4 ನೇ ದಿನಕ್ಕೆ ಕಾಲಿಟ್ಟ ಯಶಸ್ವಿ ಪಾದಯಾತ್ರೆ

dk shivakumar

ರಾಮನಗರ ಜ 12: ಕೊರೊನಾ ಹೆಚ್ಚುತ್ತಿದ್ದರೂ ಕೂಡ ಕಾಂಗ್ರೆಸ್‌ ಪಾದಯಾತ್ರೆ ಯಶಸ್ವಿಯಾಗಿ ಮುನ್ನುಗುತ್ತದೆ.   3ನೇ ದಿನದ ಮೇಕೆದಾಟು ಪಾದಯಾತ್ರೆ ಯಶಸ್ವಿಯಾಗಿದ್ದು, 4ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಬೆಳಗ್ಗೆ 9.30ಕ್ಕೆ ಚುಕ್ಕೇನಹಳ್ಳಿ ಗ್ರಾಮದಿಂದ ಯಾತ್ರೆ ಮತ್ತೆ ಆರಂಭವಾಗಲಿದೆ. ಬಿಜೆಪಿಗರ ರೂಲ್ ಬ್ರೇಕ್ ಮಾಡಿ ಆರೋಪಕ್ಕೆ ಕಾಂಗ್ರೆಸ್ ಟ್ವಿಟರ್ ಮೂಲಕವೇ ತಿವಿದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೂಡ ಸರ್ಕಾರದ ವಿರುದ್ಧ ಮತ್ತೆ ಗುಡುಗಿದ್ದಾರೆ.

ಪಾದಯಾತ್ರೆ ಭಾಷಣದಲ್ಲಿ ಡಿ.ಕೆ.ಶಿವಕುಮಾರ್ ಸರ್ಕಾರದ ವಿರುದ್ಧ ಮತ್ತೆ ಗುಡುಗಿದ್ದರೂ ಪಾದಯಾತ್ರೆ ನಿಲ್ಲಿಸಲು ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ ಅಂತ ಆರೋಪಿಸಿದ್ರು. ಕುಡಿಯುವ ನೀರಿಗಾಗಿ ಮಾಡುತ್ತಿರೋ ಹೋರಾಟ ಇದು. ನೀವು ಇಷ್ಟು ದೊಡ್ಡ ಶಕ್ತಿ ತುಂಬುತ್ತಿದ್ದೀರ. ನಿಮ್ಮ ಕೂಗು ಬೊಮ್ಮಾಯಿ, ಮೋದಿಗೆ ಕೇಳಬೇಕು ಎಂದು ಜೊತೆಗೆ ತಮ್ಮ ವಿರುದ್ಧ ಕೇಸ್ ಹಾಕಿರೋದಕ್ಕೆ ಡಿಕೆಶಿ ವ್ಯಂಗ್ಯ ಮಾಡಿದ್ರು.

4ನೇ ದಿನಕ್ಕೆ ಕಾಲಿಟ್ಟ ಮೇಕೆದಾಟು ಪಾದಯಾತ್ರೆ ಮೇಕೆದಾಟು ಸಂಗಮದಿಂದ ಆರಂಭವಾಗಿರುವ ರಾಜ್ಯ ಕಾಂಗ್ರೆಸ್ ನಾಯಕರ 3ನೇ ದಿನ ಪಾದಯಾತ್ರೆ ಅಂತ್ಯವಾಗಿದೆ. ಮತ್ತೆ ಇವತ್ತು ಬೆಳಗ್ಗೆ 9.30ಕ್ಕೆ ಚುಕ್ಕೇನಹಳ್ಳಿ ಗ್ರಾಮದಿಂದ ಯಾತ್ರೆ ಮತ್ತೆ ಆರಂಭವಾಗಲಿದ್ದು, ರಾತ್ರಿ ವೇಳೆಗೆ ಕಾಂಗ್ರೆಸ್ ಪಾದಯಾತ್ರೆ ರಾಮನಗರವನ್ನ ತಲುಪಲಿದೆ. ಹೀಗಾಗಿ ಇವತ್ತಿನ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಜೆಡಿಎಸ್‌ಗೆ ಟಕ್ಕರ್ ಕೊಡಲು ಡಿಕೆಎಸ್ ಟೀಂ ರೆಡಿಯಾಗಿದೆ. ಜೊತೆಗೆ ದಳ ಕೋಟೆಯಲ್ಲಿ ನೀರಿಗಾಗಿ ನಡಿಗೆ ಮಾಡುವ ಮೂಲಕ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಮುಂದಾಗಲಿದೆ

ಕಳೆದ 10 ವರ್ಷಗಳಿಂದ ರಿಪೇರಿಯೇ ಕಾಣದ ರಸ್ತೆ, ಪಾದಯಾತ್ರೆಗಾಗಿ ಮೂರೇ ದಿನದಲ್ಲಿ ರೆಡಿಯಾಗಿದೆ. ಕನಕಪುರದಿಂದ ಅನಜವಾಡಿಗೆ ಹೋಗುವ ರಸ್ತೆ ಬರೀ ಹೊಂಡ ಗುಂಡಿಗಳಿಂದಲೇ ಕೂಡಿತ್ತು. ಆದ್ರೆ ಪಾದಯಾತ್ರೆಗಾಗಿ ಕೇವಲ ಮೂರೇ ದಿನದಲ್ಲಿ ರಸ್ತೆ ರಿಪೇರಿಯಾಗಿದೆ. ಇದೆ ಅಭಿವೃದ್ದಿ ಮುಂಚೆಯೆ ಯಾಕೆ ಆಗಿಲ್ಲ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

Exit mobile version