ಫ್ಯಾಂಟಮ್ ಚಿತ್ರ “ವಿಕ್ರಾಂತ್ ರೋಣ” ಆಗಲು ಕಾರಣ ಏನೆಂದು ಬಿಚ್ಚಿಟ್ಟ ನಿರ್ದೇಶಕ ಅನೂಪ್ ಭಂಡಾರಿ

ಬೆಂಗಳೂರು, ಜ. 24: ಅಭಿನಯ (phantom-movie-to-become-vikrant-rona) ಚಕ್ರವರ್ತಿ ಕಿಚ್ಚ‌ ಸುದೀಪ್‌ ಅಭಿನಯದ ಫ್ಯಾಂಟಮ್ ಚಿತ್ರದ ಟೈಟಲ್ ಬದಲಾಗಲು ಕಾರಣ ಏನೆಂಬುದನ್ನು ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಬಹಿರಂಗಪಡಿಸಿದ್ದಾರೆ.

ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದ ಫ್ಯಾಂಟಮ್ ‌ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಈ ನಡುವೆ ಚಿತ್ರದ‌ ಟೈಟಲ್ ಬದಲಿಸಲು ನಿರ್ಧರಿಸಿದ ಚಿತ್ರತಂಡ ಫ್ಯಾಂಟಮ್ ಚಿತ್ರವನ್ನು “ವಿಕ್ರಾಂತ್ ರೋಣ” ಎಂದು ಬದಲಿಸಿದೆ. https://youtu.be/6sAgCfAjtgs

ಅಲ್ಲದೆ ಜ.31ರಂದು ದುಬೈನ ಬುರ್ಜ್ ಖಲೀಫಾದಲ್ಲಿ ಚಿತ್ರದ ಟೈಟಲ್ (phantom-movie-to-become-vikrant-rona) ಲಾಂಚ್‌ ಮಾಡುವುದಾಗಿ ಘೋಷಿಸಿದೆ.

ಇದೀಗ ಚಿತ್ರದ ಟೈಟಲ್ ಬದಲಿಸಲು ಕಾರಣ ಏನೆಂಬುದನ್ನು ತಿಳಿಸಿರುವ ನಿರ್ದೇಶಕ ಅನೂಪ್ ಭಂಡಾರಿ, ಫ್ಯಾಂಟಮ್ ಚಿತ್ರದ ಹೆಸರನ್ನು ವಿಕ್ರಾಂತ್ ರೋಣ ಎಂದು ಬದಲಿಸಲು ಅಭಿಮಾನಿಗಳೇ ಕಾರಣವಾಗಿದ್ದಾರೆ. https://vijayatimes.com/murugha-shree-case-continues/

ಚಿತ್ರದ ಚಿತ್ರೀಕರಣ ಶುರುವಾದ ನಂತರದಲ್ಲಿ ಫ್ಯಾಂಟಮ್ ಹೆಸರಿಗಿಂತಲೂ ವಿಕ್ರಾಂತ್ ರೋಣ ಹೆಸರು ದೊಡ್ಡದಾಗಿ ಸದ್ದು ಮಾಡಿತು. ಅಭಿಮಾನಿಗಳು ಮನಸಾರೆ ಇಷ್ಟಪಟ್ಟ ಹೆಸರನ್ನು ವಿಕ್ರಾಂತ್ ರೋಣ ಹೆಸರಿನಲ್ಲಿ ಪರಿಚಯಿಸಬೇಕೆಂಬ ಕಾರಣದಿಂದ ಚಿತ್ರದ ಟೈಟಲ್ ಬದಲಿಸಿರುವುದಾಗಿ ತಿಳಿಸಿದ್ದಾರೆ.

Exit mobile version