ಡಿಜಿಟಲ್ ಅರೆಸ್ಟ್ ವಂಚನೆ: ಬೆಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್​ ಹೆಸರಿನಲ್ಲಿ 3 ಕೋಟಿ ಕಳೆದುಕೊಂಡ 7 ಜನರು

Bengaluru: ಬೆಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್​ ಹೆಸರಿನಲ್ಲಿ (Digital Arrest Scam) ಕೋಟ್ಯಾಂತರ ರೂಪಾಯಿ ವಂಚನೆ ಎಸಗಿದ ಪ್ರಕರಣಗಳು ಬೆಳಕಿಗೆ ಬಂದಿವೆ. ಕಳೆದ 15 ದಿನಗಳಲ್ಲಿ ಸೈಬರ್

ಅಪರಾಧಿಗಳು ಏಳು ಮಂದಿಗೆ ಒಟ್ಟು ಮೂರು ಕೋಟಿ ರೂಪಾಯಿ (3 crore rupees for 7 people) ವಂಚಿಸಿದ್ದು, ಈ ಬಗ್ಗೆ ಆಗ್ನೇಯ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ (FIR)

ದಾಖಲಾಗಿದೆ. ಸಾಕಷ್ಟು ಸೈಬರ್ ಕ್ರೈಂಗಳು (Cyber Crimes) ಹೆಚ್ಚಾಗುತ್ತಿದ್ದು, ಇದನ್ನು ನಿಗ್ರಹಿಸಲು ಪೊಲೀಸರು ಶ್ರಮವಹಿಸುತ್ತಿದ್ದಾರೆ. ಈ ನಡುವೆ, ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ

ವಂಚನೆ ಎಸಗಿದ ಪ್ರಕರಣಗಳು ಬೆಳಕಿಗೆ ಬಂದಿದ್ದು, 15 ದಿನಗಳ ಅಂತರದಲ್ಲಿ 7 ಜನರಿಗೆ 3 ಕೋಟಿ ವಂಚಿಸಲಾಗಿದೆ. ಸೈಬರ್ ಅಪರಾಧಿಗಳು ಪೊಲೀಸರು ಅಥವಾ ತನಿಖಾ ಸಂಸ್ಥೆ (Police or

investigative agency) ಹೆಸರು ಹೇಳಿಕೊಂಡು ಜನರಿಗೆ ಕರೆ ಮಾಡಿ (Digital Arrest Scam) ವಂಚಿಸುತ್ತಿದ್ದಾರೆ.

ಈ ಸೈಬರ್​ ವಂಚಕರು ನಿಮ್ಮ ಮನೆಗೆ ಪಾರ್ಸಲ್​ ಬಂದಿದೆ ಎಂದು ಹೇಳುವ ಮೂಲಕ ಪೆಡೆಕ್ಸ್ (FEDEX) ಅಥವಾ ಬೇರೆ ಕಂಪನಿ ಕೊರಿಯರ್​​ನಲ್ಲಿ ಪಾರ್ಸಲ್ ಬಂದಿದೆ. ನಿಮ್ಮ ದಾಖಲಾತಿಗಳು ಡ್ರಗ್ಸ್

ವ್ಯವಹಾರದಲ್ಲಿ (Drugs Business) ತೊಡಗಿದೆ ಎಂದು ಹೇಳಿ ಭಯ ಹುಟ್ಟಿಸುತ್ತಾರೆ. ಬಳಿಕ ಸ್ಕೈಪ್ ಲಿಂಕ್ (Skype link) ನೀಡಿ ಲಾಗ್​ಇನ್​ (Log In) ಆಗುವಂತೆ ತಿಳಿಸುವ ವಂಚಕರು,

ಬಳಿಕ ಪೊಲೀಸ್ ಸಮವಸ್ತ್ರದಲ್ಲೇ ಸಂಭಾಷಣೆ ನಡೆಸುತ್ತಾರೆ. ನೀವು ವಿಚಾರಣೆಗೆ ಹಾಜರಾಗಬೇಕೆಂದು ಬೆದರಿಕೆ ಹಾಕುತ್ತಾರೆ. ವಿಚಾರಣೆಗೆ ವಿನಾಯಿತಿ ಬೇಕಾದರೆ ಹಣ ಹಾಕಿ,

ಇಲ್ಲದಿದ್ದರೆ ಬಂಧಿಸುತ್ತೇವೆ ಎಂದು ಬೇಡಿಕೆ ಇಡುತ್ತಾರೆ.

ಕೆಲವು ಗಂಟೆಗಳ ಕಾಲ ಸ್ಕೈಪ್ ಬಿಟ್ಟು ಬೇರೆ ಕಡೆ ಹೋಗಲು ಬಿಡುವುದಿಲ್ಲ. ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿದೆ ಇಲ್ಲೇ ಇರಬೇಕೆಂದು ಬೆದರಿಕೆ ಹಾಕಲಾಗುತ್ತದೆ. ಇದೇ ರೀತಿ

ಹೆಚ್​ಎಸ್​ಆರ್ ಲೇಔಟ್ (HSR layout) ಮೂಲದ ವೃದ್ಧ ದಂಪತಿಗೆ 1 ಕೋಟಿ 97 ಲಕ್ಷ ರೂಪಾಯಿ ವಂಚನೆ ಎಸಗಿದ್ದಾರೆ. ಇದೇ ರೀತಿ 15 ದಿನಗಳ ಅಂತರದಲ್ಲಿ ಏಳು ಮಂದಿಗೆ 3 ಕೋಟಿ

ವಂಚಿಸಲಾಗಿದೆ.ಸೈಬರ್ ಕಳ್ಳರ ಬಗ್ಗೆ ಪೊಲೀಸರಿಗೆ ಇಲ್ಲಿವರೆಗೂ ಸುಳಿವು ಸಿಕ್ಕಿಲ್ಲ. ರಸ್ತೆಯಲ್ಲಿ ಮನೆಗಳಿಗೆ ನುಗ್ಗಿ ಹಲ್ಲೆ ಮಾಡಿ ದೋಚುವ ಹಣಕ್ಕಿಂತ ಹತ್ತು ಪಟ್ಟು ಹೆಚ್ಚು ಹಣವನ್ನು ಸೈಬರ್

ಕಳ್ಳರು ಕೊಳ್ಳೆ ಹೊಡೆಯುತ್ತಿದ್ದಾರೆ. ಸದ್ಯಕ್ಕೆ ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನು ಓದಿ: ತಲೆನೋವಿನಿಂದ ಬಳಲುತ್ತಿದ್ದೀರಾ? ಹಾಗಾದ್ರೆ ತಲೆನೋವು ನಿವಾರಿಸಲು ಈ ಮನೆಮದ್ದನ್ನು ಪ್ರಯತ್ನಿಸಿ

Exit mobile version