದ್ದಾರೆ (Arrested in Mysore) . ಈ ಪ್ರಕರಣ ಇದೀಗ ರಾಜ್ಯಾದ್ಯಂಯ ತೀವ್ರ ಸಂಚಲನಕ್ಕೆ ಕಾರಣವಾಗಿವೆ.

ಚಿತ್ರದುರ್ಗ (Chitradurga) ಮೂಲದ ರೇಣುಕಾಸ್ವಾಮಿ ಎಂಬ ವ್ಯಕ್ತಿಯು ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ (Kamakshipalaya, Bangalore) ನೆಲೆಸಿದ್ದು, ಸಾಮಾಜಿಕ ಜಾಲತಾಣದಲ್ಲಿ ರೇಣುಕಾ ಸ್ವಾಮಿ ಅವರು ದರ್ಶನ್ ಗೆಳತಿ ಪವಿತ್ರಾಗೌಡ (Pavitra Gowda) ಅವರಿಗೆ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದು, ಇದೆ ಕಾರಣಕ್ಕೆ ದರ್ಶನ್ ಸೂಚನೆಯ ಮೇಲೆ ಕೊಲೆ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ರಾಜರಾಜೇಶ್ವರಿ ಠಾಣೆ (Rajarajeshwari Station) ಪೊಲೀಸರು ದರ್ಶನ್ ಅವರನ್ನು ಬಂಧನ ಮಾಡಿದ್ದಾರೆ (Arrested) . ಈಗ ಪೊಲೀಸರು ದರ್ಶನ್ ಅವರನ್ನು ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲು ಸಿದ್ಧತೆ ನಡೆಸಿದ್ದಾರೆ.

ಇನ್ನು ಜೂನ್ 8 ರವಿವಾರದಂದು ರೇಣುಕಾ ಸ್ವಾಮಿ ಹತ್ಯೆ ನಡೆದಿದೆ ಎನ್ನಲಾಗಿದ್ದು, ಕೊಲೆ ಮಾಡಿರುವ 2 ಅರೋಪಿಗಳ ಜೊತೆ ದರ್ಶನ್ (Darshan) ಸಂಪರ್ಕದಲ್ಲಿದ್ದರು ಎಂಬ ಆರೋಪವಿದೆ. ವಿಚಾರಣೆಯ ವೇಳೆ ಕೊಲೆ ಆರೋಪಿಗಳು ದರ್ಶನ್ ಸೂಚನೆಯಂತೆ ಕೊಲೆ ಮಾಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ.

Exit mobile version