ಮೊದಲ ಬಲಿ ತೆಗೆದುಕೊಂಡ ಡೆಲ್ಟಾ ಪ್ಲಸ್ ವೈರಸ್

ಮಧ್ಯಪ್ರದೇಶ,ಜೂ.24 : ಕಳೆದ ಒಂದುವರೆ ವಷ೯ದಿಂದ ಕೊರೊನಾ ಮಾಹಮಾರಿ ವೈರಸ್ ಜನರನ್ನು ಸಾಯುವಷ್ಟು ಭಯಪಡಿಸಿಬಿಟ್ಟಿದೆ. ಅದರ ಜೊತೆ ಜೊತೆಗೆ ಕೆಲವು ವೈರಸ್‌ಗಳು ಜನ್ಮತಾಳುತ್ತಿದೆ, ಇತ್ತಿಚ್ಚಿಗಷ್ಟೆ ಕಾಣಿಸಿಕೊಂಡ ಡೆಲ್ಟಾ ಪ್ಲಸ್‌ ವೈರಸ್ ಕೂಡ ಜನರಲ್ಲಿ ಭಯ ಹುಟ್ಟಿಸುತ್ತಿದೆ. ಭಾರತಕ್ಕೂ ಕಾಲಿಟ್ಟ ಈ ವೈರಸ್ ಕೊನೆಗೂ ಒಂದು ಬಲಿತೆಗೆದುಕೊಂಡಿದೆ

ಮಧ್ಯಪ್ರದೇಶದಲ್ಲಿ ಮಹಿಳೆಯೋರ್ವಳು ಡೆಲ್ಟಾ ಪ್ಲಸ್ ವೈರಸ್ ನಿಂದ ಸಾವನಪ್ಪಿದ್ದಾರೆ. ಮೃತ ಮಹಿಳೆ ಮಧ್ಯಪ್ರದೇಶದ ಉಜ್ಜೈನಿ ಜಿಲ್ಲೆ ಮೂಲದವರು ಎನ್ನಲಾಗಿದೆ.  ಮೃತ ಮಹಿಳೆ ವ್ಯಾಕ್ಸಿನ್ ಪಡೆದಿರಲಿಲ್ಲ ಎನ್ನಲಾಗಿದೆ.

ದೇಶದಲ್ಲಿ ಕೊರೊನಾ ಡೆಲ್ಟಾ ಪ್ಲಸ್‌ ಗೆ ಮೊದಲ ಬಲಿಯಾಗಿದೆ. ಅಪಾಯಕಾರಿ ಡೆಲ್ಟಾ ಪ್ಲಸ್ ವೈರಸ್ ಬಗ್ಗೆ ಈಗಾಗಲೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ನೀಡಿದೆ. ಕೊರೊನಾ ವೈರಸ್‌ಗಿಂತ ಈ ವೈರಸ್ ಬೇಗ ಹರಡುವ ಸಾದ್ಯತೆ ಇದೆ. ಎಲ್ಲಾರು ವ್ಯಾಕ್ಸಿನ್ಗಳನ್ನು ಹಾಕಿಸಿಕೊಳ್ಳಬೇಕು.

ಮದ್ಯಪ್ರದೇಶದಲ್ಲಿ ಈವರೆಗೂ ಐವರು ಡೆಲ್ಟಾ ಪ್ಲಸ್ ಮಾದರಿಯ ಸೋಂಕಿತರು ಪತ್ತೆಯಾಗಿದ್ದಾರೆ. ಇದೀಗ ಮಹಿಳೆ ಸಾವನಪ್ಪಿದ್ದಾರೆ. ಉಳಿದ  ನಾಲ್ವರಲ್ಲಿ ಮೂವರು ಭೂಪಾಲ್ ಮೂಲದವರಾದರೆ ಉಳಿದಿಬ್ಬರು ಉಜ್ಜೈನಿ ಜಿಲ್ಲೆ ಮೂಲದವರು ಎನ್ನಲಾಗಿದೆ. ನಾಲ್ವರಿಗೆ ಈಗಾಗ್ಲೇ ಚಿಕಿತ್ಸೆ ನೀಡಲಾಗುತ್ತಿದೆಉಳಿದ ನಾಲ್ವರು ವ್ಯಾಕ್ಸಿನ್ ಪಡೆದಿದ್ದಾರೆ,  ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತಿದೆ ಎನ್ನಲಾಗಿದೆ. 

Exit mobile version