Dharwad: ಸೆಪ್ಟೆಂಬರ್ (September) 9 ರಿಂದ 12 ರ ತನಕ ನಡೆಯಲಿರುವ ಕೃಷಿಮೇಳವು ರಾಜ್ಯದ ಅತಿ ದೊಡ್ಡ ಕೃಷಿಮೇಳವೆಂಬ ಹೆಗ್ಗಳಿಕೆಗೆ ಹೆಸರುವಾಸಿಯಾಗಿದ್ದು, ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ವಾರ್ಷಿಕ ಮೇಳವು ನಾಲ್ಕು ದಿನಗಳ ಕಾಲ ನಡೆಯಲಿದೆ. ಹಾಗೂ ಈ ವರ್ಷದ ಮೇಳವು ಸುಸ್ಥಿರ ಕೃಷಿಗಾಗಿ ಸಿರಿಧಾನ್ಯಗಳು ಶೀರ್ಷಿಕೆಯಡಿ ನಡೆಯಲಿದ್ದು, ಈ ಕೃಷಿ ಮೇಳದಲ್ಲಿ ಏನೇನಿರಲಿದೆ ಮತ್ತು ಇದರಿಂದ ರೈತರಿಗೆ ಆಗುವ ಲಾಭವೇನು ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಇದು ಮಳೆ ಕೊರತೆ, ಬರದ ಛಾಯೆಯಿಂದ ತತ್ತರಿಸಿರುವ ರೈತರಿಗೆ ಬಹಳ ಉಪಯುಕ್ತ ಮೇಳವೆಂದೇ ಹೇಳಲಾಗುತ್ತಿದೆ. ಯಾವ ಯಾವ ದಿನ ಏನೇನು ನಡೆಯುತ್ತದೆ ಎಂಬುದರ ಕುರಿತು ಇಲ್ಲೆದೆ ಮಾಹಿತಿ.
೧. ಸೆಪ್ಟೆಂಬರ್ 9 ರಂದು ಬೆಳಿಗ್ಗೆ ೧೧.ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಂದ ಕೃಷಿ ಮೇಲಕ್ಕೆ ಚಾಲನೆ.
೨. ಸೆಪ್ಟೆಂಬರ್ 10 ರಂದು ಬೀಜ ಮೇಳ ಉದ್ಘಾಟನೆ.
೩. ಇನ್ನು 11ನೇ ತಾರೀಖಿನಂದು ಪೌಷ್ಟಿಕತೆ ಮತ್ತು ಆರ್ಥಿಕ ಭದ್ರತೆಗೆ ಸಿರಿಧಾನ್ಯಗಳು ವಿಚಾರ ಸಂಕಿರಣ.
೪. 12ನೇ ತಾರೀಖಿನಂದು ಚರ್ಚಾಗೋಷ್ಠಿ ನಡೆಯಲಿದ್ದು, ಸಂಜೆ ೪ ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ.
ಈ ಕೃಷಿ ಮೇಳದಲ್ಲಿ ಏನೆಲ್ಲಾ ಇರಲಿದೆ
೧. ಕೃಷಿ ಮತ್ತು ಕೃಷಿ ಪೂರಕ ತಂತ್ರಜ್ಞಾನ
೨. ಹೈಟೆಕ್ ತೋಟಗಾರಿಕೆ ಹಾಗು ಫಲಪುಷ್ಪ ಪ್ರದರ್ಶನ
೩. ವಿಸ್ಮಯಕಾರಿ ಕೀಟ ಪ್ರಪಂಚ ಮತ್ತು ಜಾನುವಾರು ಪ್ರದರ್ಶನ

೪. ಸಿರಿಧಾನ್ಯ ಮಾರುಕಟ್ಟೆ, ನೈಸರ್ಗಿಕ ಮತ್ತು ಸಾವಯವ ಕೃಷಿ
೫. ಮಣ್ಣಿನ ಫಲವತ್ತತೆ ರಕ್ಷಣೆ
೬. ಮಳೆ ನೀರು ಸಂಗ್ರಹ ಮತ್ತು ಅಂತರ್ಜಲ ಮರುಪೂರಣ ಹಾಗೂ ಕಿಸಾನ್ ಡ್ರೋನ್ ಬಳಕೆ
ಇಷ್ಟೇ ಅಲ್ಲದೆ ರೈತರ ಆವಿಷ್ಕಾರಗಳು, ಸಾಧಕ ರೈತ ಹಾಗು ರೈತ ಮಹಿಳೆಯರೊಂದಿಗೆ ಸಂವಾದ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಮಳಿಗೆಗಳು ಮತ್ತು ಮಾರಾಟ ಜಾಲ
ಈ ಕೃಷಿ ಮೇಳ ಪ್ರದರ್ಶನದಲ್ಲಿ 199 ಹೈಟೆಕ್ ಮಳಿಗೆ, 351 ಸಾಮಾನ್ಯ ಮಳಿಗೆ, 24 ಯಂತ್ರೋಪಕರಣ ಮಳಿಗೆ, 50 ಜಾನುವಾರು ಪ್ರದರ್ಶನ ಮಳಿಗೆ, 40 ಆಹಾರ ಮಳಿಗೆ ಹಾಗು 10 ಕ್ಷೇತ್ರ ಮಳಿಗೆಯನ್ನು ವ್ಯವಸ್ಥೆ ಮಾಡಲಾಗಿದ್ದು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಸಂಶೋಧಿಸಿರುವ 24 ಹೊಸ ತಳಿಗಳು ಹಾಗು 33 ಕೃಷಿ ತಾಂತ್ರಿಕತೆಗಳು ಬಿಡುಗಡೆಯಾಗಲಿವೆ.
ಮೊದಲ ಬಾರಿಗೆ ಕೃಷಿ ವಿಶ್ವವಿದ್ಯಾಲಯಕ್ಕೆ ಉತ್ಪನ್ನ ಹಾಗು ಮಾರಾಟಕ್ಕೆ ಪರವಾನಗಿ ಪಾತ್ರ ದೊರೆತಿದ್ದು, 25 ಕ್ವಿಂಟಲ್ ವಿವಿಧ ಜೈವಿಕ ಗೊಬ್ಬರಗಳ ಪುಡಿ ಹಾಗೂ 2.6 ಸಾವಿರ ಲೀಟರ್ ವಿವಿಧ ಜೈವಿಕ ಗೊಬ್ಬರ ದ್ರವಗಳು, 16 ಕ್ವಿಂಟಲ್ ಜೈವಿಕ ಗೊಬ್ಬರ ದ್ರವಗಳು, ಅಷ್ಟೇ ಅಲ್ಲದೆ ಪೀಡೆನಾಶಕಗಳು ಸದರಿ ಕೃಷಿ ಮೇಳದಲ್ಲಿ ಮಾರಾಟಕ್ಕೆ ಇಡಲಾಗುತ್ತಿದೆ. ಮತ್ತು ಬಿತ್ತನೆ ಬೀಜಗಳ ಮಾರಾಟ ಕೂಡ ಈ ಮೇಳದಲ್ಲಿ ಇರಲಿದೆ.
ಭವ್ಯಶ್ರೀ ಆರ್.ಜೆ