ಆರೆಸ್ಸೆಸ್‌ ಮಹಾ ಕಾರ್ಯದರ್ಶಿಯಾಗಿ ದತ್ತಾತ್ರೇಯ ಹೊಸಬಾಳೆ ನೇಮಕ

ಬೆಂಗಳೂರು, ಮಾ. 20: ರಾಷ್ಟ್ರೀಯ ಸ್ವಯಂ ಸೇವಾ ಸಂಘ (ಆರ್.ಎಸ್.ಎಸ್) ಪ್ರಮುಖ ಸ್ಥಾನವೊಂದಕ್ಕೆ ಕರ್ನಾಟಕ ಮೂಲದವರು ಆಯ್ಕೆ ಆಗಿದ್ದಾರೆ. ಆ ಮೂಲಕ ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತರುವಾಯದ ಸ್ಥಾನವನ್ನು ಈ ಕನ್ನಡಿಗ ಅಲಂಕರಿಸಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭಾದ ದ್ವೈವಾರ್ಷಿಕ ಸಭೆಯಲ್ಲಿ ದತ್ತಾತ್ರೇಯ ಹೊಸಬಾಳೆ ಅವರನ್ನು ಸಂಘದ ಸರಕಾರ್ಯವಾಹ್ ಆಗಿ ನೇಮಕ ಮಾಡಲಾಗಿದೆ.

ಮೂಲತಃ ಕರ್ನಾಟಕದ ಶಿವಮೊಗ್ಗ ಮೂಲದವರಾದ ದತ್ತಾತ್ರೇಯ ಹೊಸಬಾಳೆ, ಸೊರಬ ತಾಲ್ಲೂಕಿನಲ್ಲಿ ಜನಿಸಿದ್ದು, ಇಂಗ್ಲಿಷ್ ಸಾಹಿತ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದಾರೆ. 1968 ರಲ್ಲಿ ಅವರು ಸಂಘ ಪರಿವಾರ ಸೇರಿ ಎಬಿವಿಪಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ನಂತರ ಆರೆಸ್ಸೆಸ್‌ ಸಂಯೋಜಕರಾಗಿ ಕೆಲಸ ಮಾಡಿದರು. ಅವರು ಆರ್.ಎಸ್.ಎಸ್ ನ ಟಾಪ್ ಪೋಸ್ಟ್ ಸ್ಥಾನ ಅಲಂಕರಿಸಿ, ಕರ್ನಾಟಕದ ಸಂಘ ಪರಿವಾರದವರ ಸಂತಸವನ್ನು ಇಮ್ಮಡಿಗೊಳಿಸಿದೆ.

Exit mobile version