ಡೆಂಗ್ಯೂ ಕಾಟ: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ಡೆಂಗ್ಯೂ ಆರ್ಭಟ, ರೋಗಿಗಳಿಂದ ಭರ್ತಿಯಾದ ಆಸ್ಪತ್ರೆಗಳು

Bengaluru: ನಗರದಲ್ಲಿ ಕಳೆದ ವರ್ಷ ಈ ಸಮಯದಲ್ಲಿ ಡೆಂಗ್ಯೂ (Dengue increases in Silicon City) ಜ್ವರದ ಪ್ರಕರಣಗಳು ಕೇವಲ 1058 ಇತ್ತು. ಆದರೆ ಈ ಬಾರಿ 3,454 ಕ್ಕೆ

ಏರಿಕೆಯಾಗಿದ್ದು, ಜನ ಎಚ್ಚರಿಕೆಯಿಂದ, ಕಾಳಜಿ ವಹಿಸುವುದು ಸೊಳ್ಳೆ ಕಚ್ಚದಂತೆ ನಿಯಂತ್ರಿಸುವುದು ಬಹಳ ಅಗತ್ಯವಾಗಿದೆ. ಬೆಂಗಳೂರಿನ ಆಸ್ಪತ್ರೆಗಳಲ್ಲಿ ಜನ ತುಂಬಿ ತುಳುಕುತ್ತಿದ್ದು, ಮಳೆ

ನಿರಂತರವಾಗಿ ಬಾರದ ಕಾರಣ ಸೊಳ್ಳೆಗಳು ಮೊಟ್ಟೆ ಇಡುವುದಕ್ಕೆ (Dengue increases in Silicon City) ಪೂರಕ ವಾತಾವರಣ ಮಾಡಿಕೊಟ್ಟಿದೆ.

ಈ ಪ್ರಕರಣಗಳು ಹೆಚ್ಚಾಗಿರುವುದರಿಂದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಡೆಂಗ್ಯೂ ರೋಗಿಗಳಿಂದ ತುಂಬಿ ತುಳುಕುತ್ತಿವೆ. ಇನ್ನು ರಾಜ್ಯದಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 5,500 ಪ್ರಕರಣಗಳು

ವರದಿಯಾದರೆ, ರಾಜಧಾನಿಯಲ್ಲಿ 1,058 ಪ್ರಕರಣಗಳು ಪತ್ತೆಯಾಗಿದ್ದವು. ಆದರೆ 2021ರ ಸೆಪ್ಟೆಂಬರ್‌ (September) ಅಂತ್ಯಕ್ಕೆ ನಗರದಲ್ಲಿ ಕೇವಲ 520 ಪ್ರಕರಣಗಳು ಮಾತ್ರ ದಾಖಲಾಗಿದ್ದವು.

ಮಳೆಗಾಲದ ಆರಂಭ ಮತ್ತು ಅಂತ್ಯದಲ್ಲಿ ಡೆಂಗ್ಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಇನ್ನು ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಮಳೆ ತೀರಾ ಕಡಿಮೆ ಇದ್ದರು ಈ ಪ್ರಕರಣಗಳ ಸಂಖ್ಯೆ ಮಾತ್ರ ಹೆಚ್ಚಾಗಿದೆ. ಕಾರಣ, ಮಳೆ ನಿರಂತರವಾಗಿ ಬೀಳದೆ ಇರುವುದರಿಂದ

ಸೊಳ್ಳೆಗಳು ಮೊಟ್ಟೆ ಇಡುವುದಕ್ಕೆ ಪೂರಕ ವಾತಾವರಣವಿದ್ದು, ನಿರಂತರವಾಗಿ ಮಳೆ ಸುರಿಯುತ್ತಿದ್ದರೆ ನೀರು ನಿಲ್ಲುತ್ತಿರಲಿಲ್ಲ, ಮೊಟ್ಟೆಗಳು ನೀರಿನಲ್ಲಿ ಕೊಚ್ಚಿಹೋಗುತ್ತಿದ್ದವು ಎನ್ನುತ್ತಾರೆ ತಜ್ಞರು.

ಜ್ವರದ ಲಕ್ಷಣಗಳು:

ಬಿಬಿಎಂಪಿ (BBMP) ವಿಶೇಷ ಆಯುಕ್ತ (ಆರೋಗ್ಯ) ಡಾ. ಕೆ.ವಿ. ತ್ರಿಲೋಕಚಂದ್ರ (Dr. K V Trilokachandra) ಅವರು ಬುಧವಾರದಿಂದ (ಸೆ.6) ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು

ಹಾಗೂ ನರ್ಸಿಂಗ್‌ (Nursing) ವಿದ್ಯಾರ್ಥಿಗಳ ಮೂಲಕ ನಗರದಲ್ಲಿ ಡೆಂಗ್ಯೂ ಶಿಬಿರಗಳನ್ನು ನಡೆಸಲಾಗುತ್ತದೆ. ಅಲ್ಲದೆ ಜಾಗೃತಿ ಜತೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಜನರಿಗೆ

ತಿಳಿಸಲಾಗುತ್ತದೆ. ಸದ್ಯಕ್ಕೆ ಮನೆಯ ಮೇಲ್ಚಾವಣಿ ಸೇರಿದಂತೆ ಅಕ್ಕಪಕ್ಕದಲ್ಲಿಯೇ ಸೊಳ್ಳೆಗಳು ಮೊಟ್ಟೆ ಇಡುತ್ತಿರುವುದರಿಂದ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿವೆ ಎಂದು ಹೇಳಿದರು.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸುವ ಸಂಬಂಧ ಶಾಲೆ, ಕಾಲೇಜು ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾಗಳನ್ನು ಹಮ್ಮಿಕೊಳ್ಳಲಾಗಿದ್ದು,

ಆರೋಗ್ಯ ಸಿಬ್ಬಂದಿ ಮನೆ-ಮನೆಗೆ ತೆರಳಿ ಲಾರ್ವಾ ಸಮೀಕ್ಷೆ ಮಾಡುತ್ತಿದ್ದಾರೆ. ಅತಿ ಹೆಚ್ಚು ಪ್ರಕರಣಗಳು ವರದಿಯಾದ ಪ್ರದೇಶಗಳ 100 ಮೀಟರ್‌ ಸುತ್ತ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೂಡ

ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಹಿರಿಯ ವೈದ್ಯರಾದ ಡಾ.ಮಂಜುನಾಥ್‌ ನಾಯಕ್‌ (Dr. Manjunath Nayak) ಅವರು ಇದರ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಮೂರು ದಿನಗಳ ನಿರಂತರ ಜ್ವರ, ಮೈ,ಕೈ ನೋವು,

ತಲೆ ನೋವು ಇದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಮತ್ತು ಸೊಳ್ಳೆಗಳು ಕಚ್ಚದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಿ ಎಂದು ಹೇಳಿದರು.

ಡೆಂಗ್ಯೂ ನಿಯಂತ್ರಣ :

ಇದನ್ನು ಓದಿ: ಕ್ಯಾನ್ಸರ್ ಭೀತಿ : ಹೆಚ್ಚುತ್ತಿದೆ 50 ವರ್ಷದೊಳಗಿನವರಲ್ಲಿ ಕ್ಯಾನ್ಸರ್ ಕಾಟ ! ಇದಕ್ಕೆ ಕಾರಣ ಹುಡುಕಲೇ ಬೇಕಾಗಿದೆ

Exit mobile version