ಗೋ ಹತ್ಯೆ ಕೇಸ್: ಮನೇಕಾ ಗಾಂಧಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಇಸ್ಕಾನ್

New Delhi: ಗೋವುಗಳನ್ನು ಇಸ್ಕಾನ್ (Defamation suit on Maneka Gandhi) ಕಟುಕರಿಗೆ ಮಾರಾಟ ಮಾಡುತ್ತಿದೆ ಎಂದು ಬಿಜೆಪಿ (BJP) ಸಂಸದೆ ಮನೇಕಾ ಗಾಂಧಿ ಅವರು ಹೇಳಿಕೆ ನೀಡಿದರು.

ಈ ಆರೋಪದ ವಿರುದ್ಧ ಇಸ್ಕಾನ್ 100 ಕೋಟಿ ರೂ. ಮಾನನಷ್ಟ (Defamation suit on Maneka Gandhi) ಮೊಕದ್ದಮೆ ಹೂಡಿದೆ.

ಸಂಪೂರ್ಣ ಆಧಾರರಹಿತ ಆರೋಪಗಳನ್ನು ಇಸ್ಕಾನ್ ವಿರುದ್ಧ ಹೊರಿಸಿದ್ದಕ್ಕಾಗಿ ಮನೇಕಾ ಗಾಂಧಿ (Maneka Gandhi) ಅವರಿಗೆ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ನೋಟಿಸ್

ಕಳುಹಿಸಿಲಾಗಿದ್ದು, ಇಸ್ಕಾನ್ ಭಕ್ತರು, ಬೆಂಬಲಿಗರು ಮತ್ತು ಹಿತೈಷಿಗಳಿಗೆ ನಿಂದನೆ ಹಾಗೂ ದುರುದ್ದೇಶಪೂರಿತ ಆರೋಪಗಳಿಂದ ತೀವ್ರ ಬೇಸರ ಉಂಟಾಗಿದೆ ಎಂದು ಕೋಲ್ಕತ್ತಾದ ಉಪಾಧ್ಯಕ್ಷ

ರಾಧಾರಮಣ್ ದಾಸ್ (Radharaman Das) ಹೇಳಿದ್ದಾರೆ

ಜಾಗತಿಕ ಮಟ್ಟದಲ್ಲಿ ಅತ್ಯಂತ ಪ್ರಭಾವಶಾಲಿ ಕೃಷ್ಣ ಪಂಥವೆಂದು ಗುರುತಿಸಲ್ಪಟ್ಟಿರುವ ಇಸ್ಕಾನ್ ಈ ಆರೋಪಗಳನ್ನು ತಳ್ಳಿಹಾಕಿದ್ದು, ಇದನ್ನು ಸುಳ್ಳು ಎಂದು ಹೇಳಿದೆ. ಇತ್ತೀಚಿನ ವೈರಲ್

ವೀಡಿಯೊದಲ್ಲಿ (Viral Video) ಮನೇಕಾ ಗಾಂಧಿ ಆಂಧ್ರ ಪ್ರದೇಶದ ಇಸ್ಕಾನ್‌ನ ಅನಂತಪುರ ಗೋಶಾಲಾಗೆ ಭೇಟಿ ನೀಡಿದ್ದ ಕುರಿತು ಮಾತನಾಡಿದ್ದು ಅಲ್ಲಿ ವಯಸ್ಸಾಗಿರುವ ಹಸುಗಳು,

ಹೋರಿಗಳು ಅಥವಾ ಕರುಗಳಾಗಲಿ ಇಲ್ಲ ಅವುಗಳನ್ನು ಇಸ್ಕಾನ್ ಮಾಂಸ ಮಾರಾಟಗಾರರಿಗೆ ಮಾರಿದೆ ಎಂದು ಹೇಳಿಕೆ ನೀಡಿದ್ದರು.

ಈ ಆರೋಪಗಳಿಗೆ ಇಸ್ಕಾನ್ ಪ್ರತಿಕ್ರಿಯೆ ನೀಡಿದ್ದು, ಅವುಗಳನ್ನು ಆಧಾರ ರಹಿತ ಎಂದು ಬಣ್ಣಿಸಿದೆ. ಇಸ್ಕಾನ್​ನ ರಾಷ್ಟ್ರೀಯ ವಕ್ತಾರ ಯುಧಿಷ್ಠಿರ್ ಗೋವಿಂದ್ ದಾಸ್ (Yudhishthira Govind Das)

ಮಾತನಾಡಿದ್ದು, ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ಗೋವುಗಳು ಹಾಗೂ ಗೂಳಿಗಳ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿದೆ. ಹಸುಗಳು ಮತ್ತು ಗೂಳಿಗಳು ಇಸ್ಕಾನ್​ನ ಗೋಶಾಲೆಯಲ್ಲಿ ಬದುಕಿರುವವರೆಗೂ

ಇರುತ್ತವೆ. ಒಂದೇ ಒಂದು ಹಸು, ಎತ್ತು ಅಥವಾ ಕರುವನ್ನು ಕಟುಕರಿಗೆ ಮಾರುವುದಿಲ್ಲ.

ಪ್ರಶಾಂತ್ ಕನೋಜಿಯಾ (Prashanth Kanojia) ಅವರು ಎಕ್ಸ್​ ಪೋಸ್ಟ್​ ಮಾಡಿದ್ದು, ಭಾರತದಲ್ಲಿ ಅತಿ ಹೆಚ್ಚು ಬೋಗಸ್ ಮತ್ತು ಮೋಸ ಮಾಡುವ ಸಂಸ್ಥೆ ಇದ್ದರೆ ಅದು ಇಸ್ಕಾನ್ ಎಂದು ಹಲವು

ವರ್ಷಗಳಿಂದ ಹೇಳುತ್ತಿದ್ದೇನೆ. ಈಗ ಬಿಜೆಪಿಯ ಹಿರಿಯ ನಾಯಕಿ ಮನೇಕಾ ಗಾಂಧಿ ಕೂಡ ಅದೇ ಮಾತನಾಡಿದ್ದಾರೆ ಎಂದು ಹೇಳಿದರು.

ಇದನ್ನು ಓದಿ: ಗೋ ಹತ್ಯೆ ಕೇಸ್: ಮನೇಕಾ ಗಾಂಧಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಇಸ್ಕಾನ್

Exit mobile version