ದಾವಣೆಗೆರೆಯಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ದಾವಣಗೆರೆ ಸೆ 20 : ದಾವಣಗೆರೆಯಲ್ಲಿ ಒಂದೇ ಕುಟುಂಬದ ಮೂವರು ಸದಸ್ಯರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಾವಣಗೆರೆಯ ಭರತ್ ಕಾಲೋನಿಯಲ್ಲಿ ನಡೆದಿದೆ.

ಈ ಹೃದಯ ವಿದ್ರಾವಕ ಘಟನೆಯು ದಾವಣಗೆರೆಯ ಭರತ್ ಕಾಲೋನಿಯ ಶೇಖರಪ್ಪ ಬಿ ಬ್ಲಾಕ್ ನಲ್ಲಿ  ನಡೆದಿದ್ದು, 35 ವರ್ಷದ ಕೃಷ್ಣಾ ನಾಯ್ಕ್, ಪತ್ನಿ ಸುಮಾ ಮತ್ತು ಆರು ವರ್ಷದ ಮಗು ಧ್ರುವ ಆತ್ಮಹತ್ಯೆಗೆ ಶರಣಾಗಿದ್ದಾರೆ ಮಗು ಮತ್ತು ತನ್ನ ಪತ್ನಿಗೆ ವಿಷ ಕುಡಿಸಿ ಬಳಿಕ ಕೃಷ್ಣಾ ನಾಯ್ಕ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಕೃಷ್ಣಾ ನಾಯ್ಕ್ ಅವರು ಲಾರಿ ಚಾಲಕರಾಗಿದ್ದರು. ಪತ್ನಿ ಸುಮಾ ಅನಾರೋಗ್ಯದಿಂದ ಬಳಲುತ್ತಿದ್ದರು  ಖಾಯಿಲೆ ಹಾಗೂ ಇನ್ನತರೆ ಕಾರಣದಿಂದ, ಖರ್ಚು ವೆಚ್ಚವು ಹೆಚ್ಚಾಗಿತ್ತು. ಹೀಗಾಗಿಯೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಈ ಸಂಬಂಧ ಎಂಆರ್ ಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದುವರೆಸಿದ್ದಾರೆ

Exit mobile version