ಕೋವಿಡ್ ಭೀತಿ: ರಾಜ್ಯದ ಸ್ಥಿತಿಗತಿಯನ್ನು ಕೇಂದ್ರ ಆರೋಗ್ಯ ಸಚಿವರಿಗೆ ವಿವರಿಸಿದ ದಿನೇಶ್ ಗುಂಡೂರಾವ್

Bengaluru: ಇಂದು (ಡಿ.20) ಕೋವಿಡ್ (Dinesh Gundurao Explains Covid Condition) ಭಯದ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಹಾಗೂ ಸದ್ಯದ ಸ್ಥಿತಿ ಗತಿಗಳ

ಬಗ್ಗೆ ಚರ್ಚೆ ನಡೆಸುವ ಕುರಿತು ಕೇಂದ್ರ ಆರೋಗ್ಯ ಸಚಿವ ಮನ್ಸೂಕ್ ಮಾಂಡವೀಯ (Mansook Mandaviya) ಮಹತ್ವದ ಸಭೆಯ ನಡೆಸುತ್ತಿದ್ದು, ಸಭೆಯಲ್ಲಿ ರಾಜ್ಯ ಆರೋಗ್ಯ ಸಚಿವ ದಿನೇಶ್

ಗುಂಡೂರಾವ್ (Dinesh Gundurao Explains Covid Condition) ಭಾಗಿಯಾಗಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಸ್ಥಿತಿಗತಿ ಹಾಗೂ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿಕಾಸಸೌಧದಲ್ಲಿ (Vikasa Soudha) ವರ್ಚುವಲ್ ಮೂಲಕ ಸಭೆಯಲ್ಲಿ ಭಾಗಿಯಾಗಿರುವ ದಿನೇಶ್ ಗುಂಡೂರಾವ್

(Dinesh Gundurao) ಅವರು ಮಾಹಿತಿಯನ್ನು ಕೇಂದ್ರ ಆರೋಗ್ಯ ಸಚಿವರ ಸಭೆಯಲ್ಲಿ ವಿವರಿಸಿದ್ದು, ಕೇಂದ್ರದಿಂದ ಕೊರೊನಾ ನಿಯಂತ್ರಣಕ್ಕೆ ಸಹಕಾರ ಕೋರಿದ್ದಾರೆ.

ಕೇಂದ್ರದಿಂದ ನೆರವು ಅಗತ್ಯ
ಕರ್ನಾಟಕದ (Karnataka) ನೆರೆರಾಜ್ಯದಲ್ಲಿ ಕೊರೊನಾ ಹೆಚ್ಚಾಗಿದ್ದು,‌ ಹೀಗಾಗಿ ಕರ್ನಾಟಕದಲ್ಲಿ ಹೆಚ್ಚುವರಿಯಾಗಿ ಐಸಿಯು ವೆಂಟಿಲೇಟರ್ (ICU Ventilator) ಅಗತ್ಯವೂ ಬೀಳಬಹುದು. ‌‌ಹೀಗಾಗಿ

ಕೇಂದ್ರದಿಂದಲೂ ನಮಗೆ ಹೆಚ್ಚಿನ ಸಹಕಾರ ಬೇಕು. ಜೊತೆಗೆ ಔಷಧ ಗಳು ಮೆಡಿಕಲ್ ಕಿಟ್ ಗಳ ಅವಶ್ಯಕತೆ ಕರ್ನಾಟಕ್ಕೆ ಇದೆ ಎಂದು ಸಭೆಯಲ್ಲಿ ದಿನೇಶ್ ಗುಂಡೂರಾವ್ ಕೇಂದ್ರ ಆರೋಗ್ಯ ಸಚಿವರಿಗೆ

ಮಾಹಿತಿಯನ್ನು ‌ನೀಡಿದ್ದಾರೆ.

