ಚನ್ನಪಟ್ಟಣ ಗೆಲ್ಲಲು ಡಿಕೆ ಮಾಸ್ಟರ್ ಪ್ಲಾನ್: ಗೊಂಬೆನಾಡಲ್ಲಿ ಏನೆಲ್ಲಾ ನಡೀತಿದೆ?

Ramanagar: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಇದೀಗ ಭಾರೀ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದು, ಹೇಗಾದರೂ ಮಾಡಿ ಚನ್ನಪಟ್ಟಣವನ್ನು ಗೆಲ್ಲಲು ಡಿಸಿಎಂ ಡಿಕೆ ಶಿವಕುಮಾರ್ (DCM D K Shivakumar) ಭರ್ಜರಿ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದಾರೆ. ಇದೀಗ ಚನ್ನಪಟ್ಟಣದಲ್ಲಿ ನಡೆಯುತ್ತಿರುವ ರಾಜಕೀಯ ತಂತ್ರಳ ವಿವರ ಹೀಗಿದೆ.

By Election

• ಚನ್ನಪಟ್ಟಣ (Channapattana) ಕ್ಷೇತ್ರಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರ ದಂಡನ್ನೇ ಕರೆತಂದು ಸಾರ್ವಜನಿಕ ಸಮಸ್ಯೆಗಳನ್ನ ಬಗೆಹರಿಸುವ ಮೂಲಕ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಡಿಕೆ ಶಿವಕುಮಾರ್ ಮುಂದಾಗಿದ್ದಾರೆ. ಈ ಮೂಲಕ ತಮ್ಮ ವೋಟ್ ಬ್ಯಾಂಕ್ (Vote Bank) ಗಟ್ಟಿಗೊಳಿಸಲು ತಂತ್ರಗಾರಿಕೆ ಹೆಣೆದಿದ್ದಾರೆ.

• ಇನ್ನೊಂದೆಡೆ ಜೆಡಿಎಸ್ (JDS) ಪಕ್ಷದ ನಿಷ್ಠಾವಂತ ಮುಖಂಡರನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯುವ ಕಾರ್ಯವೂ ಸದ್ದಿಲ್ಲದೇ ನಡೆಯುತ್ತಿದೆ.

• ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬಿಜೆಪಿ (BJP) ಹಾಗೂ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಇದಕ್ಕಾಗಿ ಖುದ್ದು ಡಿಕೆ ಸುರೇಶ್ (D K Suresh) ಅವರು ಕ್ಷೇತ್ರದಲ್ಲೇ ಬೀಡುಬಿಟ್ಟಿದ್ದಾರೆ.

• ಕಾಂಗ್ರೆಸ್ (Congress) ಸರ್ಕಾರದಲ್ಲಿರುವ ವಿವಿಧ ಸಮುದಾಯದ ಸಚಿವರನ್ನು ಕ್ಷೇತ್ರಕ್ಕೆ ಕರೆತಂದು ಜಾತಿವಾರು ಸಮುದಾಯಗಳನ್ನು ಸೆಳೆಯುವ ತಂತ್ರ ಹೆಣೆಯಲಾಗಿದೆ.

• ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ ಸಿಪಿ ಯೋಗೇಶ್ವರ್ಗೆ (C P Yogeshwar) ಟಕ್ಕರ್ ಕೊಡಲು ಅವರ ಆಪ್ತರಿಗೆ ಗಾಳ ಹಾಕಲಾಗಿದೆ.

• ವಿವಿಧ ಸಮುದಾಯಗಳ ಧಾರ್ಮಿಕ ಮುಖಂಡರನ್ನು ಸಂಪರ್ಕಿಸಿ ಬೆಂಬಲ ನೀಡುವಂತೆ ಕೋರಲಾಗುತ್ತಿದೆ. ಧಾರ್ಮಿಕ ಮುಖಂಡರ ಮೂಲಕ ಮತ ಗಳಿಸುವ ಪ್ರಯತ್ನ ನಡೆಯುತ್ತಿದೆ.

• ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರಿಗೆ ಗ್ರಾಮ ಪಂಚಾಯಿತಿವಾರು ಮತ ತಂದು ಕೊಡುವ ಟಾಸ್ಕ್ ನೀಡಲಾಗಿದೆ.

• ಚನ್ನಪಟ್ಟಣ ಕ್ಷೇತ್ರಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡುವ ಕಾರ್ಯವೂ ನಡೆಯುತ್ತಿದೆ.

Exit mobile version