ಸಂಭಾವನೆ ಪಡೆಯದೆ ಕೃಷಿ‌ ಇಲಾಖೆ ರಾಯಭಾರಿಯಾಗಿ ಅಧಿಕಾರ ಸ್ವೀಕರಿಸಿದ ಡಿ’ಬಾಸ್

ಬೆಂಗಳೂರು, ಮಾ. 05: ಸಂಭಾವನೆಯನ್ನೇ ಪಡೆಯದೆ ನಟ ದರ್ಶನ್‌ ಕೃಷಿ ರಾಯಭಾರಿಯಾಗಿ ಅಧಿಕಾರ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ನಟ ದರ್ಶನ್‌ಗೆ ಹಸಿರು ಶಾಲು ಹೊದಿಸಿ, ಮೈಸೂರು ಪೇಟಾ, ನೇಗಿಲು ಕೊಟ್ಟು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸನ್ಮಾನ ಮಾಡಿದರು. ಕೃಷಿ ಇಲಾಖೆ ಸಚಿವ ಬಿ.ಸಿ.ಪಾಟೀಲ್ ಸಮ್ಮುಖದಲ್ಲಿ ನಟ ದರ್ಶನ್​ ನೂತನ ರಾಯಭಾರಿಯಾಗಿ ನೇಮಕಗೊಂಡರು.

ಈ ವೇಳೆ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಯಾವುದೇ ಸಂಭಾವನೆ ಪಡೆಯದೇ ನಟ ದರ್ಶನ್​ ರಾಯಭಾರಿಯಾಗಿದ್ದಾರೆ. ಬೇರೆ ನಟರಾಗಿದ್ದರೆ ಕೋಟಿ ಕೋಟಿ ಹಣ ಪಡೆದು ಕಂಪನಿಗಳ ರಾಯಭಾರಿಯಾಗುತ್ತಿದ್ದರು. ಇಲ್ಲಿಯವರೆಗೆ ಕೃಷಿ ಇಲಾಖೆಯಲ್ಲಿ ಕಂಡು ಕೇಳರಿಯದ ಕಾರ್ಯಕ್ರಮ ಎಂದು ಸ್ಮರಿಸಿದರು.

Exit mobile version