ಕೇರಳದಲ್ಲಿ (Kerala) ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳದ ಬಗ್ಗೆ ಸಭೆಯಲ್ಲಿ ವಿವರಣೆ ನೀಡಿದ ದಿನೇಶ್ ಗುಂಡೂರಾವ್, ‌ ಕೇರಳ ಗಡಿ ಭಾಗದಲ್ಲಿ ಕರ್ನಾಟಕದ 4 ಜಿಲ್ಲೆಗಳಿವೆ. ಹೀಗಾಗಿ ರಾಜ್ಯದಲ್ಲಿ

ನಾವು ಎಚ್ಚರಿಕೆಯನ್ನ ವಹಿಸಿದ್ದೇವೆ. ಸದ್ಯಕ್ಕೆ ಕರ್ನಾಟಕದಲ್ಲಿ ಭಯಪಡುವಂತಹ ಪರಿಸ್ಥಿತಿ ಇಲ್ಲ ಎಂದು ತಿಳಿಸಿದ್ದಾರೆ.

ನಾವು ಕೋವಿಡ್ ಟೆಸ್ಟಿಂಗ್ (Testing) ಗಳನ್ನು ಹೆಚ್ಚು ಮಾಡ್ತಿದ್ದೇವೆ. ಐಸಿಯು ಬೆಡ್, ವೆಂಟಿಲೇಟರ್ಸ್ (Ventilators), ಆಕ್ಷಿಜನ್ ಅಗತ್ಯ ಮೂಲಸೌಕರ್ಯಗಳನ್ನ ಸನ್ನದ್ದ ಸ್ಥಿತಿಯಲ್ಲಿರಿಕೊಳ್ಳುವಂತೆ

ಎಲ್ಲ ಜಿಲ್ಲಾಸ್ಪತ್ರೆಗಳಿಗೆ ಸೂಚಿಸಲಾಗಿದೆ.‌ ಅಗತ್ಯ ಬಿದ್ದಾಗ ರಾಜ್ಯ ಕೇಂದ್ರದ ನೆರವು ಕೋರಿದಾಗ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಹೆಚ್ಚಿನ ನೆರವು ನೀಡಲು ಮುಂದಾಗಬೇಕು ಎಂದೂ ಮನವಿ ಮಾಡಿದ್ದಾರೆ

ಎಂದು ತಿಳಿದುಬಂದಿದೆ.

ಇನ್ನು ಕೇರಳದಲ್ಲಿ ಕೊರೋನ ರೂಪಾಂತರಿ ತಳಿ ಕಂಡುಬಂದಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವ ಕುರಿತಂತೆ ಮಂಗಳವಾರದಂದು ಆರೋಗ್ಯ ಸಚಿವ ದಿನೇಶ್

ಗುಂಡೂರಾವ್ ಅವರು ಬೆಂಗಳೂರಿನ (Bengaluru) ವಿಕಾಸಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದರು.

ಈ ವೇಳೆ ರೂಪಾಂತರಿ ತಳಿ ಜೆಎನ್1 (JN1) ರಾಜ್ಯದಲ್ಲಿ ಪತ್ತೆಯಾಗಿಲ್ಲ ಎಂಬುದನ್ನು ಆರೋಗ್ಯ ಅಧಿಕಾರಿಗಳು ಸ್ಪಷ್ಟಪಡಿಸಿದರು. ರಾಜ್ಯದ ಜನತೆ ಈ ಬಗ್ಗೆ ಅನಗತ್ಯ ಆತಂಕ ಪಡುವ ಅಗತ್ಯವಿಲ್ಲವಾದರೂ

ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಟೆಸ್ಟ್’ಗಳನ್ನು ಮಾಡುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಇದನ್ನು ಓದಿ: ಅಧ್ಯಕ್ಷೀಯ ಚುನಾವಣೆಯಿಂದಲೇ ಅನರ್ಹ: ಟ್ರಂಪ್ಗೆ ಬಿಗ್ ಶಾಕ್..!

Exit mobile version